ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿ ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ

Last Updated 16 ಫೆಬ್ರುವರಿ 2012, 6:10 IST
ಅಕ್ಷರ ಗಾತ್ರ

ಭಟ್ಕಳ: ಮುರ್ಡೇಶ್ವರದ ಮಾವಳ್ಳಿ ಗ್ರಾ.ಪಂ.ವ್ಯಾಪ್ತಿಯ ಜನರ ಬಹು ದಿನಗಳ ಬೇಡಿಕೆಯಾಗಿದ್ದ ರೂ 1 ಕೋಟಿ ವೆಚ್ಚದಲ್ಲಿ ಕಾರಿಹಳ್ಳದ ಹೂಳೆತ್ತುವ ಕಾಮಗಾರಿಗೆ ಶಾಸಕ ಜೆ.ಡಿ.ನಾಯ್ಕ ಸೋಮವಾರ ಗುದ್ದಲಿಪೂಜೆ ನೆರವೇರಿ ಸುವ ಮೂಲಕ ಚಾಲನೆ ನೀಡಿದರು.

ಮುರ್ಡೇಶ್ವರದ ಕಾರಿಹಳ್ಳದಲ್ಲಿ ಹಲವು ವರ್ಷಗಳಿಂದ ಹೂಳು ತುಂಬಿತ್ತು. ಇದರಿಂದ ಮಳೆಗಾಲದಲ್ಲಿ ಹಳ್ಳದಲ್ಲಿ ಸರಾಗವಾಗಿ ನೀರು ಹರಿ ಯದೇ, ಮುಖ್ಯರಸ್ತೆಯಲ್ಲಿ ಹರಿದು ಸಂಚರಿಸುವ ವಾಹನಗಳಿಗೆ ತೀವ್ರ ಅಡಚಣೆಯಾಗುತ್ತಿತ್ತು. ಅಲ್ಲದೇ ಸನಿಹದ ಮನೆ, ಅಂಗಡಿ ಮುಗ್ಗಟ್ಟು ಗಳಿಗೆ, ಜತೆಗೆ ಕೃಷಿ ಭೂಮಿಗಳಿಗೂ ನೀರು ನುಗ್ಗಿ ಪ್ರತಿವರ್ಷ ರೈತರು ಬೆಳೆಹಾನಿ ಅನುಭವಿಸುತ್ತಿದ್ದರು.

ಈ ಬಗ್ಗೆ ಸರ್ಕಾರಕ್ಕೆ, ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಸಮಸ್ಯೆ ಬಗ್ಗೆ ಜನಸ್ಪಂದನಾ ಸಭೆಯಲ್ಲಿ ಶಾಸಕರ ಗಮನಕ್ಕೆ ತರಲಾಗಿತ್ತು. ಸಮಸ್ಯೆಗೆ ಸ್ಪಂದಿಸಿದ ಶಾಸಕ ಜೆ.ಡಿ.ನಾಯ್ಕ,ಸರ್ಕಾರದ ಚಿಕ್ಕ ನೀರಾವರಿ ಇಲಾಖೆಯಿಂದ 1 ಕೋಟಿ ರೂ ವೆಚ್ಚದಲ್ಲಿ ಹೂಳೆತ್ತುವ ಕಾಮ ಗಾರಿಗೆ ಮಂಜೂರಿ ಮಾಡಿಸಿ ಕಾಮ ಗಾರಿಗೆ ಚಾಲನೆಯನ್ನೂ ನೀಡಿದ್ದು ಈ ಭಾಗದ ನಾಗರಿಕರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಗುದ್ದಲಿಪೂಜೆ ನೆರೆವೇರಿಸಿದ ಶಾಸಕರು ಕಾಮಗಾರಿಯನ್ನು ಗುಣ ಮಟ್ಟದಲ್ಲಿ ತ್ವರಿತಗತಿಯಲ್ಲಿ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಶ್ರೀಪಾದ ಕಾಮತ್, ಮಾವಳ್ಳಿ ಗ್ರಾಪಂ ಅಧ್ಯಕ್ಷೆ ನಾಗರತ್ನ ಪಡಿಯಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಕುಮಾರ ನಾಯ್ಕ, ಸಣ್ಣ ನೀರಾವರಿ ಇಲಾಖೆಯ  ಎಂಜಿನಿಯರ್ ವಸಂತ ನಾಯ್ಕ,  ರುದ್ರಪ್ಪ, ಸುಬ್ರಾಯ ನಾಯ್ಕ, ಗುತ್ತಿಗೆ ದಾರ ಕೆ.ಜೆ. ದೇವಾಡಿಗ, ವೆಂಕ್ಟಯ್ಯ ಭೈರುಮನೆ, ಜಯಪ್ರಕಾಶ ಕರ್ಕಿಕರ್, ದೇವಿದಾಸ ನಾಯ್ಕ, ಮುರಾರಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT