ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಗೆದ್ದ ಸೈನಾ

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕ್ವಾಲಾಲಂಪುರ (ಪಿಟಿಐ/ ಐಎಎನ್‌ಎಸ್‌): ಮೊದಲ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದ್ದ ಭಾರತದ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಸೂಪರ್ ಸರಣಿಯ ಫೈನಲ್ಸ್‌ನ ಮೂರನೇ ಪಂದ್ಯದಲ್ಲಿ ಗೆಲುವು ಪಡೆದರು.

‘ಬಿ’ ಗುಂಪಿನ ಕೊನೆಯ ಪಂದ್ಯದಲ್ಲಿ  ಹೈದರಾಬಾದ್‌ನ ಆಟಗಾರ್ತಿ 21–11, 17–21, 21–13 ರಲ್ಲಿ ಕೊರಿಯಾದ ಯಿಯೊನ್ ಜೂ ಬೇ ಅವರನ್ನು ಮಣಿಸಿದರು.  ಇದರೊಂದಿಗೆ ಭಾರತದ ಆಟಗಾರ್ತಿ ಬೇ ವಿರುದ್ಧ ಒಟ್ಟು ಆರು ಜಯ ಪಡೆದಂತಾಯಿತು. ಆದರೂ, ಸೈನಾಗೆ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದ್ದರೆ, ನಾಲ್ಕರ ಘಟ್ಟದ ಪ್ರವೇಶಿಸಲು ಅವಕಾಶವಿತ್ತು.

ವಿಶ್ವ ರ್‍್ಯಾಂಕ್‌ನಲ್ಲಿ ಆರನೇ ಸ್ಥಾನ ಹೊಂದಿರುವ ಸೈನಾ ಸತತ ಸೋಲು ಅನುಭವಿಸಿದ್ದರಿಂದ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದರು. ಪಂದ್ಯದ ಆರಂ ಭದಿಂದಲೂ ಆಕ್ರಮಣಕಾರಿ ಆಟವಾಡಿ 6–6 ರಲ್ಲಿ ಸಮಬಲ ಸಾಧಿಸಿದ್ದರು. ನಂತರವೂ ಚುರುಕಿನ ಪ್ರದರ್ಶನ ತೋರಿ 15–7 ರಲ್ಲಿ ಮುನ್ನಡೆ ಗಳಿಸಿದರು. ಆದರೆ ಎದುರಾಳಿ ಆಟಗಾರ್ತಿ ಮೂರು ಪಾಯಿಂಟ್ ಗಳಿಸಿ ಅಂತರವನ್ನು 10–15 ಕ್ಕೆ  ತಗ್ಗಿಸಿದರು.

ಆದರೆ ಎರಡನೇ ಗೇಮ್‌ನಲ್ಲಿ ತೀವ್ರ ಪ್ರತಿರೋಧ ತೋರಿದ ಬೇ ವಿರಾಮದ ವೇಳೆಗೆ 11–10ರಿಂದ ಮುನ್ನಡೆ ಸಾಧಿಸಿದರು. ನಂತರವೂ ಪ್ರಬಲ ಸ್ಮ್ಯಾಷ್‌ಗಳನ್ನು ಸಿಡಿಸಿ ಮುನ್ನಡೆಯನ್ನು 15–12 ಕ್ಕೆ ಹೆಚ್ಚಿಸಿಕೊಂಡರು. ತೀವ್ರ ಪೈಪೋಟಿಯಿಂದ ಕೂಡಿದ್ದ  ಗೇಮ್‌ನಲ್ಲಿ ಅಂತಿಮವಾಗಿ ಬೇ 21–17ರಿಂದ ಗೆಲುವು ತಮ್ಮದಾಗಿಸಿಕೊಂಡರು. ಆದ್ದ ರಿಂದ ಮೂರನೇ ಮತ್ತು ನಿರ್ಣಾಯಕ ಗೇಮ್‌ ಕುತೂಹಲಕ್ಕೆ ಕಾರಣವಾಗಿತ್ತು.

ಈ ಗೇಮ್‌ನಲ್ಲಿ ಸೈನಾ ಆರಂಭದಲ್ಲಿ 4–0 ರಿಂದ ಮುನ್ನಡೆ ಗಳಿಸಿದರು. ನಂತ ರವೂ ಪ್ರಭಾವಿ ಆಟವಾಡಿ ಎದುರಾಳಿ ಆಟಗಾರ್ತಿಯ ಮೇಲೆ  ಹಿಡಿತ ಸಾಧಿಸಿ ಗೆಲುವಿನ ನಗೆ ಚೆಲ್ಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT