ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಹಾಪುರದಲ್ಲಿ ಸ್ಕೇಟಿಂಗ್ ಪಟುಗಳ ಸಾಧನೆ

Last Updated 8 ಜೂನ್ 2011, 7:30 IST
ಅಕ್ಷರ ಗಾತ್ರ

ಬೆಳಗಾವಿ: ಕೊಲ್ಹಾಪುರದಲ್ಲಿ ಇತ್ತೀಚೆಗೆ ನಡೆದ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ನಗರದ ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಕ್ರೀಡಾಪಟುಗಳು 5 ಬಂಗಾರ, 3 ಬೆಳ್ಳಿ ಹಾಗೂ 8 ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ರಿಯಾ ಹೇರೇಕರ್, ಗೌತಮಿ ಅಷ್ಟೇಕರ್, ಶೇಫಾಲಿ ಕಾನಡೆ, ಹರ್ಷಾ ಗವಳಿ ಹಾಗೂ ಪ್ರಕಾಶ ಪಾಟೀಲ ಚಿನ್ನದ ಪದಕ, ರೋಶನ್ ಎನ್, ಆಶೀಷ್ ಭಂಡಾರಿ ಹಾಗೂ ಶ್ರೀನಿವಾಸ ಜಾಧವ ಬೆಳ್ಳಿ ಪದಕ ಗೆದ್ದಿದ್ದಾರೆ.
ಮಂಜುನಾಥ ಮಂಡೋಳ್ಕರ್, ಪ್ರತೀಕ ಮೇತಿ, ಪ್ರಥಮೇಶ ಬಾಗೇವಾಡಿ, ಪಾರ್ಥ ಪಾಟೀಲ, ಪ್ರಾಚಿ ಶಿಂಧೆ, ಪರಿಣಿತಾ ಶೆಟ್ಟಿ, ವಿಪುಲ್ ರಾಯಕರ, ಓಂ ಭಂಡಾರಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ತರಬೇತುದಾರರಾದ ಸೂರ್ಯಕಾಂತ ಹಿಂಡಲಗೇಕರ, ಶಶಿಧರ ಪೌಲ್, ಕಿರಣ ಐ, ವಿನಾಯಕ ಶಿರೇಕರ ಮತ್ತಿತರರು ಉಪಸ್ಥಿತರಿದ್ದರು.

ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ
ಬೆಳಗಾವಿ:
ರಾಷ್ಟ್ರೀಯ ಪಿಪಿಆರ್ ನಿಯಂತ್ರಣ ಯೋಜನೆಯಡಿ ಕುರಿ ಹಾಗೂ ಆಡುಗಳಿಗೆ ಪಿಪಿಆರ್ ರೋಗದ ವಿರುದ್ಧ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮಂಗಳವಾರ ತಾಲ್ಲೂಕಿನ ಸುಳಗಾದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರಾಜು ಚಾಲನೆ ನೀಡಿದರು.

ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ಬಿ.ಎಸ್. ಜಂಬಗಿ, ಡಾ.ಶಶಿಧರ ನಾಡಗೌಡ, ಡಾ.ಎಚ್.ಕೆ. ಯರಗಟ್ಟಿ, ಡಾ.ಎಂ.ಬಿ. ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿ ಏಕಕಾಲಕ್ಕೆ 28 ತಂಡಗಳ 140 ಸಿಬ್ಬಂದಿ ಲಸಿಕೆ ಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ 25 ದಿನಗಳಲ್ಲಿ ಜಿಲ್ಲೆಯಲ್ಲಿರುವ 15.10 ಲಕ್ಷ ಕುರಿಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT