ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ: ಕತ್ತಲಗಿರಿಯಲ್ಲಿ ಭತ್ತದ ಕೃಷಿ ಕ್ಷೇತ್ರೋತ್ಸವ

Last Updated 13 ಡಿಸೆಂಬರ್ 2013, 8:44 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಹಿರೇಕೊಡಿಗೆ ಗ್ರಾ.ಪಂ. ವ್ಯಾಪ್ತಿಯ ಕತ್ತಲಗಿರಿಯ ಪ್ರಗತಿಪರ ಸಾವಯವ ಕೃಷಿಕ ಮಂಜು­ನಾಥ­ಮೂರ್ತಿ ಅವರ ಕೃಷಿ ಕ್ಷೇತ್ರ­ದಲ್ಲಿ ಗುರುವಾರ ಕೃಷಿ ಇಲಾಖೆ ವತಿಯಿಂದ ಭೂಚೇತನ ಕಾರ್ಯಕ್ರಮದಡಿ ಭತ್ತದ ಕ್ಷೇತ್ರೋತ್ಸವ ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪುರುಷೋತ್ತಮ್‌ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮಂಜುನಾಥಮೂರ್ತಿ ಅವರ 1.5 ಎಕರೆ ತರಿ ಭೂಮಿಯಲ್ಲಿ ಯಾಂತ್ರೀಕೃತ ನಾಟಿ ಮಾಡಿರುವು­ದಲ್ಲದೆ ಸಕಾಲದಲ್ಲಿ ಲಘು ಪೋಷ­ಕಾಂಶಗಳನ್ನು ಬೆಳೆಗೆ ಒದಗಿಸಿರುವುದ­ರಿಂದ ಶೇ 20ರಷ್ಟು ಅಧಿಕ ಇಳುವರಿ ಪಡೆಯಲು ಸಾಧ್ಯವಾಗಿದೆ ಎಂದರು.

ಕೃಷಿಕ ಮಂಜುನಾಥ ಮೂರ್ತಿ ಮಾತನಾಡಿ, ಕೃಷಿ ಇಲಾಖೆ ಕ್ಷೇತ್ರಪಾಠ­ಶಾಲೆ ಮೂಲಕ ಉಪಯುಕ್ತ ಮಾಹಿತಿ ನೀಡಿತು. ಕೃಷಿ ಅನುವುಗಾರ ರಾಜಾ­ಶಂಕರ್ ಮಾರ್ಗದರ್ಶನದಲ್ಲಿ ಬೊರೆಕ್ಸ್, ಜಿಂಕ್ ಸಲ್ಫೇಟ್ ಪೋಷ­ಕಾಂಶ ಒದಗಿಸಿದ್ದು, ಪಿ.ಇ.ಟಿ. ತಳಿ ಉತ್ತಮ ಇಳುವರಿ ನೀಡಿದೆ ಎಂದರು.

ಭತ್ತದ ಗದ್ದೆಯ ಕಾಲು ಗುಂಟೆ ಪ್ರದೇಶದ ಕೊಯ್ಲು ನಡೆಸಿ, ಭತ್ತ ಬೇರ್ಪಡಿಸಿ ತೂಕ ಮಾಡಲಾ­ಯಿತು. ಎಕರೆಗೆ 23.10 ಕ್ವಿಂಟಲ್ ಭತ್ತ ಹಾಗೂ 51 ಕ್ವಿಂಟಲ್ ಹುಲ್ಲು ದೊರೆಯುವುದೆಂದು ಪ್ರಮಾ­ಣೀಕರಿಸ­ಲಾಯಿತು. ಕೃಷಿಕ ಲಕ್ಷ್ಮೀನಾರಾ­ಯಣ್, ಅಧಿಕಾರಿ ರೂಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT