ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ ಪ್ರಕರಣ: ಆರು ಮಂದಿ ಬಂಧನ

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜ್ಞಾನಭಾರತಿ ಸಮೀಪದ ಮಲ್ಲತ್ತಹಳ್ಳಿಯಲ್ಲಿ ನಡೆದಿದ್ದ ಪ್ರತಾಪ್ (24) ಎಂಬಾತನ ಕೊಲೆ ಪ್ರಕರಣವನ್ನು ಭೇದಿಸಿರುವ ಜ್ಞಾನಭಾರತಿ ಠಾಣೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ವಿದ್ಯಾರಣ್ಯಪುರದ ಶ್ರೀನಿಧಿ ಲೇಔಟ್‌ನ ರಾಕೇಶ (27), ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಂದಿರಾನಗರದ ಮಂಜೇಗೌಡ ಉರುಫ್ ವಾಲೆ ಮಂಜ (25), ಮಂಜುನಾಥನಗರದ ಜ್ಯೋತಿಮಣಿ (20). ಶಶಿಕುಮಾರ್ (21), ಕೊಡಗಿನ ಬಡುಬನಹಳ್ಳಿಯ ದಿಲೀಪ (26) ಮತ್ತು ಬಸವೇಶ್ವರನಗರದ ವೃಷಭಾವತಿ ನಗರದ ರಾಜಶೇಖರ (32) ಬಂಧಿತರು.

`ರಾಕೇಶ ಮತ್ತು ಪ್ರತಾಪ ಮಧ್ಯೆ ಹಲವು ದಿನಗಳಿಂದ ದ್ವೇಷವಿತ್ತು. ಪ್ರತಾಪ, ರಾಕೇಶನನ್ನು ಕೊಲೆ ಮಾಡಲು ಯತ್ನಿಸಿದ್ದ. ಇದಕ್ಕೆ ಸೇಡು ತೀರಿಸಿಕೊಳ್ಳಲು ಆರೋಪಿಗಳು ಈ ಕೊಲೆ ಮಾಡಿದ್ದರು.

ಬಸವೇಶ್ವರನಗರದಲ್ಲಿ ನಡೆದಿದ್ದ ಕೊಲೆ, ಎರಡು ದರೋಡೆ ಯತ್ನ, ನಾಲ್ಕು ಸುಲಿಗೆ ಮತ್ತು ಒಂದು ಹಲ್ಲೆ ಪ್ರಕರಣಗಳಲ್ಲಿ ರಾಕೇಶ ಆರೋಪಿಯಾಗಿದ್ದನೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್ ಸಿದ್ದರಾಮಪ್ಪ ಅವರು ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್ ಬಿ.ಟಿ ಚಿದಾನಂದಸ್ವಾಮಿ ಅವರ ತಂಡ ಪ್ರಕರಣವನ್ನು ಪತ್ತೆ ಮಾಡಿದೆ.

ಸರಗಳ್ಳರ ಬಂಧನ:
ಸರಗಳ್ಳತನ ಮಾಡುತ್ತಿದ್ದ ಆರೋಪದ ಮೇಲೆ  ಕನಕಪುರದ ಯಡಮಾರನಹಳ್ಳಿಯ ಮುತ್ತುರಾಜು ಉರುಫ್ ಮುತ್ತ (23), ಗಂಗಾಧರ ಉರುಫ್ ಗೂಸ (21), ನಿಂಗರಾಜ ಉರುಫ್ ನಿಂಗ (23) ಎಂಬುವರನ್ನು  ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿ ಮತ್ತು ರಾಜರಾಜೇಶ್ವರಿ ನಗರ ಠಾಣೆಯ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ 6 ಲಕ್ಷ ನಗದು ಮತ್ತು 287 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಮುತ್ತುರಾಜ ಬಿಬಿಎಂ ಮತ್ತು ಲಿಂಗರಾಜ ಬಿ.ಕಾಂ ಓದುತ್ತಿದ್ದರು. ವಿದ್ಯಾಭ್ಯಾಸ ನಿಲ್ಲಿಸಿದ್ದ ಅವರು ಸರಗಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದರು. ದೋಚಿದ ಸರಗಳನ್ನು ಅವರು ಗಿರವಿ ಇಟ್ಟು ಹಣ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯ ಪಾದಚಾರಿ ಮಾರ್ಗದಲ್ಲಿ ಮತ್ತು ಅಂಗಡಿಗಳಲ್ಲಿ ನಕಲಿ ಸಿ.ಡಿಗಳನ್ನು ಮಾರಾಟ ಮಾಡುತ್ತಿದ್ದ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 2700 ನಕಲಿ ಸಿ.ಡಿಗಳನ್ನು ವಶಪಡಿಸಿಕೊಂಡಿದ್ದಾರೆ.

 ಕನ್ನಡ, ತಮಿಳು, ಹಿಂದಿ. ತೆಲುಗು ಮತ್ತು ಇಂಗ್ಲಿಷ್ ಚಿತ್ರಗಳ ಸಿ.ಡಿಗಳನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

23 ಬೈಕ್‌ಗಳು ಬೆಂಕಿಗೆ ಆಹುತಿ: ಬೈಕ್ ಸರ್ವೀಸ್ ಕೇಂದ್ರದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ 23 ಬೈಕ್‌ಗಳು ಸುಟ್ಟಹೋದ ಘಟನೆ ಚಾಮರಾಜಪೇಟೆಯ ನಾಲ್ಕನೇ ಮುಖ್ಯ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

`ನಿಖಿತ್ ಬೈಕ್ಸ್~ ಸರ್ವೀಸ್ ಸೆಂಟರ್‌ನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಅಂಗಡಿ ಮಳಿಗೆಯ ಮಾಲೀಕರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾರ್ಟ್ ಸರ್ಕಿಟ್ ಅಥವಾ ದೇವರ ದೀಪದಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ.

 ಸರ್ವೀಸ್‌ಗೆ ಬಂದಿದ್ದ ಬೈಕ್‌ಗಳು ಸುಟ್ಟು ಹೋಗಿದ್ದು ನಷ್ಟದ ಮೊತ್ತ ಸುಮಾರು ಹನ್ನೊಂದು ಲಕ್ಷ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT