ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರದ 33,313 ಮನೆಗಳಲ್ಲಿಲ್ಲ ಶೌಚಾಲಯ

Last Updated 20 ಸೆಪ್ಟೆಂಬರ್ 2013, 8:31 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನಾದ್ಯಂತ 33,313 ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಈ ನಿಟ್ಟಿನಲ್ಲಿ ಪ್ರಸ್ತುತ ಸಾಲಿನಲ್ಲಿ 5,535 ಶೌಚಾಲಯ­ಗಳನ್ನು  ನಿರ್ಮಿಸುವ ಗುರಿ ಇದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾ­ಲಯಗಳ ಬಳಕೆ ಕುರಿತು ಜಾಗೃತಿ ಮೂಡಿಸುವ ಕೆಲಸ ನಿರಂತರ­ವಾಗಿ ನಡೆಯಬೇಕಾಗಿದೆ ಎಂದು ನಿರ್ಮಲ ಭಾರತ ಅಭಿಯಾನದ ಜಿಲ್ಲಾ ಸಮಾಲೋಚಕ ಎನ್.ಮುನಿ­ಸ್ವಾಮಿ­ನಾಯ್ಡು ಹೇಳಿದರು.

ಶೌಚಾಲಯ ನಿರ್ಮಾಣದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಗರದ ತಾಲ್ಲೂಕು ಪಂಚಾಯತಿ ಸಾಮರ್ಥ್ಯ ಸೌಧದಲ್ಲಿ ಗುರುವಾರ ನಿರ್ಮಲ ಭಾರತ ಅಭಿಯಾನದ ವತಿ­ಯಿಂದ ಗ್ರಾಮ ಪಂಚಾಯತಿ ಸದಸ್ಯ­ರಿಗೆ ಏರ್ಪಡಿಸಿದ್ದ ಶಿಕ್ಷಣ ಮತ್ತು ಸಂವಹನ ಕಾರ್ಯಾಗಾರದಲ್ಲಿ ಮಾತ­ನಾಡಿ, ಸ್ವಾತಂತ್ರ್ಯಕ್ಕಿಂತಲೂ ಸ್ವಚ್ಛ­ತೆಯೇ ಶ್ರೇಷ್ಠ ಎಂಬುದನ್ನು ಅರಿಯ­ಬೇಕಾಗಿದೆ ಎಂದರು.       

ಈ ಮುಂಚೆ ಅಸ್ತಿತ್ವದಲ್ಲಿದ್ದ ಸಂಪೂರ್ಣ ಸ್ವಚ್ಛತಾ ಆಂದೋಲನದ ನಿಗದಿತ ಗುರಿಯು ನಿಗದಿತ ಅವಧಿ­ಯೊಳಗೆ ಪೂರ್ಣಗೊಳ್ಳದ ಪರಿ­ಣಾಮ-­ವಾಗಿ ನಿರ್ಮಲ ಭಾರತ  ಅಭಿಯಾನ­ವನ್ನು ರೂಪಿಸಲಾಗಿದೆ. 33 ಸಾವಿ­ರಕ್ಕೂ ಹೆಚ್ಚು ಕುಟುಂಬ­ಗಳಿಗೆ ಶೌಚಾ­ಲಯ ಸೌಕರ್ಯವಿಲ್ಲ ಎಂಬುದು ಶೋಚನೀಯ ಸಂಗತಿ ಎಂದು ಹೇಳಿದರು.

ಮುಂದಿನ 5 ವರ್ಷದಲ್ಲಿ ತಾಲ್ಲೂ­ಕಿನ ಎಲ್ಲ ಗ್ರಾಮೀಣ ಕುಟುಂಬ­ಗಳಲ್ಲಿ ಶೌಚಾಲಯ ನಿರ್ಮಿಸುವಲ್ಲಿ ಜನ ಜಾಗೃತಿ ಮೂಡಿಸಬೇಕಾಗಿದೆ   ಎಂದರು.  ಅಭಿಯಾನದ ಸಂಯೋ­­ಜಕ ಜಿ.ಶ್ರೀನಿ­ವಾಸ್, 27ರ­ವರೆಗೂ ಕಾರ್ಯಾ­ಗಾರ ನಡೆಯಲಿದೆ, 20­ರಂದು ಹುತ್ತೂರು ಹೋಬಳಿ, 21–ಸುಗಟೂರು, 23–ನರಸಾಪುರ, 24–ವಕ್ಕಲೇರಿ, 26–ವೇಮಗಲ್‌ ಮತ್ತು 27–ಅರಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾ.ಪಂ.ಸದಸ್ಯರಿಗೆ ತರಬೇತಿ ನೀಡ­ಲಾಗು­ವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT