ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಕಮ್ ವಿಶೇಷ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪಾನಕ
ಬೇಕಾಗುವ ಪದಾರ್ಥಗಳು: ನೆನೆಸಿದ ಅಮ್‌ಸೋಲೆ. ರುಚಿಗೆ ತಕ್ಕಷ್ಟು ಬೆಲ್ಲ ಅಥವಾ ಸಕ್ಕರೆ, ಸ್ವಲ್ಪ ಉಪ್ಪು ಮತ್ತು ಜೀರಿಗೆ 2 ಚಮಚ, ಮೆಣಸು 1 ಚಮಚ ಪ್ರಮಾಣದಲ್ಲಿ ಸೇರಿಸಿ ಮಾಡಿಟ್ಟುಕೊಂಡ ಪುಡಿ.

ಮಾಡುವ ವಿಧಾನ: ನೆನೆಸಿದ ಅಮ್‌ಸೋಲ್ ಕಿವುಚಿ ರಸ ತೆಗೆದು ಶೋಧಿಸಿಕೊಳ್ಳಿ. ಆ ರಸಕ್ಕೆ ಬೆಲ್ಲ, ಉಪ್ಪು ತಯಾರಿಸಿಟ್ಟುಕೊಂಡ ಪುಡಿ ಹದವಾಗಿ ಹಾಕಿ ತಕ್ಕಷ್ಟು ನೀರು ಬೆರೆಸಿ ಸೇವಿಸಿ.

ಪಿತ್ತನಾಶಕ್ಕೆ ಗುಳಿಗೆ
ಬೇಕಾಗುವ ಪದಾರ್ಥಗಳು
: 100 ಗ್ರಾಂ ಅಮ್‌ಸೋಲೆ ನೆನೆಸಿದ್ದು, 2 ಚಮಚ ಗಸಗಸೆ ಪುಡಿ, 1 ಚಮಚ ಒಣಶುಂಠಿ, 1 ಚಮಚ ಕಲ್ಲುಸಕ್ಕರೆ ಪುಡಿ, 2 ಚಮಚ ಏಲಕ್ಕಿ ಪುಡಿ, 2 ಚಮಚ ಬಡೇಸೋಂಪಿನ ಪುಡಿ, 2 ಚಮಚ ಜೇಷ್ಠಮಧುವಿನ ಪುಡಿ.

ಮಾಡುವ ವಿಧಾನ: ನೆನೆಸಿಟ್ಟ ಅಮ್‌ಸೋಲನ್ನು ರುಬ್ಬಿ, ನುಣ್ಣಗೆ ಪೇಸ್ಟ್ ಮಾಡಿ, ಬಾಂಡ್ಲೆಗೆ ಹಾಕಿ ಮಗುಚಬೇಕು. ಸ್ವಲ್ಪ ನೀರು ಇಂಗಿದ ನಂತರ ಗಸಗಸೆ, ಒಣಶುಂಟಿ, ಕಲ್ಲುಸಕ್ಕರೆ, ಏಲಕ್ಕಿ ಬಡೇಸೊಂಪು, ಜೇಷ್ಠಮಧುವಿನ ಪುಡಿಗಳನ್ನು ಹಾಕಿ ಮಗುಚಬೇಕು (ಕೈಯಾಡಿಸಿ) ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಗಾಜಿನ ಬಾಟ್ಲಿಗೆ ಹಾಕಿಡಿ. ಕೆಮ್ಮು, ನೆಗಡಿಗೆ, ಪ್ರಯಾಣದ ತೊಂದರೆಗಳಿಗೆಲ್ಲಾ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT