ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚಿಹೋದ ಟಸ್ಕರ್ಸ್

Last Updated 13 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಏಳು ಎಸೆತಗಳು ಬಾಕಿ ಇರುವಂತೆಯೇ ಪುಣೆ ವಾರಿಯರ್ಸ್‌ಗೆ ಕೊಚ್ಚಿ ಟಸ್ಕರ್ಸ್ ವಿರುದ್ಧ 4 ವಿಕೆಟ್‌ಗಳ ಗೆಲುವು. ಇದಕ್ಕೆ ಕಾರಣ ‘ಪಂದ್ಯ ಶ್ರೇಷ್ಠ’ ಮೊನೀಶ್ ಮಿಶ್ರಾ ಅವರ ಸಮಯೋಚಿತ ಬ್ಯಾಟಿಂಗ್.ಬೌಲಿಂಗ್‌ನಲ್ಲಿ ಬಲವಾಗಿದ್ದು ವೇಯ್ನಾ ಪಾರ್ನೆಲ್ (35ಕ್ಕೆ3). ಇವರ ಪ್ರಭಾವಿ ದಾಳಿ ನೆರವಿನಿಂದ ಪುಣೆ ವಾರಿಯರ್ಸ್ ತಂಡದವರು ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡವನ್ನು 148 ರನ್ ಗಳಿಗೆ ನಿಯಂತ್ರಿಸಿದರು.

ಕೊಚ್ಚಿ ಕಳೆದುಕೊಂಡಿದ್ದು ಎಂಟು ವಿಕೆಟ್. ಈ ಗುರಿ ಬೆನ್ನಟ್ಟಿರುವ ಪುಣೆ ತಂಡ 18.5 ಓವರುಗಳಲ್ಲಿ ಕೇವಲ ಆರು ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ, ವಿಜಯೋತ್ಸವ ಆಚರಿಸಿತು.
ಕೊಚ್ಚಿ ಪರ ರವೀಂದ್ರ ಜಡೇಜಾ ಪ್ರಭಾವಿ ಬ್ಯಾಟಿಂಗ್ ಪ್ರದರ್ಶಿಸಿದರೂ ಅದರಿಂದ ತಂಡಕ್ಕೆ ಭಾರಿ ಪ್ರಯೋಜನವೇನು ಆಗಲಿಲ್ಲ.
 

ಸ್ಕೋರು ವಿವರ

ಕೊಚ್ಚಿ ಟಸ್ಕರ್ಸ್ ಕೇರಳ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 148

ಬ್ರೆಂಡನ್ ಮೆಕ್ಲಮ್ ಸಿ ಉತ್ತಪ್ಪ ಬಿ ಅಲ್ಫೊನ್ಸೊ ಥಾಮಸ್  00
 

ವಿ.ವಿ.ಎಸ್.ಲಕ್ಷ್ಮಣ್ ಬಿ ವೇಯ್ನೊ ಪಾರ್ನೆಲ್  00
 

ಪಾರ್ಥಿವ್ ಪಟೇಲ್ ಸಿ ಗ್ರೇಮ್ ಸ್ಮಿತ್ ಬಿ ವೇಯ್ನಿ ಪಾರ್ನೆಲ್  21
 

ಮಾಹೇಲ ಜಯವರ್ಧನೆ ಸಿ ಉತ್ತಪ್ಪ ಬಿ ವೇಯ್ನಿ ಪಾರ್ನೆಲ್  02
 

ಬ್ರಾಡ್ ಹಾಡ್ಜ್ ಸಿ ಮುರಳಿ ಕಾರ್ತಿಕ್ ಬಿ ರಾಹುಲ್ ಶರ್ಮ  39
 

ರವೀಂದ್ರ ಜಡೇಜಾ ಸಿ ವೇಯ್ನ್ ಪಾರ್ನೆಲ್ ಬಿ ಜೆಸ್ಸಿ ರೈಡರ್  47
 

ರೈಫಿ  ಗೋಮೆಜ್ ಔಟಾಗದೆ  26
 

ಆರ್.ವಿನಯ್ ಕುಮಾರ್ ರನ್‌ಔಟ್ (ಪಾರ್ನೆಲ್/ಉತ್ತಪ್ಪ)  01
 

ಎಸ್.ಶ್ರೀಶಾಂತ್ ರನ್‌ಔಟ್ (ಉತ್ತಪ್ಪ)  01

ಆರ್.ಪಿ.ಸಿಂಗ್ ಔಟಾಗದೆ  00
 

ಇತರೆ: (ಬೈ-1, ಲೆಗ್‌ಬೈ-3, ವೈಡ್-6, ನೋಬಾಲ್-1)  11
 

ವಿಕೆಟ್ ಪತನ: 1-0 (ಮೆಕ್ಲಮ್; 0.1); 2-11 (ಲಕ್ಷ್ಮಣ್; 2.2); 3-13 (ಜಯವರ್ಧನೆ; 2.5); 4-24 (ಪಾರ್ಥಿವ್; 4.5); 5-112(ಹಾಡ್ಜ್; 15.2); 6-113 (ಜಡೇಜಾ; 16.1); 7-117 (ವಿನಯ್; 16.6); 8-147 (ಶ್ರೀಶಾಂತ್; 19.5).
 

ಬೌಲಿಂಗ್: ಅಲ್ಫೊನ್ಸೊ ಥಾಮಸ್ 3-0-31-1, ಶ್ರೀಕಾಂತ್ ವಾಘ್ 2-0-10-0, ವೇಯ್ನೊ ಪಾರ್ನೆಲ್ 4-0-35-3 (ವೈಡ್-1), ಮುರಳಿ ಕಾರ್ತಿಕ್ 4-0-30-0 (ನೋಬಾಲ್-1, ವೈಡ್-1), ರಾಹುಲ್ ಶರ್ಮ 4-0-18-1, ಯುವರಾಜ್ ಸಿಂಗ್ 1-0-12-0, ಜೆಸ್ಸಿ ರೈಡರ್ 2-0-8-1.

ಪುಣೆ ವಾರಿಯರ್ಸ್: 18.5 ಓವರುಗಳಲ್ಲಿ
 

 6 ವಿಕೆಟ್‌ಗಳ ನಷ್ಟಕ್ಕೆ 151
 

ಜೆಸ್ಸಿ ರೈಡರ್ ಸಿ ಮತ್ತು ಬಿ ವಿನಯ್ ಕುಮಾರ್  17
 

ಗ್ರೇಮ್ ಸ್ಮಿತ್ ಸಿ ಆರ್.ಪಿ.ಸಿಂಗ್ ಬಿ ರವೀಂದ್ರ ಜಡೇಜಾ  24
 

ಮಿಥುನ್ ಮನ್ಹಾಸ್ ಸಿ ರವೀಂದ್ರ ಜಡೇಜಾ ಬಿ ಬ್ರಾಡ್ ಹಾಡ್ಜ್  12
 

ಯುವರಾಜ್ ಸಿಂಗ್ ಸಿ ಪಾರ್ಥೀವ್ ಪಟೇಲ್ ಬಿ ಬ್ರಾಡ್ ಹಾಡ್ಜ್ 08
 

ರಾಬಿನ್ ಉತ್ತಪ್ಪ ಬಿ ಬಿ ಮುತ್ತಯ್ಯ ಮುರಳೀಧರನ್  31
 

ಮೊನೀಶ್ ಮಿಶ್ರಾ ಔಟಾಗದೆ  37
 

ವಯ್ನೆ ಪಾರ್ನೆಲ್ ರನ್‌ಔಟ್ (ಗೊಮೇಜ್/ಜಡೇಜಾ)  01
 

ರೋಹಿತ್ ಶರ್ಮ ಔಟಾಗದೆ  10
 

ಇತರೆ: (ಲೆಗ್‌ಬೈ-1, ವೈಡ್-10)  11
 

ವಿಕೆಟ್ ಪತನ: 1-31 (ಜೆಸ್ಸಿ ರೈಡರ್; 3.4), 2-54 (ಗ್ರೇಮ್ ಸ್ಮಿತ್; 7.4), 3-61 (ಮಿಥುನ್ ಮನ್ಹಾಸ್; 9.5), 4-73 (ಯುವರಾಜ್ ಸಿಂಗ್; 11.2), 5-115 (ರಾಬಿನ್ ಉತ್ತಪ್ಪ; 14.4), 6-118 (ವಯ್ನೆ ಪರ್ನೆಲ್; 15.4).
ಬೌಲಿಂಗ್: ಆರ್.ಪಿ.ಸಿಂಗ್ 3-0-30-0, ಎಸ್.ಶ್ರೀಶಾಂತ್ 3-0-21-0 (ವೈಡ್-4), ಮುತ್ತಯ್ಯ ಮುರಳೀಧರನ್ 3.5-0-42-1 (ವೈಡ್-1), ಆರ್.ವಿನಯ್ ಕುಮಾರ್ 3-0-15-1 (ವೈಡ್-3), ರವೀಂದ್ರ ಜಡೇಜಾ 4-0-28-1 (ವೈಡ್-1), ಬ್ರಾಡ್ ಹಾಡ್ಜ್ 2-0-14-2 (ವೈಡ್-1).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT