ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟಿಗೆ ನಿತ್ಯಾನಂದ ಹಾಜರು: ಪಾಸ್‌ಪೋರ್ಟ್ ವಾಪಸು

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಜಿಲ್ಲಾ ನ್ಯಾಯಾಲಯದ ವಶದಲ್ಲಿದ್ದ ತಮ್ಮ `ಪಾಸ್‌ಪೋರ್ಟ್~ ಅನ್ನು ಹಿಂಪಡೆಯುವ ಸಂಬಂಧ ಬಿಡದಿ ಬಳಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಶನಿವಾರ ರಾಮನಗರದ ನ್ಯಾಯಾಲಯಕ್ಕೆ ಹಾಜರಾದರು.

ಮೂರು ತಿಂಗಳ ಹಿಂದಷ್ಟೇ ನ್ಯಾಯಾಲಯದಿಂದ ತಮ್ಮ ಬ್ಯಾಂಕ್ ಖಾತೆಯ `ಪಾಸ್‌ಬುಕ್~ಗಳನ್ನು ಪಡೆದಿದ್ದ ಸ್ವಾಮೀಜಿ ಶನಿವಾರ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ತಮ್ಮ `ಪಾಸ್‌ಪೋರ್ಟ್~ ಹಿಂಪಡೆದರು.

`ಪಾಸ್‌ಪೋರ್ಟ್~ ಮುಟ್ಟುಗೋಲು ಹಾಕಿಕೊಂಡಿರುವ ವಿಷಯವನ್ನು ಈ ಮುನ್ನ ಸ್ವಾಮೀಜಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. `ನಿಗದಿತ ಬಾಂಡ್ ಸಲ್ಲಿಸಿ ಪಾಸ್‌ಪೋರ್ಟ್ ಹಿಂಪಡೆಯಬಹುದು, ಆದರೆ ವಿದೇಶಗಳಿಗೆ ಹೋಗುವುದಕ್ಕೆ ಸ್ಥಳೀಯ ನ್ಯಾಯಾಲಯದ ಅನುಮತಿ ಪಡೆಯಬೇಕು~ ಎಂದು  ಹೈಕೋರ್ಟ್ ಷರತ್ತು ವಿಧಿಸಿ ತೀರ್ಪು ನೀಡಿತ್ತು.

ಅದರಂತೆ ಅವರು ಶನಿವಾರ ಜಿಲ್ಲೆಯ ನ್ಯಾಯಾಲಯಕ್ಕೆ ಹಾಜರಾಗಿ 10 ಸಾವಿರ ರೂ. ಬಾಂಡ್ ಸಲ್ಲಿಸಿ, ಮುಚ್ಚಳಿಕೆ ಪತ್ರ ಬರೆದುಕೊಟ್ಟು ಪಾಸ್‌ಪೋರ್ಟ್ ಹಿಂಪಡೆದರು.

`ರಾಸಲೀಲೆ~ ಪ್ರಕರಣದ ಸಂದರ್ಭದಲ್ಲಿ ಪೊಲೀಸರು ನಿತ್ಯಾನಂದ ಸ್ವಾಮೀಜಿ ಅವರ `ಪಾಸ್‌ಬುಕ್~ ಮತ್ತು `ಪಾಸ್‌ಪೋರ್ಟ್~ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT