ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿಗೆ ದಿಢೀರ್ ಬೆಲೆ ಏರಿಕೆ

Last Updated 29 ಡಿಸೆಂಬರ್ 2010, 11:05 IST
ಅಕ್ಷರ ಗಾತ್ರ

ಅರಸೀಕೆರೆ:ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಬ್ಬರಿ ಕ್ವಿಂಟಲ್‌ಗೆ ಗರಿಷ್ಠ ್ಙ7,406ಕ್ಕೆ ಮಾರಾಟವಾಗುವ ಮೂಲಕ ಮಂಗಳವಾರ ನೂತನ ಇತಿಹಾಸ ನಿರ್ಮಿಸಿತು. ಕೊಬ್ಬರಿ ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಧಾರಣೆ ಬಂದಿದೆ. ಇದರಿಂದ ಸದಾ ನಿರಾಸೆ ಮಡುವಿನಲ್ಲೇ ಮುಳುಗಿದ್ದ ತೆಂಗು ಬೆಳೆಗಾರನ ಮೊಗದಲ್ಲಿ ಮಂದಹಾಸ ಕಂಡುಬಂತು.ತೆಂಗು ಬೆಳೆಗೆ ನಿರಂತರ ಕಾಡುವ ರೋಗ, ಬೆಳೆ ವೈಫಲ್ಯ, ಸತತ ಬೆಲೆ ಕುಸಿತದಿಂದ ಕಂಗೆಟ್ಟು ನಷ್ಟದ ಕೂಪದಲ್ಲಿದ್ದ ರೈತರಿಗೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ ಕೊಬ್ಬರಿಗೆ ಶುಕ್ರದೆಸೆ ತಿರುಗಿದ್ದು, ಧಾರಣೆ ದಿಢೀರನೇ ಪ್ರತಿ ಕ್ವಿಂಟಲ್ ಕೊಬ್ಬರಿಗೆ ್ಙ6,900ರಿಂದ ್ಙ 7,406ಕ್ಕೆ  ಏರಿಕೆಯಾಗಿದೆ.

ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ 21ರ ಮಂಗಳವಾರ ಕ್ವಿಂಟಲ್ ಕೊಬ್ಬರಿ ಬೆಲೆ ್ಙ 6001ರಿಂದ ್ಙ 6035 ಧಾರಣೆಯಾಗಿದ್ದು, 24ರ ಶುಕ್ರವಾರ ್ಙ 6410ರಿಂದ ್ಙ 6510ಕ್ಕೆ ಏರಿಕೆಯಾಗಿತ್ತು. ಕಳೆದ ಒಂದು ವರ್ಷದಿಂದ ಕ್ವಿಂಟಲ್ ಕೊಬ್ಬರಿ ನಾಲ್ಕು ಸಾವಿರ ರೂಪಾಯಿ ಆಸು-ಪಾಸಿನಲ್ಲಿ ಧಾರಣೆ ಸ್ಥಿರವಾಗಿದ್ದು, ಆದರೆ ಕಳೆದ ಒಂದು ತಿಂಗಳಿನಿಂದ ಏಕಾಏಕಿ ಕ್ವಿಂಟಲ್‌ಗೆ ಸಾವಿರ ರೂಪಾಯಿ ಏರಿಕೆಯಾಗಿದೆ.
ಈ ಮೊದಲೇ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ  ಬೆಳೆಗಾರರಿಗೆ ಕೊಬ್ಬರಿ ಧಾರಣೆ ಕುಸಿತ ಮಂಕು ಕವಿದಿತ್ತು. ಸರ್ಕಾರ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆದಿದ್ದರೂ ಬೆಳೆಗಾರರೂ ಆ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೆ ಮಾರುಕಟ್ಟೆಯಲ್ಲಿನ ವರ್ತಕರ ಅಂಗಡಿಗಳಿಗೆ ಕೊಬ್ಬರಿ ಮಾರಾಟ ಮಾಡುತ್ತಿದ್ದ ದೃಶ್ಯ ಈಚಿನ ದಿನಗಳಲ್ಲಿ ಸಾಮಾನ್ಯವಾಗಿತ್ತು.ಆದರೆ ಈಗ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಚೇತೋಹಾರಿ ಏರಿಕೆ ಕಾಣುತ್ತಿದೆ. ಜತೆಗೆ ತೆಂಗಿನಕಾಯಿ ಧಾರಣೆಯಲ್ಲಿಯೂ ಬಾರಿ ಏರಿಕೆ ಕಂಡಿದ್ದು, 1000 ತೆಂಗಿನಕಾಯಿ ಧಾರಣೆ ಕನಿಷ್ಠ ್ಙ 10,500 ಗರಿಷ್ಠ ್ಙ 11,500ರ ತನಕ ವಹಿವಾಟು ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT