ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕೊ ಪಂದ್ಯಾವಳಿ; ಸೆಮಿಫೈನಲ್‌ಗೆ ಕೋಲಾರ

Last Updated 4 ಸೆಪ್ಟೆಂಬರ್ 2013, 7:05 IST
ಅಕ್ಷರ ಗಾತ್ರ

ಕೋಲಾರ: ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆರಂಭವಾದ ಬೆಂಗಳೂರು ವಿಶ್ವವಿದ್ಯಾಲಯದ ಅಂತರಕಾಲೇಜು ಕೊಕ್ಕೊ ಪಂದ್ಯಾವಳಿಯಲ್ಲಿ ತೀವ್ರ ಸೆಣೆಸಾಟದ ಬಳಿಕ ಅತಿಥೇಯ ಮಹಿಳಾ ಕಾಲೇಜು ಮತ್ತು ಬೆಂಗಳೂರಿನ ವಿವಿಎಸ್,ಮಹಾರಾಣಿ ಕಲಾ-ವಾಣಿಜ್ಯ ಕಾಲೇಜು ಹಾಗೂ ಬಿಎಂಎಸ್ ಕಾಲೇಜು ಸೆಮಿಫೈನಲ್ ಹಂತ ತಲುಪಿದವು.

ಬೆಂಗಳೂರಿನ ಬಿಎಂಎಸ್ ಕಾಲೇಜು, ಎನ್‌ಎಂಕೆಆರ್‌ವಿ ಕಾಲೇಜು, ಚಿತ್ರಕೂಟ ಕಲಾ ಪರಿಷತ್ತು, ವಿಜಯನಗರ ಕಾಲೇಜು, ಕೆ.ಆರ್.ಪುರಂ ಕಾಲೇಜು, ಸೆಂಟ್ ಜಾನ್ಸ್ ಕಾಲೇಜು, ಜ್ಯೋತಿನಿವಾಸ್ ಕಾಲೇಜು, ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು, ರಾಮನಗರದ ಮಹಿಳಾ ಕಾಲೇಜು, ಗೌರಿಬಿದನೂರಿನ ಆಚಾರ್ಯ ಕಾಲೇಜು,  ಆಚಾರ್ಯ ಇನ್ಸ್‌ಟಿಟ್ಯೂಟ್ ಆಫ್ ಗ್ರ್ಯಾಜುಯೇಟ್ ಸೈನ್ಸ್, ಮಾಗಡಿಯ ಎಸ್‌ಇಎ ಕಾಲೇಜು, ವಿವಿಎನ್ ಕಾಲೇಜು, ಚಿಂತಾಮಣಿ, ಬಂಗಾರತಿರುಪತಿ, ಚಿಕ್ಕಬಳ್ಳಾಪುರ ,ಕೆಂಗೇರಿ, ದೊಡ್ಡಬಳ್ಳಾಪುರದ  ಸರ್ಕಾರಿ ಕಾಲೇಜುಗಳು, ಹಾಗೂ ಅತಿಥೇಯ ಮಹಿಳಾ ಕಾಲೇಜಿನ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು.

ಗ್ರಾಮಾಂತರ ಪ್ರದೇಶದ ಕಾಲೇಜುಗಳ ಕ್ರೀಡಾಪಟುಗಳಿಗೆ ಬೆಂಗಳೂರಿನ ಕ್ರೀಡಾಪಟುಗಳು ಹೆಚ್ಚು ಪೈಪೋಟಿ ಒಡ್ಡಿದ ಪರಿಣಾಮ ಪಂದ್ಯಾವಳಿಯು ರೋಚಕ ಸನ್ನಿವೇಶವನ್ನು ಮೂಡಿಸಿತ್ತು. ಬುಧವಾರ ನಡೆಯಲಿರುವ ಪಂದ್ಯಾವಳಿಯಲ್ಲಿ ವಿಜೇತರಾಗುವ ಎರಡು ತಂಡಗಳ ನಡುವೆ ಅಂತಿಮ ಹಣಾಹಣಿ ಏರ್ಪಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT