ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ ಯತ್ನಕ್ಕೆ ವಿಷ ಕನ್ನಿಕೆ ಬಳಕೆ: ದಲೈ ಲಾಮಾ

Last Updated 13 ಮೇ 2012, 19:30 IST
ಅಕ್ಷರ ಗಾತ್ರ

ಧರ್ಮಶಾಲಾ/ಲಂಡನ್ (ಐಎಎನ್‌ಎಸ್): `ಚೀನಾದ ಏಜೆಂಟರಿಂದ ನನ್ನ ಜೀವಕ್ಕೆ ಅಪಾಯ ಇದೆ~ ಎಂದಿರುವ ಟಿಬೆಟ್ ಧರ್ಮಗುರು ದಲೈ ಲಾಮಾ, ಅದಕ್ಕಾಗಿ ಟಿಬೆಟ್  ಮಹಿಳೆಗೆ ತರಬೇತಿ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಧರ್ಮಶಾಲಾ ಮೂಲದ ಲಾಮಾ ಅವರ ಕಚೇರಿಯೂ  ಭಾನುವಾರ ಇದನ್ನು ದೃಢಪಡಿಸಿದ್ದು, `ಅವರ ಜೀವಕ್ಕೆ ಅಪಾಯ ಇರುವುದು ನಮ್ಮ ಅನುಭವಕ್ಕೂ ಬಂದಿದೆ~ ಎಂದು ಹೇಳಿದೆ. 

`ಜೀವಕ್ಕೆ ಅಪಾಯ ಇರುವ ಸಂದೇಶವೂ ಅವರಿಗೆ ಬಂದಿದೆ~ ಲಾಮಾ ಅವರ ಆಪ್ತ ಕಾರ್ಯದರ್ಶಿ ಚಿಮ್ಮೆ ಚೊಕ್ಯಾಪ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.  ಸೋಮವಾರ ಟೆಂಪ್ಲೆಟನ್ ಪ್ರಶಸ್ತಿ ಸ್ವೀಕರಿಸಲು ಲಂಡನ್‌ಗೆ ಆಗಮಿಸಿರುವ ಲಾಮಾ ಭಾನುವಾರ `ಟೆಲಿಗ್ರಾಫ್~ಗೆ ಸಂದರ್ಶನ ನೀಡಿದ್ದು, `ನನಗೆ ವಿಷ ಕೊಟ್ಟು ಹತ್ಯೆ ಮಾಡಲು ಟಿಬೆಟ್ ಮಹಿಳೆಯೊಬ್ಬಳಿಗೆ ಚೀನಾ ಏಜೆಂಟರು ತರಬೇತಿ ನೀಡಿದ್ದಾರೆ ಎಂಬ ಸುಳಿವು ಸಿಕ್ಕಿದೆ~ ಎಂದು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT