ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ: ರಸಗೊಬ್ಬರ ಕೊರತೆ- ಬೇಸಾಯ ನೀರಸ

Last Updated 24 ಜೂನ್ 2011, 10:00 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನಲ್ಲಿ ರಸಗೊಬ್ಬರ ಕೊರತೆ ಉಂಟಾಗಿದ್ದು ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ ಎಂದು ರಾಜ್ಯ ರೈತ ಸಂಘ ಸಂಚಾಲಕರಾದ ಕರುವಾನೆ ನವೀನ್ ಹಾಗೂ ಬೆಳಗುಳ ಚಿಂತನ್ ದೂರಿದ್ದಾರೆ.ತಾಲ್ಲೂಕಿನ ಸಹಕಾರಿ ಸಂಘಗಳಲ್ಲಿ ರೈತರಿಗೆ ಅಗತ್ಯವಾದ ಸುಫಲ, ಡಿ.ಎ.ಪಿ. ಗೊಬ್ಬರ ದೊರೆಯುತ್ತಿಲ್ಲ. ಕೃಷಿ ಇಲಾಖೆಯಲ್ಲಿ ಈ ಕುರಿತು ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಹರಿಹರಪುರ ರೈತಸಂಪರ್ಕ ಕೇಂದ್ರ ಸಿಬ್ಬಂದಿ ಇಲ್ಲದೆ ಮುಚ್ಚಲಾಗಿದೆ ಎಂದು ಅವರು ದೂರಿದ್ದಾರೆ.

ಮಳೆಗಾಲ ಆರಂಭವಾಗಿ ಭತ್ತದ ಗದ್ದೆಗಳಿಗೆ ಗೊಬ್ಬರ ಹಾಕಿ, ಉಳುಮೆ ಮಾಡಬೇಕಾಗಿದ್ದ ಕೃಷಿಕರು ಗೊಬ್ಬರ ದೊರೆಯದೆ ಕೈಚೆಲ್ಲಿ ಕುಳಿತಿದ್ದಾರೆ. ಸಾವಯವ ಪರಿವಾರದವರು ಅಪಾರದರ್ಶಕವಾಗಿ ಸರ್ಕಾರದ ಸಹಾಯಧನದ ಹಂಚಿಕೆ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸರಬರಾಜು ಮಾಡಲು ಹಂಚಿಕೆಯಾಗಿರುವ ಗೊಬ್ಬರಗಳನ್ನು ಸಹಕಾರಿ ಸಂಘಗಳು ಲಾಭ ಕಡಿಮೆ ಎಂದು ಕಾರಣ ನೀಡಿ ಗೊಬ್ಬರ ಪಡೆದುಕೊಳ್ಳುತ್ತಿಲ್ಲ. ಇದರಿಂದಾಗಿ ಕೊರತೆ ಉಂಟಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ತಾಲ್ಲೂಕಿನ 12 ಸಹಕಾರ ಸಂಘಗಳಿಗೆ ಡಿ.ಎ.ಪಿ., ಸುಫಲ ಹೊರತುಪಡಿಸಿ, 6780ಟನ್ ಗೊಬ್ಬರ ಹಂಚಲಾಗಿದೆ. ಆದರೂ ಕೇವಲ 750ಟನ್ ಗೊಬ್ಬರ ಪಡೆದುಕೊಂಡಿವೆ. ಸಹಕಾರ ಸಂಘಗಳಿಗೆ ಹಂಚಿಕೆಯಾದ ಗೊಬ್ಬರ ಪಡೆದುಕೊಳ್ಳದೆ ಇದ್ದರೆ ಇತರ ಸಹಕಾರಿ ಸಂಘ ಮೂಲಕ ವಿತರಣೆಗೆ ಅವಕಾಶ ಮಾಡುವಂತೆ ಕೃಷಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT