ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಆಹಾರ ಹುಡುಕಿ ಹೊರಟವರು...

Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ಮಡಿಕೇರಿ: ಬಂದದ್ದು ಸಾಹಿತ್ಯ ಜಾತ್ರೆಗೇ ಆದರೂ ಹುಡುಕಿದ್ದು ಮಾತ್ರ ಕೊಡವ ಆಹಾರವನ್ನು. ಇದು ದೂರದ ಊರು­ಗಳಿಂದ ಬಂದ ಸಾಹಿತ್ಯಾಸಕ್ತರ ಸದ್ಯದ ವಿದ್ಯಮಾನ.

ಕೋಳಿಮಾಂಸ, ಕುರಿ ಮಾಂಸ ಹಾಗೂ ಹಂದಿ ಮಾಂಸದಿಂದ ತಯಾರಿ­ಸಲಾದ ವಿವಿಧ ಬಗೆಯ ಆಹಾರ ಖಾದ್ಯಗಳು ಇಲ್ಲಿ ಜನಪ್ರಿಯ. ಅದನ್ನು ಮೊದಲೇ ತಿಳಿದ ಸಾಹಿತ್ಯಾಸಕ್ತರು ಕೊಡಗಿನ ವಿಶಿಷ್ಟ ಮಾಂಸಾಹಾರ ದೊರೆಯುವ ಹೋಟೆಲ್‌ಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಬೆಳಿಗಿನ ಉಪಾಹಾರ, ಮಧ್ಯಾಹ್ನದ ಊಟವನ್ನು ಸಮ್ಮೇಳನದ ಊಟದ ಪ್ರಾಂಗಣದಲ್ಲಿಯೇ ಮಾಡುತ್ತಾರೆ. ಇಲ್ಲಿ ಮಾಂಸಾಹಾರಕ್ಕೆ ಅವಕಾಶ ಇಲ್ಲ.  ರಾತ್ರಿ ಊಟಕ್ಕೆ ಕೊಡಗು ಸ್ಪೆಷಲ್‌ ಹುಡುಕಾಟ. ಇಲ್ಲಿನ ಹಲವು ಹೋಟೆಲ್, ರೆಸಾರ್ಟ್, ಹೋಂ­ಸ್ಟೇಗಳು ವಿಶೇಷ ಖಾದ್ಯಗಳನ್ನು ಊಣ­ಬಡಿ­ಸಲು ಮುಂದಾಗಿವೆ.
ಕೊಡವ ಪದ್ಧತಿ­ಯಲ್ಲಿ ಕೇವಲ ಮಾಂಸಾಹಾರಕ್ಕೆ ಪ್ರಾಧಾನ್ ನೀಡ­ಲಾಗಿದೆ ಎಂದು ಸಸ್ಯಾಹಾರಿಗಳು ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಸಸ್ಯಾಹಾರಿ­ಗಳಿಗೆ ಕಡಂ­ಬಟ್ಟು, ವೆಜ್ ಕುರು ಕರಿ, ಬಿನ್ಸ್ ಕಾಳು ಕರಿ, ಕೂಟು ಕರಿ, ಮಿಕ್ಸ್ ಕರಿ, ಬಿದಿರು ಕರಿ (ಬೈಂಬಳೆ) ದೊರೆಯುತ್ತದೆ.

ನಗರದ ಅಂಚೆ ಕಚೇರಿ ಬಳಿ ಇರುವ ಕೂರ್ಗ್‌ ಕುಸಿನ್, ಪೊಲೀಸ್‌ ಠಾಣೆ ಸಮೀಪದಲ್ಲಿರುವ ಫೋರ್ಟ್ ಮರ್ಕೇರಾ, ಫೋಕ್ಸಿ ಫುಡ್‌ ಹೋಟೆಲ್‌ ಸೇರಿದಂತೆ ಇನ್ನಿತರ ಹೋಟೆಲ್ ಗಳಲ್ಲಿ ಕೊಡವ ಪದ್ಧತಿಯ ಆಹಾರ ಲಭ್ಯವಿದೆ.

ಹಂದಿ ಕರಿ, ಚಿಕನ್‌ ಕರಿ, ಮಟನ್‌ ಕರಿ, ಫಿಷ್‌ ಫ್ರೈ, ಕಡಂಬುಟ್ಟು, ಬಿನ್ಸ್‌ಕರಿ, ಬೆಳಿಗ್ಗೆ ಸಮಯದಲ್ಲಿ ಅಕ್ಕಿ ರೊಟ್ಟಿ, ಕಡಂಬುಟ್ಟು, ನೂಲ್‌ ಪುಟ್ಟು, ಪಾಲ್‌ಪುಟ್ಟ್, ಎಳ್ಳು ಚೆಟ್ನಿ ದೊರೆಯುತ್ತದೆ.

ಕಡಂಬುಟ್ಟು, ನೂಲ್‌ ಪುಟ್‌, ಅಕ್ಕಿರೊಟ್ಟಿ, ನೂಲ್‌ ಪುಟ್ಟು, ಘೀ ರೈಸ್‌, ಹಂದಿ ಕರಿ, ಪ್ರೈ, ಚಾಪ್ಸ್‌, ಚಿಲ್ಲಿ ಪೋರ್ಕ್‌, ಬ್ಯಾಬ್‌ ವಿಥ್‌ ಪೋರ್ಕ್‌ (ಬೈಂಬಳೆ) ಚಿಕನ್‌– ಚಿಕನ್ ಕರಿ, ಪೆಪರ್‌ ಪ್ರೈ, ಚಿಲ್ಲಿ ಚಿಕ್ಕನ್‌, ಮಟನ್‌– ಕರಿ, ಪ್ರೈ, ಫಿಷ್‌ – ಕರಿ, ಮೊಟ್ಟೆ ಕರಿ, ಮೊಟ್ಟೆ ಮೊಸಾಲ ವೆಜ್‌ ಕುರು ಕರಿ ಬಿನ್ಸಸ ಕಾಳು ಕರಿ, ಕೂಟು ಕರಿ, ಮಿಕ್ಸ್‌ ಕಾರಿ, ಬ್ಯಾಬ್‌ ಕರಿ (ಬೈಂಬಳೆ), ಬೆಲ್ಲದ ಕಾಫಿ ದೊರೆಯುತ್ತದೆ.

ಮಾಂಸ ವ್ಯಾಪಾರ ಜೋರು:  ಕೋಳಿ ಮಾಂಸ, ಕುರಿ ಮಾಂಸ, ಹಂದಿ ಮಾಂಸ ಮಾರಾಟವೂ ಜೋರಾಗಿದೆ. ಬಹುತೇಕ ಹೋಟೆಲ್‌ ರೆಸಾರ್ಟ್‌ಗಳು ಹೋಲ್‌ಸೇಲ್‌ನಲ್ಲಿ ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. 

ಸಮ್ಮೇಳನದಲ್ಲಿ ಇಂದಿನ ಊಟದ ಮೆನು:  ಬೆಳಿಗ್ಗೆ 7.30ಕ್ಕೆ– ಅವಲಕ್ಕಿ ಒಗ್ಗರಣೆ, ಅಕ್ಕಿ ರೊಟ್ಟಿ, ಬೀನ್ಸ್‌ ಕಾಳು ಕರಿ, ಕ್ಯಾರೇಟ್‌ ಹಲ್ವ, ಕಾಫಿ/ ಟೀ.  ಬೆಳಿಗ್ಗೆ 10 ಗಂಟೆಗೆ ಬಾದಾಮಿ ಹಾಲು.

ಮಧ್ಯಾಹ್ನ 12ಗಂಟೆಗೆ– ಪೂರಿ ಸಾಗು, ಅನ್ನ ಸಂಬಾರ್‌, ರಸಂ, ಪಲ್ಯ, ಉಪ್ಪಿನಕಾಯಿ, ಶಾವಿಗೆ, ಪಾಯಸ, ಮಜ್ಜಿಗೆ.

ಸಂಜೆ 4ಗಂಟೆಗೆ ಕಾಫಿ/ಟೀ, ಈರುಳ್ಳಿ ಪಕೋಡ.  ರಾತ್ರಿ 7.30ಕ್ಕೆ ಅನ್ನ ಸಂಬಾರ್‌, ರಸಂ, ಪಲ್ಯ, ಉಪ್ಪಿನ ಕಾಯಿ, ಚಪಾತಿ, ಕುರ್ಮಾ, ಗೋಬಿ ಮಂಚೂರಿ, ಖರ್ಜೂರ್‌ ಪಾಯಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT