ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಿಯ ಗಡಿಯಲ್ಲಿ ವಿಷಕಾರಿ ರಾಸಾಯನಿಕ

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ಸೋಲ್ (ಯೊನ್‌ಹ್ಯಾಪ್): ದಕ್ಷಿಣ ಕೊರಿಯ ಮತ್ತು ಅಮೆರಿಕದ ಪಡೆಗಳು 1968- 69ರ ನಡುವೆ ಉತ್ತರ ಕೊರಿಯದ ಒಳನುಸುಳುವಿಕೆಯನ್ನು ತಡೆಯಲು ವಿಷಕಾರಿ ರಾಸಾಯನಿಕ `ಏಜೆಂಟ್ ಆರೆಂಜ್~ ಹಾಗೂ ಸಸ್ಯನಾಶಕವನ್ನು ಕೊರಿಯ ಗಡಿಯ 6,840 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ತಂದು ಸುರಿದಿದ್ದಾಗಿ ವರದಿಯೊಂದು ಶುಕ್ರವಾರ ತಿಳಿಸಿದೆ.

ದಕ್ಷಿಣ ಕೊರಿಯದ ಆಡಳಿತಾರೂಢ ಗ್ರಾಂಡ್ ನ್ಯಾಷನಲ್ ಪಾರ್ಟಿ ಈ ವರದಿಯನ್ನು ಬಿಡುಗಡೆ ಮಾಡಿದೆ. ಸೋಲ್‌ನಿಂದ 300 ಕಿ.ಮೀ ದೂರದ ಚಿಲ್‌ಗಾಕ್ ಎಂಬಲ್ಲಿ 1978ರಲ್ಲಿ ಬೃಹತ್ ಪ್ರಮಾಣದ ವಿಷಕಾರಿ ರಾಸಾಯನಿಕವನ್ನು ಸುರಿಯಲು ತಾವು ನೆರವಾಗಿದ್ದಾಗಿ ಅಮೆರಿಕದ ನಿವೃತ್ತ ಸೈನಿಕರು ಇತ್ತೀಚೆಗೆ  ನೀಡಿರುವ ಹೇಳಿಕೆಯ ಬೆನ್ನಲ್ಲೇ ಈ ವರದಿ ಪ್ರಕಟಗೊಂಡಿದೆ.

1960ರ ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ದಟ್ಟ ಪರ್ಣ ಸಮೂಹವನ್ನು ನಾಶ ಮಾಡಲು ಬಳಸಿದ್ದ `ಏಜೆಂಟ್ ಆರೆಂಜ್~ನ್ನು ಹಿಂದೆ ತಾವು ಬಳಸಿದ್ದಾಗಿ ಎರಡೂ ರಾಷ್ಟ್ರಗಳು ದೃಢಪಡಿಸಿವೆ. `ಏಜೆಂಟ್ ಆರೆಂಜ್~ ಕ್ಯಾನ್ಸರ್, ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುವ ಶಂಕೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT