ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಸಾಕ್ಷ್ಯಚಿತ್ರದ ಸಿ.ಡಿ ಬಿಡುಗಡೆ

Last Updated 1 ಏಪ್ರಿಲ್ 2013, 19:13 IST
ಅಕ್ಷರ ಗಾತ್ರ

ಬೆಂಗಳೂರು: `ಕೊಡವ ಸಾಹಿತ್ಯ ಕಲೆ ಪರಿಷತ್ತು' ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಡವ ಭಾಷೆಗೆ ಡಬ್ ಮಾಡಲಾಗಿರುವ `ನೇತ್ರಾವತಿ' ಸಾಕ್ಷ್ಯಚಿತ್ರದ ಸಿ.ಡಿ ಮತ್ತು ಡಿ.ವಿ.ಡಿ.ಗಳನ್ನು ಬಿಡುಗಡೆ ಮಾಡಲಾಯಿತು.

ಪರಿಷತ್‌ನ ಅಧ್ಯಕ್ಷ ಸೋಮೆಯಂಡ ಬೋಸು ಬೆಳ್ಳಿಯಪ್ಪ ಮಾತನಾಡಿ, ಕನ್ನಡದಲ್ಲಿ ರವಿಕಿರಣ್ ಅವರು ನಿರ್ದೇಶಿಸಿರುವ `ನೇತ್ರಾವತಿ' ಸಾಕ್ಷ್ಯಚಿತ್ರವನ್ನು ಕೊಡವ ಭಾಷೆಗೆ ಡಬ್ ಮಾಡಲಾಗಿದೆ ಎಂದರು.ಕೊಡವ ಭಾಷೆಯಲ್ಲಿ ಸಾಕಷ್ಟು ಸಾಕ್ಷ್ಯಚಿತ್ರಗಳು, ಧಾರಾವಾಹಿಗಳು ಬರುತ್ತಿವೆ. ಆದರೆ, ಭಾಷೆಯ ಕಾರಣಕ್ಕಾಗಿ ಕೊಡವ ಸಾಕ್ಷ್ಯಚಿತ್ರಗಳು ಹೆಚ್ಚು ಜನರನ್ನು ತಲುಪುತ್ತಿಲ್ಲ. ಪ್ರೇಕ್ಷಕರು ಇತರ ಭಾಷೆಯ ಚಿತ್ರಗಳನ್ನು ಪ್ರೋತ್ಸಾಹಿಸಿದಂತೆ ಕೊಡವ ಭಾಷೆಯ ಚಿತ್ರಗಳಿಗೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ನಟ ಕುಶಾಲಪ್ಪ ಮಾತನಾಡಿ, ಉತ್ತಮ ಚಿತ್ರಕಥೆ, ನಟನೆ, ಸಂಗೀತವನ್ನು ಎಲ್ಲಾ ಭಾಷೆಯ ಪ್ರೇಕ್ಷಕರು ಬೆಂಬಲಿಸುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT