ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲರಾಡೊ ಹೈಸ್ಕೂಲ್‌ನಲ್ಲಿ ಶೂಟೌಟ್‌

ಬಂದೂಕು ಹಿಡಿದು ಶಿಕ್ಷಕರನ್ನು ಕೊಲ್ಲಲು ಬಂದ ವಿದ್ಯಾರ್ಥಿ
Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸೆಂಟೆನಿಯಲ್‌/ಲಾಸ್‌ ಏಂಜಲೀಸ್‌ (ಐಎಎನ್‌ಎಸ್‌/ಎಪಿ/ಎಎಫ್‌ಪಿ): ಅಮೆರಿಕದ ನ್ಯೂಟೌನ್‌ ಶಾಲೆಯಲ್ಲಿ ಜರುಗಿದ್ದ ಮುಗ್ಧ ಮಕ್ಕಳ ನರಹತ್ಯೆಗೆ ಶನಿ­ವಾರ ಒಂದು ವರ್ಷ ತುಂಬಿದ ಸಂದ­ರ್ಭ­­ದಲ್ಲೇ ಕೊಲರಾಡೊ ಹೈಸ್ಕೂ­­ಲ್‌­­­ನಲ್ಲಿ ಇಂತಹದ್ದೇ ಮತ್ತೊಂದು ಘಟನೆ ಜರುಗಿದೆ.

ಕೊಲರಾಡೊದ ಅರಪಾವೊ ಹೈಸ್ಕೂ­ಲ್‌­ನಲ್ಲಿ  ಶಿಕ್ಷಕರೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ವಿದ್ಯಾರ್ಥಿ­ಯೊಬ್ಬ ನಡೆಸಿದ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯ­ಗೊಂಡಿದ್ದಾರೆ. ಬಳಿಕ ಆ ವಿದ್ಯಾರ್ಥಿ ತನಗೆ ತಾನೇ  ಗುಂಡು ಹೊಡೆ­ದು­ಕೊಂಡು ಪ್ರಾಣ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಗುಂಡು ಹಾರಿಸಿದ ವಿದ್ಯಾರ್ಥಿ­ಯನ್ನು ಕಾರ್ಲ್‌ ಹ್ಯಾಲ್‌ವರ್ಸನ್‌ ಪಿಯ­ರ್ಸನ್‌ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಚಿಕ್ಕ ಪಿಸ್ತೂಲ್‌ ಇಟ್ಟುಕೊಂಡು ಶಾಲೆಗೆ ಬಂದಿದ್ದ ಪಿಯರ್ಸನ್‌, ನಿರ್ದಿಷ್ಟ ಶಿಕ್ಷಕರೊಬ್ಬರ ಹೆಸರು ಕೇಳಿಕೊಂಡು ಅವರನ್ನು ಹುಡು­ಕುತ್ತಿದ್ದ. ಈ ವಿಷಯ ತಿಳಿದು ಆ ಶಿಕ್ಷಕ ಶಾಲೆಯಿಂದ ಕಾಲ್ಕಿತ್ತಿದ್ದರು’ ಎಂದು ಅರಪಾವೊ ಕೌಂಟಿ ಅಧಿ­ಕಾರಿ ಗ್ರೇಸನ್‌ ರಾಬಿನ್ಸನ್‌ ತಿಳಿಸಿದ್ದಾರೆ.

‘ಸೇಡು ತೀರಿಸಿಕೊಳ್ಳುವ ಉದ್ದೇಶ­ದಿಂದಲೇ ಶಾಲೆಗೆ ಬಂದಂತಿದ್ದ ಕಾರ್ಲ್‌, ಕೈಯಲ್ಲಿ ಬಂದೂಕು ಹಿಡಿದು ನಿರ್ದಿಷ್ಟ ಶಿಕ್ಷಕರೊಬ್ಬರ ಹೆಸರನ್ನು ಕೂಗಾಡುತ್ತ ಓಡಾಡುತ್ತಿದ್ದ. ಇದನ್ನು ಗಮನಿಸಿದ ಶಾಲಾ ವಿದ್ಯಾರ್ಥಿಗಳು ಕೋಣೆಯ ಬಾಗಿಲು ಮುಚ್ಚಿಕೊಂಡಿದ್ದರು. ಪೊಲೀ­ಸರು ಬಂದಿರುವುದು ಖಚಿತವಾದ ನಂತರವೇ ಬಾಗಿಲು ತೆರೆದು ಹೊರ­ಬಂದಿದ್ದಾರೆ. ಈ  ದೃಶ್ಯ ಸಿಸಿಟಿವಿಯಲ್ಲಿ ಸೆರೆ­ಯಾಗಿದೆ’ ಎಂದು ಅವರು ತಿಳಿಸಿ­ದ್ದಾರೆ.

‘ವಿದ್ಯಾರ್ಥಿ ಎಂದಿನಂತೆ ಶಾಲೆಯ ಮುಖ್ಯ ದ್ವಾರದಿಂದಲೇ ಶಾಲೆಗೆ ಬಂದಿದ್ದ. ಯಾವುದೋ ವಿಷಯಕ್ಕೆ ಸಂಬಂ­ಧಿ­ಸಿ­ದಂತೆ ಶಿಕ್ಷಕರೊಂದಿಗೆ ಭಿನ್ನಾ­ಭಿ­ಪ್ರಾಯ ಹೊಂದಿದ್ದ ಕಾರಣ­ಕ್ಕಾಗಿ ಈ ಕೃತ್ಯ ಎಸಗಿರುವ ಶಂಕೆ ಇದೆ’ ಎಂದು ರಾಬಿನ್ಸನ್‌ ತಿಳಿಸಿದ್ದಾರೆ. ಆದರೆ, ಇನ್ನೊಂ­ದು ಮೂಲದ ಪ್ರಕಾರ, ಶಾಲೆಯ ಗ್ರಂಥಪಾಲಕ ವಿದ್ಯಾರ್ಥಿಯ ಗುರಿಯಾಗಿದ್ದ. ಶಾಲಾ ಆವರಣದಲ್ಲಿ ಎರಡು ಸ್ಫೋಟ­ಕ­ಗಳು ಪತ್ತೆಯಾಗಿದ್ದು, ಆ ಪೈಕಿ ಒಂದನ್ನು ನಿಷ್ಕ್ರಿಯ ಗೊಳಿಸಲಾಗಿದೆ.  ಘಟ­ನೆ­ಯಲ್ಲಿ ಯಾರೊಬ್ಬರೂ ಗಾಯ­ಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಘಟನೆ ಜರುಗಿದ 20 ನಿಮಿಷಗಳ ಬಳಿಕ ಅಧಿಕಾರಿಗಳು ಶಾಲೆಗೆ ಹೋಗಿ­ದ್ದರು. ಆದರೆ, ಅಷ್ಟಾರಲ್ಲಾಗಲೇ ಗುಂಡು ಹಾರಿಸಿದ ವಿದ್ಯಾರ್ಥಿ ಹೆಣ­ವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ವಿವರಿಸಿದ್ದಾರೆ.

ಅಮೆರಿಕದ ಶಾಲೆಗಳಲ್ಲಿ ಪದೇಪದೇ ನಡೆಯುತ್ತಿರುವ ಇಂತಹ ಘಟನೆಗಳಿಂದ ಪಾಲಕರು ತೀವ್ರ ಆತಂಕಕ್ಕೆ ಒಳಗಾ­ಗಿದ್ದು, ಮಕ್ಕಳು ಬಂದೂಕು ಬಳಸುವ  ಕುರಿತ ಚರ್ಚೆಗೆ ಮತ್ತಷ್ಟು ಗ್ರಾಸ ಒದಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT