ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆ ಕ್ಷಣದಲ್ಲಿ ನಿರ್ಧಾರ ಕೈಬಿಟ್ಟಿದ್ದ ಪಿವಿಎನ್

ಪೋಖರಣ್ ಪರೀಕ್ಷೆ: ರಹಸ್ಯ ಮಾಹಿತಿ ಬಹಿರಂಗ
Last Updated 23 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಆರ್ಥಿಕ ದಿಗ್ಬಂಧನ ಭೀತಿ, ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಮತ್ತು ಭಾರತದ ಆರ್ಥಿಕ ಕ್ರಾಂತಿಯ ರೂವಾರಿ ಎಂಬ ಹೆಗ್ಗಳಿಕೆ ಪಡೆಯಬೇಕು ಎನ್ನುವ ಆಕಾಂಕ್ಷೆಯೇ ಅಂದಿನ ಪ್ರಧಾನಿ ನರಸಿಂಹ ರಾವ್ ಅವರನ್ನು ಪರಮಾಣು ಪರೀಕ್ಷೆ ನಡೆಸದಂತೆ ಕಟ್ಟಿಹಾಕಿದ್ದವು.

ರಾವ್ ಅವರ ಈ ನಿಲುವಿನ ಬಗ್ಗೆ 1996ರಲ್ಲಿ ಬಿಲ್ ಕ್ಲಿಂಟನ್ ಆಡಳಿತವು ಈ ರೀತಿ ತೀರ್ಮಾನಕ್ಕೆ ಬಂದಿತ್ತು. ಅಮೆರಿಕದ ರಾಷ್ಟ್ರೀಯ ಪತ್ರಾಗಾರದ ರಹಸ್ಯ ಮಾಹಿತಿ ಶುಕ್ರವಾರ ಬಿಡುಗಡೆಯಾಗಿದ್ದು, ಅದರಲ್ಲಿ ಈ ಅಂಶಗಳು ಅಡಕವಾಗಿವೆ.

ಅಂತರರಾಷ್ಟ್ರೀಯ ಸಮುದಾಯದ ತೀವ್ರ ಒತ್ತಡದಿಂದ ಕೊನೆ ಗಳಿಗೆಯಲ್ಲಿ ರಾವ್ ಅವರು ಪರಮಾಣು ಪರೀಕ್ಷೆ ನಿರ್ಧಾರಿಂದ ಹಿಂದೆ ಸರಿದರು ಎಂದು ಅದರಲ್ಲಿ ಹೇಳಲಾಗಿದೆ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ 1995-96ರಲ್ಲಿ ಪೋಖರಣ್‌ನಲ್ಲಿ ಪರಮಾಣು ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಈ ಬಗ್ಗೆ ಅಮೆರಿಕದ ಗುಪ್ತಚರ ಇಲಾಖೆಗಳು ಕ್ಲಿಂಟನ್ ಆಡಳಿತಕ್ಕೆ ಸಚಿತ್ರ ವರದಿಗಳನ್ನು ನೀಡಿದ್ದವು. ಪರೀಕ್ಷೆ ನಡೆಸದಂತೆ ಅಂತರರಾಷ್ಟ್ರೀಯ ಸಮುದಾಯದಿಂದ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಕೊನೆ ಗಳಿಗೆಯಲ್ಲಿ ರಾವ್ ತಮ್ಮ ನಿರ್ಧಾರದಿಂದ ಹಿಂದೆ ಸರಿದರು ಎಂಬ ವಿವರಗಳು ಇದರಲ್ಲಿ ಇವೆ.

`ರಾವ್ ಮರು ಆಯ್ಕೆಗೆ ಪರಮಾಣು ಪರೀಕ್ಷೆಯು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಪರೀಕ್ಷೆ ನಡೆಸದೆಯೂ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯೂ ಹೆಚ್ಚಿತ್ತು. ಹಾಗಾಗಿಯೇ ರಾವ್ ಪರಮಾಣು ಪರೀಕ್ಷೆಯ ನಿರ್ಧಾರಿಂದ ಹಿಂದೆ ಸರಿದರು' ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT