ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿ ಖರ್ಚಾದರೂ ಖಾಲಿ ಉಳಿದ ಕಟ್ಟಡ !

Last Updated 30 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಕೋಲಾರ: ಒಂದು ಕೋಟಿ ವೆಚ್ಚದಲ್ಲಿ ನಗರದ ಹೊರವಲಯದ ಅರಹಳ್ಳಿಯ ಪವರ್ ಗ್ರಿಡ್ ಪಕ್ಕ ಸರ್ಕಾರಿ ಕಾನೂನು ಕಾಲೇಜು ಹೊಸ ಕಟ್ಟಡ ನಿರ್ಮಾಣವಾಗಿ 8 ತಿಂಗಳಾದರೂ ಖಾಲಿಯೇ ಉಳಿದಿದೆ.

ನಗರದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದ ಇಕ್ಕಟ್ಟಿನಲ್ಲೆ ಕಳೆದ 15 ವರ್ಷಗಳಿಂದ ಕಾನೂನು ಕಾಲೇಜು ಕಾರ್ಯ ನಿರ್ವಹಿಸುತ್ತಿದೆ. ಇದೀಗ ಕಾಲೇಜನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬಾರದು ಎಂದು ಕಾನೂನು ವಿಶ್ವವಿದ್ಯಾಲಯವು ಪ್ರಾಂಶುಪಾಲರಿಗೆ ಸೂಚಿಸಿದೆ.

ನೀರಿನ ಸೌಕರ್ಯ, ಮೂಟ್ ಕೋರ್ಟ್ (ಅಣಕು ನ್ಯಾಯಾಲಯ) ಮತ್ತು ತರಗತಿ ಕೊಠಡಿಗಳು ಇಲ್ಲದಿರುವುದರಿಂದ ಅಲ್ಲಿಗೆ ಸ್ಥಳಾಂತರಿಸಿದರೆ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗುತ್ತದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಇತ್ತೀಚೆಗೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಎಸ್.ಬಾಗಲೆ ನೇತೃತ್ವದ ತಂಡ ಹೊಸ ಕಟ್ಟಡವನ್ನು ಪರಿಶೀಲಿಸಿದ ಬಳಿಕ, ಅಲ್ಲಿಗೆ ಸದ್ಯಕ್ಕೆ ಸ್ಥಳಾಂತರಗೊಳ್ಳಬಾರದು ಎಂದು ಸೂಚಿಸಿದೆ.

ದಿನಾಂಕಕ್ಕೆ ಕಾಯುತ್ತಿದ್ದೆವು: ‘ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಗೊಳ್ಳುವ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಮತ್ತು ಸಂಸದರನ್ನು ಆಹ್ವಾನಿಸಬೇಕು. ಅವರು ನೀಡುವ ದಿನಾಂಕಕ್ಕೆ ಕಾಯುತ್ತಿದ್ದೆವು.

ಈಗ ಕಾನೂನು ವಿಶ್ವವಿದ್ಯಾಲಯದ ಕುಲಸಚಿವರು ತಮ್ಮ ಭೇಟಿಯ ಸಂದರ್ಭದಲ್ಲಿ ಹೊಸ ಕಟ್ಟಡವನ್ನು ವೀಕ್ಷಿಸಿ ಕಾಲೇಜನ್ನು ಅಲ್ಲಿಗೆ ಸ್ಥಳಾಂತರ ಮಾಡಬಾರದು ಎಂದು ಸೂಚಿಸಿದ್ದಾರೆ’ ಎಂಬುದು ಪ್ರಾಂಶುಪಾಲ ಕೆ.ಎನ್.ಕೃಷ್ಣಪ್ಪ ಅವರು ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT