ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆಬಾವಿ ನೋಂದಣಿ

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು ಜಲಮಂಡಳಿ ಕೊಳವೆಬಾವಿ ಇರುವವರು ಈ ತಿಂಗಳ ಕೊನೆಯ ಒಳಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ತಪ್ಪಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ. ಆದರೆ ಈ ನೋಂದಣಿ ವಿಷಯ ಇನ್ನೂ ಬಹಳ  ಮನೆ ಮಾಲೀಕರಿಗೆ ತಿಳಿದಂತಿಲ್ಲ. ಕೊಳವೆಬಾವಿ ಹೊಂದಿರುವವರು ಈಗಾಗಲೇ ಪ್ರತಿ ತಿಂಗಳು  ರೂ 50 ಶುಲ್ಕ ಕಟ್ಟುತ್ತಿದ್ದಾರೆ.

ಹಾಗಾಗಿಕೊಳವೆಬಾವಿ ಹೊಂದಿರುವವರ ಬಗ್ಗೆ ಇಲಾಖೆಗೆ ಮಾಹಿತಿ ಇರಲೇಬೇಕು. ಈ ಮಾಹಿತಿಯಂತೆ ಜಲಮಂಡಳಿಯು ಮೀಟರ್ ರೀಡರ್‌ಗಳ ಮೂಲಕ ನೋಂದಣಿ ನಮೂನೆ ತಲುಪಿಸಿ, ಅವರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಮೀಟರ್ ರೀಡರುಗಳು ನೀಡಿ ಈ ಕಾರ್ಯ ಅತಿ ಸುಲಭ, ಸರಳವಾಗಿ ಮುಗಿಸಬಹುದು. ಮೀಟರ್ ರೀಡರುಗಳಿಗೆ ಅವರ ಕೆಲಸದ ಜೊತೆಗೆ ಈ ಕೆಲಸ ಮಾಡಲು ಅವರಿಗೆ ಇಂತಿಷ್ಟು ಎಂದು ಪ್ರೋತ್ಸಾಹ ಧನ ನೀಡಿದರೆ, ಅವರು ಖಂಡಿತಾ ಈ ಕೆಲಸ ಬಹಳ ಚೆನ್ನಾಗಿ ಮಾಡಿ ಯಶಸ್ಸು ಲಭಿಸುವಂತೆ ಮಾಡುತ್ತಾರೆ. ಈ ನೋಂದಣಿ ಅರ್ಜಿ ಸರಳ ಕನ್ನಡದಲ್ಲಿ ಸುಲಭವಾಗಿ ಎಲ್ಲಾ ವಿವರ ಸಲ್ಲಿಸುವಂತಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT