ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋತಿ ಸೆರೆ: ಕೂಡ್ಲಿಗಿ ನಿರಾಳ

Last Updated 4 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ಕೂಡ್ಲಿಗಿ: ಪಟ್ಟಣದಲ್ಲಿ ಕಳೆದ ಮೂರು ತಿಂಗಳಿನಿಂದಲೂ ಹಾವಳಿಯನ್ನುಂಟು ಮಾಡುತ್ತಿದ್ದ ಕೋತಿಯನ್ನು ಸೋಮವಾರ ಪಟ್ಟಣ ಪಂಚಾಯಿತಿ ವತಿಯಿಂದ ಸೆರೆಹಿಡಿಯಲಾಯಿತು. ಪಟ್ಟಣ ಪಂಚಾಯಿತಿ ಸಿಬ್ಬಂದಿ, ಸತತವಾಗಿ ಮೂರು ದಿನ ಪ್ರಯತ್ನಿಸಿ ಕೋತಿಯನ್ನು ಪಂಜರದಲ್ಲಿ ಬಂಧಿಸುವ್ಲ್ಲಲಿ ಯಶಸ್ವಿಯಾದರು.

ಪಟ್ಟಣದಲ್ಲಿ ಈ ಮೊದಲು ಕೋತಿಗಳ ಹಾವಳಿ ವಿಪರೀತವಾದಾಗ ಪಟ್ಟಣ ಪಂಚಾಯಿತಿ ವತಿಯಿಂದ ಆಪ ರೇಷನ್ ಮಂಕಿ ಎಂಬ ಕಾರ್ಯಾಚರಣೆ ನಡೆಸಿ ಕೋತಿಗಳನ್ನು ಬಂಧಿಸಿ ದೂರದ ಪ್ರದೇಶದಲ್ಲಿ ಕಳಿಸಿತ್ತು.
ಆದರೆ ಇತ್ತೀಚೆಗೆ ಕೆಲವು ತಿಂಗಳಿಂದ ಮತ್ತೆ ಕೋತಿಗಳು ಪ್ರತ್ಯಕ್ಷವಾಗಿ, ಅದರಲ್ಲೂ ಒಂದು ಕೋತಿ ಮಾತ್ರ ಅಪಾಯಕಾರಿಯಾಗಿ ಪರಿಣಮಿಸಿತ್ತು.

ಪಟ್ಟಣದ ಹಲವಾರು ಜನ ಕೋತಿಯ ಉಪಟಳದಿಂದ ಗಾಯ ಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಪ್ರತಿಫಲನಗೊಳ್ಳುವ ಕಾಜಿನ ವಸ್ತುಗಳನ್ನು ಕಂಡರೆ ಕೆರಳುವ ಈ ಕೋತಿಯು ನೇರವಾಗಿ ಮನೆಗೇ ನುಗ್ಗಿ ಯಾರೇ ಇದ್ದರೂ ಹೆದರಿಸು ತ್ತಿದ್ದು, ಇಲ್ಲವೆ ದಾಳಿ ನಡೆಸುತ್ತಿತ್ತು. ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಗಮನಿಸಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರೇಮ ಚಾರ್ಲ್ಸ್ ಹಾಗೂ ಸಿಬ್ಬಂದಿ, ಆರೋಗ್ಯಾಧಿಕಾರಿ ಲತಾ ತಕ್ಷಣವೇ ಕ್ರಮ ಕೈಗೊಂಡರು.

ಪ.ಪಂ ಸಿಬ್ಬಂದಿಯವರು ಅರಣ್ಯ ಇಲಾಖೆಯಿಂದ ಬೋನನ್ನು ಪಡೆದು, ಅದರಲ್ಲಿ ಪ್ರತಿಫಲಿಸುವ ಕನ್ನಡಿ ಇರಿಸಿದರು. ಇದಕ್ಕೆ ಆಕರ್ಷಿತವಾದ ಕೋತಿಯು ಕನ್ನಡಿಯನ್ನು ಒಡೆಯು ವಾಗ ತಕ್ಷಣವೇ ಪಂಜರದಲ್ಲಿ ಬಂಧಿಸ ಲಾಯಿತು ಎಂದು ಮುಖ್ಯಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT