ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್‌ ಕಾರ್ಖಾನೆ ಸ್ಥಾಪನೆ ಯಾವಾಗ?

ಅಕ್ಷರ ಗಾತ್ರ

‘ಬೆಮೆಲ್‌’ ಹೊರತುಪಡಿಸಿ ಯಾವುದೇ ಪ್ರಮುಖ ಕಾರ್ಖಾನೆಗಳಿಲ್ಲದ  ಕೋಲಾರ ಜಿಲ್ಲೆ ಯಲ್ಲಿ ರೈಲ್ವೆ ಕೋಚ್‌ ಕಾರ್ಖಾನೆ ಸ್ಥಾಪಿಸುವುದಾಗಿ 2011ರ ರೈಲ್ವೆ ಬಜೆಟ್‌ನಲ್ಲಿ ಘೋಷಿಸಲಾಯಿತು.

ಸ್ಥಳ ಗುರುತಿಸುವುದರಲ್ಲೇ ವರ್ಷ ಕಳೆಯಿತು. ನಂತರ 2012ರ ರೈಲ್ವೆ ಬಜೆಟ್‌ನಲ್ಲೂ  ‘ಕೋಲಾರದಲ್ಲಿ ರೈಲ್ವೆ ಕೋಚ್‌ ಕಾರ್ಖಾನೆ ಸ್ಥಾಪನೆ’ ಮಾಡು­ವುದಾಗಿ ಘೋಷಿಸಿ ಅದಕ್ಕಾಗಿ 1200 ಎಕರೆ ಜಮೀನನ್ನು ಗುರುತಿಸಿ ರುವುದಾಗಿ ಪ್ರಕಟಿಸಲಾ­ಯಿತು. ಆಗ ಸಿ.ಕೆ. ಜಾಫರ್‌ ಷರೀಫ್‌ ಅವರು  ಬಜೆಟ್‌ ಕುರಿತು ‘ಕೋಲಾ­ರಕ್ಕೆ ಪ್ರತಿ ವರ್ಷ ಕೋಚ್‌ ಕಾರ್ಖಾನೆ ಮಂಜೂರಾಗುತ್ತಲೇ ಇರುತ್ತದೆ’ ಎಂದು ವ್ಯಂಗ್ಯ­ವಾ­ಡಿ­ದ್ದರು.

ಆ ವರ್ಷದಲ್ಲೂ  ಪ್ರಯ­ತ್ನ­ ಆಗಲಿಲ್ಲ. ಪುನಃ 2013ರ ಬಜೆಟ್‌­ನಲ್ಲೂ ಕೋಚ್‌ ಕಾರ್ಖಾನೆ ಘೋಷಣೆ ಆಗಿದೆ. 2013ರ ರಾಜ್ಯ ಬಜೆಟ್‌ನಲ್ಲಿಯೂ  ಕೋಲಾ­ರದಲ್ಲಿ ರೈಲ್ವೆ ಕೋಚ್‌ ಕಾರ್ಖಾನೆಗೆ ಅಗತ್ಯವಾದ ಭೂಮಿ ಹಾಗೂ ತನ್ನ ಪಾಲಿನ ಹಣ ಬಿಡುಗಡೆ ಮಾಡು­ವುದಾಗಿ ಪ್ರಸ್ತಾಪಿಸಲಾಗಿದೆ.

ಒಂದು ಕಾರ್ಖಾನೆ ಸ್ಥಾಪನೆ­ಗಾಗಿ ಇನ್ನೆಷ್ಟು ಬಜೆಟ್‌ಗಳು ಬರಬೇಕು? ಸುಮಾರು 5000 ಮಂದಿ ಉದ್ಯೋಗ ನೀಡುವ ಯೋಜನೆ ಆರಂಭ­­ವಾದಲ್ಲಿ ನಿರಂತರ ಬರಗಾಲಕ್ಕೆ ತುತ್ತಾಗಿ ಅಂತರ್ಜಲದ ಮಟ್ಟ 1500 ಅಡಿ ಆಳ ತಲುಪಿ­ರುವ ಬರಡು ಪ್ರದೇಶದ ಒಂದಿಷ್ಟು ಮಂದಿಗೆ ಉದ್ಯೋಗ ಸಿಗುವ ಭರವಸೆ ಇತ್ತು. ಆದರೆ ಈಡೇರಿಲ್ಲ. ಇದಕ್ಕೆ ರೈಲ್ವೆ ಸಚಿವರ ಅವಕೃ­ಪೆಯೋ, ರಾಜ್ಯ ಸರ್ಕಾರದ ನಿರಾಸಕ್ತಿಯೋ, ಈ ಯೋಜನೆಯ ರೂವಾರಿ ಕೇಂದ್ರ ಸಚಿವ ಕೆ.ಎಚ್‌. ಮುನಿಯಪ್ಪ ಅವರ ವೈಫಲ್ಯವೋ ಗೊತ್ತಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT