ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ನಿವಾಸಿಗಳಿಗೆ ಸಾಮಾಜಿಕ ಭದ್ರತೆ ಒದಗಿಸಿ

Last Updated 3 ಮೇ 2012, 7:25 IST
ಅಕ್ಷರ ಗಾತ್ರ

ಚಿತ್ರದುರ್ಗ: ಶಿಕ್ಷಣ, ಸಂಘಟನೆ ಹೋರಾಟದ ಮೂಲಕ ಮೂಲ ಸೌಲಭ್ಯ ಪಡೆಯಬೇಕು ಎಂದು ಕೊಳೆಗೇರಿ ನಿವಾಸಿಗಳ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಜಿ. ಅಂಕಯ್ಯ ಅಭಿಪ್ರಾಯಪಟ್ಟರು.ಪತ್ರಕರ್ತರ ಭವನದಲ್ಲಿ ಸೋಮವಾರ ಕೊಳೆಗೇರಿ ನಿವಾಸಿಗಳ ಸಂಘದ ವತಿಯಿಂದ ನಡೆದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಹಾಗೂ ಕೊಳೆಗೇರಿ ನಿವಾಸಿಗಳಿಗೆ ಸಾಮಾಜಿಕ ಭದ್ರತೆ ಬೇಕು.
 
ಇದಕ್ಕಾಗಿ ಕೇಂದ್ರದ ಜತೆ ಮಾತುಕತೆ ನಡೆಸುತ್ತಿದ್ದೇವೆ. ಕಳೆದ ಬಾರಿ ರೂ 50 ಕೋಟಿ ಬಜೆಟ್‌ನಲ್ಲಿ ಮೀಸಲಿಟ್ಟರೂ ಕೇವಲ ರೂ 5 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಇದನ್ನೆಲ್ಲಾ ಪ್ರಶ್ನಿಸಲು ಒಗ್ಗಟ್ಟಾಗಿ ಇರುವಂತೆ ಕರೆ ನೀಡಿದರು.

ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ವೈ. ಸತ್ಯಪ್ಪ, ಸಂಚಾಲಕ ಗಣೇಶ್, ನಗರಸಭೆ ಮಾಜಿ ಸದಸ್ಯ ಎಲ್. ವೆಂಕಟೇಶ್, ಕೊಳೆಗೇರಿ ನಿವಾಸಿಗಳ ಸಂಘದ ತಾಲ್ಲೂಕು ಸಮಿತಿಯ ನೂರುಲ್ಲಾ, ಕಾರ್ಯದರ್ಶಿ ಡಿ.ಎನ್. ಅಮೃತೇಶ್ ಮಹಬೂಬಿ, ಸಾವಿತ್ರಮ್ಮ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT