ಸೂಪರ್ ಕ್ರಿಟಿಕಲ್ ಸ್ಟೀಮ್ ಟರ್ಬೈನ್ ಮತ್ತು ಜನರೇಟರ್‌ಗಳು, ಗರಿಷ್ಠ ಪ್ರಮಾಣದ ದಕ್ಷತೆ ಮತ್ತು ಪರಿಸರಕ್ಕೆ ಹೆಚ್ಚು ಹಾನಿಯಾಗದ ರೀತಿಯಲ್ಲಿ ವಿದ್ಯುತ್ ಉತ್ಪಾದಿಸಲು ನೆರವಾಗಲಿವೆ.ತೋಷಿಬಾ, ಈಗಾಗಲೇ ದೇಶದಲ್ಲಿನ ಇತರ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳಿಗೆ 830 ಮೆಗಾವಾಟ್ ಸಾಮರ್ಥ್ಯದ 5 ಸೂಪರ್ ಕ್ರಿಟಿಕಲ್ ಸ್ಟೀಮ್ ಟರ್ಬೈನ್ ಮತ್ತು ಜನರೇಟರ್‌ಗಳನ್ನು ಪೂರೈಸಿದೆ.