ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕೊ: ಎಂಟರ ಘಟ್ಟಕ್ಕೆ ಕರ್ನಾಟಕ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಚಂದರಗಿ (ಬೆಳಗಾವಿ ಜಿಲ್ಲೆ): ಆಲ್‌ರೌಂಡ್ ಆಟ ಪ್ರದರ್ಶಿಸಿ ಲೀಗ್ ಹಂತದ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸಿದ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸ್ಕೂಲ್ ಗೇಮ್ಸ ಫೆಡರೇಷನ್ ಆಫ್ ಇಂಡಿಯಾ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ 17 ವರ್ಷದೊಳಗಿನವರ ರಾಷ್ಟ್ರೀಯ ಕೊಕ್ಕೊ ಟೂರ್ನಿಯ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದರು.

ಬುಧವಾರ ಸಿ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಕರ್ನಾಟಕದ ಬಾಲಕರ ತಂಡ ಬಿಹಾರ ತಂಡವನ್ನು ಸೋಲಿಸಿತು. ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಮಿಂಚಿದ ಅಕ್ಷಯ ಜಂಬಗಿ ಕರ್ನಾಟಕಕ್ಕೆ ಆರಂಭದಲ್ಲೇ ಮುನ್ನಡೆ ತಂದುಕೊಟ್ಟರು. ಅಂತಿಮವಾಗಿ ತಂಡ 15-2ರಿಂದ ಜಯ ಸಾಧಿಸಿತು.

ಹಾಲಿ ಚಾಂಪಿಯನ್ ಮಹಾರಾಷ್ಟ್ರವನ್ನು ಕೊನೆಯ ಲೀಗ್ ಪಂದ್ಯದಲ್ಲಿ 1 ಪಾಯಿಂಟ್‌ನಿಂದ ಮಣಿಸಿದ ಬಾಲಕಿಯರ ತಂಡದವರು ಲೀಗ್‌ನಲ್ಲಿ ಅಜೇಯವಾಗುಳಿದರು. ರೋಮಾಂಚಕ ಪಂದ್ಯದ ವಿರಾಮದ ವೇಳೆಗೆ ಕರ್ನಾಟಕ 5-3 ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿತ್ತು.  ಪ್ರತಿ ಹೋರಾಟ ನಡೆಸಿದ ಮಹಾರಾಷ್ಟ್ರ ಮತ್ತೆ 5 ಪಾಯಿಂಟ್‌ಗಳನ್ನು ಗಳಿಸಿದರೂ 8-7ರಿಂದ ಸೋಲೊಪ್ಪಿಕೊಳ್ಳಲೇಬೇಕಾಯಿತು. ಒಟ್ಟು ಎಂಟೂವರೆ ನಿಮಿಷ ರಕ್ಷಣಾತ್ಮಕವಾಗಿ ಓಡಿದ ಮೇಘಾ ಎದುರಾಳಿಗಳ 4 ಮಂದಿಯನ್ನು ಔಟ್ ಮಾಡಿಯೂ ಗಮನ ಸೆಳೆದರು.

ಫಲಿತಾಂಶ: ಬಾಲಕರ ವಿಭಾಗ:
ಎ ಗುಂಪಿನ ಪಂದ್ಯದಲ್ಲಿ ಹರಿಯಾಣ ತಂಡ ಪುದುಚೇರಿ ತಂಡವನ್ನು (11-7), ಸಿ ಗುಂಪಿನ ಪಂದ್ಯದಲ್ಲಿ ಒರಿಸ್ಸಾ ತಂಡ ಉತ್ತರಾಖಂಡವನ್ನು (13-6) ಮಣಿಸಿದವು. ಇ ಗುಂಪಿನ ಗುಜರಾತ್ ಮತ್ತು ಆಂಧ್ರ ಪ್ರದೇಶ ನಡುವಣ ಪಂದ್ಯ (9-9) ಡ್ರಾ ಆಯಿತು. ಎಫ್ ಗುಂಪಿನ ಪಂದ್ಯದಲ್ಲಿ ಗೋವಾ ತಂಡ ರಾಜಸ್ತಾನ ತಂಡವನ್ನು (13-12) ಹಾಗೂ ಉತ್ತರ ಪ್ರದೇಶ ತಂಡ ರಾಜಸ್ತಾನ ತಂಡವನ್ನು (14-13)ಸೋಲಿಸಿತು.

ಬಾಲಕಿಯರ ವಿಭಾಗ: ಬಾಲಕಿಯರ  ವಿಭಾಗದ ಬಿ ಗುಂಪಿನ ಪಂದ್ಯದಲ್ಲಿ ಛತ್ತೀಸ್‌ಗಡ ತಂಡ ಮಧ್ಯ ಪ್ರದೇಶ ತಂಡವನ್ನು (9-0), ಸಿ ಗುಂಪಿನ ಪಂದ್ಯದಲ್ಲಿ ಒರಿಸ್ಸಾ ತಂಡ ಉತ್ತರಾಂಚಲ ತಂಡವನ್ನು (8-3), ಡಿ ಗುಂಪಿನ ಪಂದ್ಯದಲ್ಲಿ ಚಂಡೀಗಡ ತಂಡ ಜಮ್ಮು ಕಾಶ್ಮೀರ ತಂಡವನ್ನು (9-1), ಪಂಜಾಬ್ ತಂಡ ಎನ್‌ವಿಎಸ್ ತಂಡವನ್ನು (8-4) ಸೋಲಿಸಿದವು.

ಇ ಗುಂಪಿನ ಪಂದ್ಯದಲ್ಲಿ ಆಂಧ್ರಪ್ರದೇಶ ತಂಡ ರಾಜಸ್ತಾನ ತಂಡವನ್ನು (6-3) ಹಾಗೂ ಎಫ್ ಗುಂಪಿನ ಪಂದ್ಯದಲ್ಲಿ ಹರಿಯಾಣ ತಂಡ ವಿದ್ಯಾಭಾರತಿ ತಂಡವನ್ನು (16-5) ಸೋಲಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT