ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ: ಬೇಕರಿಗೆ ಬೆಂಕಿ ತಗುಲಿ ಹಾನಿ

Last Updated 4 ಫೆಬ್ರುವರಿ 2011, 9:00 IST
ಅಕ್ಷರ ಗಾತ್ರ

ಕೊಪ್ಪ: ಪಟ್ಟಣದ ಬಸ್ ನಿಲ್ದಾಣದಲಿರುವ ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಯಲ್ಲಿರುವ ಬೇಕರಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಸುಟ್ಟು ಕರಕಲಾಯಿತು.ಆಲ್ವಿನ್ ಡಿಸೋಜ ಅವರು ನಡೆಸು ತ್ತಿರುವ ಬೇಕರಿಗೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ತಗಲಿತೆಂದು ಹೇಳ ಲಾಗಿದ್ದು, ಮಳಿಗೆಯ ಮೇಲ್ ಛಾವಣಿ, ಬೇಕರಿ ತಿನಿಸುಗಳು, ಪಾನೀಯಗಳು, ವಿದ್ಯುತ್ ಓವನ್, ಗ್ರೈಂಡರ್, ಪ್ರೀಜ್ ಹಾಗೂ ಪೀಠೋಪಕರಣಗಳು ಬೆಂಕಿಗೆ ಆಹುತಿಯಾದವು.

ಬೇಕರಿಯಲ್ಲಿ ಕೆಲಸ ನಿರ್ವಹಿಸುತಿದ್ದ ಕಾರ್ಮಿಕರಿಬ್ಬರು, ಛಾವಣಿಯ ಹೆಂಚು ತೆಗೆದು ಹೊರಬರುವ ಮೂಲಕ ಪ್ರಾಣಾಪಾಯದಿಂದ  ಪಾರಾದರು. ಬೇಕರಿ ಸಂಪೂರ್ಣ ಹಾನಿಗೊಳಗಾಗಿದ್ದು ಪಕ್ಕದ ಮಳಿಗೆಗೂ ಹಾನಿ ಸಂಭವಿಸಿದೆ.ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಸಫಲವಾಯಿತು. ಬೆಂಕಿ ಬೇರೆ ಮಳಿಗೆಗಳಿಗೂ ಆವರಿಸುವ ಆತಂಕ ಎದುರಾಗಿತ್ತು. ಸುಮಾರು ರೂ. 4.80 ಲಕ್ಷ ಹಾನಿ ಸಂಭವಿಸಿದೆ ಎಂದು ಬೇಕರಿ ಮಾಲೀಕ ಆಲ್ವಿನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಿಶೋರ್ ಪೇಜಾವರ್ ಬೆಂಕಿ ಆಕಸ್ಮಿಕ ಘಟನೆ ಹಿನ್ನೆಲೆಯಲ್ಲಿ ತುರ್ತು ವಿಶೇಷ ಸಭೆ ನಡೆಸಿ, ತತ್‌ಕ್ಷಣದಲ್ಲಿ ಬೇಕರಿ ಕಟ್ಟಡಕ್ಕೆ ದುರಸ್ತಿಗೊಳಿಸಲು ನಿರ್ಣಯ ಅಂಗೀಕರಿಸಿದರು. ಪಂಚಾಯಿತಿ ಮಳಿಗೆ ಗಳಲ್ಲಿ ಇನ್ನು ಮುಂದೆ ಬೇಕರಿ ಪದಾರ್ಥ ಬೇಯಿಸದಂತೆ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು. ಪಟ್ಟಣದಲ್ಲಿ ಅಗ್ನಿಶಾಮಕ ಘಟಕ ಸ್ಥಾಪಿಸಿದ ಶಾಸಕ ಡಿ.ಎನ್.ಜೀವರಾಜ್ ಅವರನ್ನು ಇದೇ ವೇಲೆ ಅಭಿನಂದಿಸಲಾಯಿತು.

ಶ್ರೀಗಂಧ ಫಾರಂಗೆ ಬೆಂಕಿ
 ದೋರನಾಳು(ತರೀಕೆರೆ):
ತರೀಕೆರೆ ತಾಲ್ಲೂಕಿನ ದೋರನಾಳು ಗ್ರಾಮದ ಚಂದ್ರಮೌಳೇಶ್ವರ ಎಂಬುವವರ ತೆಂಗು ಮತ್ತು ಮಾವಿನ ತೋಟಕ್ಕೆ ಗುರುವಾರ ಮಧ್ಯಾಹ್ನ ಬೆಂಕಿಬಿದ್ದು ಅನೇಕ ತೆಂಗಿನ ಮರಗಳು ಮತ್ತು ಮಾವಿನ ಗಿಡಗಳು ಸುಟ್ಟು ಕರಕಲಾಗಿವೆ. ಹನಿನೀರಾವರಿ ಯೋಜನೆಗೆ ಬಳಸಿದ್ದ ಪ್ಲಾಸ್ಟಿಕ್ ಪೈಪುಗಳು ಸಂಪೂರ್ಣ ಸುಟ್ಟುಹೋಗಿವೆ.ಗುರುವಾರ ಮುಂಜಾನೆಯಿಂದಲೇ ವಿಪರೀತವಾಗಿ ಬೀಸುತ್ತಿದ್ದ ಗಾಳಿಯಿಂದ ತೋಟದಲ್ಲಿದ್ದ ತರಗು ಬೇಗನೆ ಹತ್ತಿಉರಿದು ಅಕ್ಕ ಪಕ್ಕದ ತೋಟಗಳಿಗೆ ಹರಡಲು ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ತಿಳಿಸಿದರು.

ತಪ್ಪಿದ ಅವಘಡ: ಗಾಳಿಯ ಜತೆ ಹರಡಿದ ಬೆಂಕಿ ಪಕ್ಕದಲ್ಲಿದ್ದ ಶ್ರೀಗಂಧ ವನಕ್ಕೆ ಹರಡಿದ್ದು, ತೋಟದ ಕೆಲಸಗಾರ ಸಮಯ ಪ್ರಜ್ಷೆಯಿಂದ ಮಾಲೀಕನಿಗೆ ವಿಷಯ ಮುಟ್ಟಿಸಿದ್ದರಿಂದ ಸ್ಥಳಕ್ಕಾಗ ಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಇಲ್ಲದಿದ್ದಲ್ಲಿ ಸಂಪೂರ್ಣ ಶ್ರೀಗಂಧವನ ಭಸ್ಮವಾಗುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT