ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡೆಗಳ ಹಳ್ಳಿ ಕಲೆಯ ಹಳ್ಳಿ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬಹುತೇಕರಿಗೆ ಕೊಡೆ ಮಳೆಯಿಂದ ರಕ್ಷಿಸುವ, ಬಿಸಿಲಿನಿಂದ ಕಾಪಾಡುವ ಸಾಧನ. ಆದರೆ, ಥಾಯ್ಲೆಂಡ್‌ನ ಬೋ ಸಂಗ್ ಎಂಬ ಹಳ್ಳಿಗರಿಗೆ ಅದು ಉತ್ಸವದ ಭಾಗ. ಚಿಯಾಂಗ್ ಮಾಯ್ ನಗರದ ಸಮೀಪ ಇರುವ ಬೋ ಸಂಗ್‌ನಲ್ಲಿ ಪ್ರತಿವರ್ಷ ಮೂರು ದಿನ ಕೊಡೆಗಳ ಜಾತ್ರೆ ನಡೆಯುತ್ತದೆ.

ಬರ್ಮಾದ ಕೊಡೆಗಳನ್ನು ಮಾಡುವವರಿಂದ ತರಬೇತಿ ಪಡೆದ ಹಿರಿಯರು ಈ ಹಳ್ಳಿಯಲ್ಲಿ ಚಿಕ್ಕ ಮಕ್ಕಳಿಗೇ ಕೊಡೆ ಮಾಡುವ ಕಲೆಯನ್ನು ಕಲಿಸುತ್ತಾರೆ. ಕಾಗದದಿಂದ ಹಿಡಿದು ರೇಷ್ಮೆ ಬಟ್ಟೆವರೆಗೆ ವಿವಿಧ ಪರಿಕರಗಳನ್ನು ಬಳಸಿ ಇಲ್ಲಿನ ಕುಶಲಕರ್ಮಿಗಳು ಕೊಡೆ ಸಿದ್ಧಪಡಿಸುತ್ತಾರೆ. ಥಾಯ್ಲೆಂಡ್‌ಗೆ ಬರುವ ಪ್ರವಾಸಿಗರು ಬೋ ಸಂಗ್‌ಗೆ ಭೇಟಿ ನೀಡದೆ ಹೋಗುವುದು ಅಪರೂಪ. ಇಲ್ಲಿ ಕೊಡೆಗಳನ್ನು ಕೊಂಡುಕೊಳ್ಳುವುದಷ್ಟೇ ಅಲ್ಲ, ಅವುಗಳು ರೂಪುಗೊಳ್ಳುವ ಬಗೆಯನ್ನೂ ಕಾಣಬಹುದು.

ಮರದ ಕಾಂಡಗಳಿಂದ ಸಿದ್ಧಪಡಿಸಿದ ಕಾಗದ, ಬಿದಿರು ಬಳಸಿ ಹೂವುಗಳ ಬಣ್ಣವನ್ನೇ ಉಪಯೋಗಿಸಿ ಬಣ್ಣಬಣ್ಣದ ಕುಸುರಿ ಕಲೆ ತುಂಬಿದ ಕೊಡೆಗಳನ್ನು ಇಲ್ಲಿನವರು ರೂಪಿಸುತ್ತಾರೆ. ಪ್ರತಿವರ್ಷ ಜನವರಿ 15ರಿಂದ 17ರವರೆಗೆ ಹಳ್ಳಿಯ ಎಲ್ಲಾ ಅಂಗಡಿಗಳಲ್ಲೂ ಕೊಡೆಗಳು ಬಿಚ್ಚಿಕೊಳ್ಳುತ್ತವೆ. ದೀಪಾಲಂಕಾರದ ಸಹಿತ ಕೊಡೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ನೃತ್ಯಗಳು ಕೂಡ ಉತ್ಸವಕ್ಕೆ ಮೆರುಗು ಕೊಡುತ್ತವೆ. ಕೊಡೆಗಳ ಮಹತ್ವ ಸಾರಲೆಂದೇ ಫ್ಯಾಷನ್ ಶೋಗಳು ನಡೆಯುತ್ತವೆ.
ಲಾಸ್ ಏಂಜಲೀಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪ್ರವಾಸೋದ್ಯಮದ ವಿಚಾರ ಸಂಕಿರಣದಲ್ಲಿ ಕೊಟ್ಟ ನೆನಪಿನ ಕಾಣಿಕೆಗಳಲ್ಲಿ ಅತಿ ಹೆಚ್ಚು ಗಮನ ಸೆಳೆದ ಬೋ ಸಂಗ್ ಕೊಡೆಗಳಿಗೆ ಈಗ ಅಂತರರಾಷ್ಟ್ರೀಯ ಮಾರುಕಟ್ಟೆ ಉಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT