ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌನ್ಸೆಲಿಂಗ್ ಪ್ರವೇಶಾತಿ ಆರಂಭ

ಮಂಗಳೂರು ವಿ.ವಿ.ಕ್ಯಾಂಪಸ್
Last Updated 16 ಜುಲೈ 2013, 11:22 IST
ಅಕ್ಷರ ಗಾತ್ರ

ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಳೆದ ವರ್ಷದಿಂದ ಸ್ನಾತಕೋತ್ತರ ವಿಭಾಗಕ್ಕೆ ಸೇರಬಯಸುವ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮೂಲಕ ಕೇಂದ್ರೀಕೃತ ಪ್ರವೇಶಾತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಬಾರಿಯೂ ವಿ.ವಿ.ಯ ಮಂಗಳಾ ಸಭಾಂಗಣದಲ್ಲಿ ಸೋಮವಾರ ಕೌನ್ಸೆಲಿಂಗ್ ಆರಂಭಗೊಂಡಿದ್ದು ಬುಧವಾರದ ವರೆಗೆ ನಡೆಯಲಿದೆ.

ವಿಜ್ಞಾನ ವಿಭಾಗಗಳಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಸೋಮವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕೌನ್ಸೆಲಿಂಗ್ ನಡೆಯಿತು. ಮಂಗಳವಾರ ಕಲಾ ವಿಭಾಗ ಹಾಗೂ ಬುಧವಾರ ಕಾಮರ್ಸ್ ವಿಭಾಗಕ್ಕೆ ಕೌನ್ಸೆಲಿಂಗ್ ನಡೆಯಲಿದೆ. ಕಳೆದ ವರ್ಷ ಹಳೆ ಸೆನೆಟ್ ಸಭಾಂಗಣ ಹಾಗೂ ಬೇರೆ ಬೇರೆ ವಿಭಾಗಗಳಲ್ಲಿ ಈ ಪ್ರಕ್ರಿಯೆ ನಡೆಸಲಾಗಿತ್ತು. ಈ ವರ್ಷ ವಿಶಾಲವಾದ ಮಂಗಳಾ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸೋಮವಾರ ವಿಜ್ಞಾನ ನಿಕಾಯದ ಜೀವಶಾಸ್ತ್ರ, ಜೀವ ತಂತ್ರಜ್ಞಾನ (ಬಯೋ ಟೆಕ್ನಾಲಜಿ), ಅನ್ವಯಿಕ ಪ್ರಾಣಿಶಾಸ್ತ್ರ, ಅನ್ವಯಿಕ ಸಸ್ಯಶಾಸ್ತ್ರ, ರಸಾಯನ ಶಾಸ್ತ್ರ, ಕೈಗಾರಿಕಾ ರಸಾಯನ ಶಾಸ್ತ್ರ, ಅನ್ವಯಿಕ ರಸಾಯನ ಶಾಸ್ತ್ರ, ಸಾವಯವ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಸಾಗರ ಭೂ-ವಿಜ್ಞಾನ ವಿಭಾಗ ಮತ್ತಿತರ ವಿಭಾಗಗಳಿಗೆ ಕೌನ್ಸೆಲಿಂಗ್ ನಡೆಯಿತು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೇರೆ ಬೇರೆ ಕೌಂಟರ್‌ಗಳನ್ನು ತೆರೆಯಲಾಗಿತ್ತು.

ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮೆರಿಟ್ ಸೀಟ್ ಹಾಗೂ ಪೇಮೆಂಟ್ ಸೀಟ್‌ಗಳಿಗೂ ಅವಕಾಶವನ್ನು ಒದಗಿಸಿ ಕೊಡಲಾಗಿತ್ತು. ಎರಡ್ಮೂರು ವಿಭಾಗಗಳಿಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳಿಗೂ ಈ ಕೇಂದ್ರೀಕೃತ ಕೌನ್ಸೆಲಿಂಗ್ ಪ್ರವೇಶಾತಿಯಿಂದ ಅನುಕೂಲವಾಯಿತು.

ರಸಾಯನ ಶಾಸ್ತ್ರ, ಭೌತಶಾಸ್ತ್ರ, ಅನ್ವಯಿಕ ಪ್ರಾಣಿ ಶಾಸ್ತ್ರ, ಅನ್ವಯಿಕ ಸಸ್ಯಶಾಸ್ತ್ರ ವಿಭಾಗಗಳಿಗೆ ಸೇರಲು ವಿದ್ಯಾರ್ಥಿಗಳಿಂದ ಹೆಚ್ಚಿನ ಬೇಡಿಕೆ ಕಂಡು ಬಂದಿತ್ತು.

ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬ್ಯಾಂಕ್ ವ್ಯವಸ್ಥೆ, ಕ್ಯಾಂಟೀನ್ ವ್ಯವಸ್ಥೆ ಹಾಗೂ ಹಾಸ್ಟೆಲ್‌ಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿತ್ತು.

ರಸಾಯನ ಶಾಸ್ತ್ರ ಆಯ್ಕೆ ಮಾಡಿಕೊಂಡೆ: ನಾನು ವಿಜ್ಞಾನದ ನಾಲ್ಕು ವಿಭಾಗಗಳ ರಸಾಯನಶಾಸ್ತ್ರ, ಜೀವವಿಜ್ಞಾನ, ಬಯೋಕೆಮಿಸ್ಟ್ರಿ ಹಾಗೂ ಬಯೋ ಟೆಕ್ನಾಲಜಿಗೆ ಅರ್ಜಿ ಹಾಕಿದ್ದೆ. ಕೌನ್ಸೆಲಿಂಗ್ ಪ್ರಾರಂಭದಲ್ಲಿ ಬಯೋ ಟೆಕ್ನಾಲಜಿಯಲ್ಲಿ ಮೆರಿಟ್ ಸೀಟ್ ಲಭಿಸಿತ್ತು.

ನನ್ನ ಆಸಕ್ತಿಯ ಕ್ಷೇತ್ರ ರಸಾಯನಶಾಸ್ತ್ರ ವಾಗಿ ದ್ದರಿಂದ ಪೇಮೆಂಟ್ ಸೀಟ್‌ನಲ್ಲಿ ಅವಕಾಶ ದೊರೆತುದರಿಂದ ರಸಾಯನಶಾಸ್ತ್ರ  ಆಯ್ಕೆ ಮಾಡಿಕೊಂಡೆ. ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭದಲ್ಲಿ ನನಗೆ ಗೊಂದಲ ಆಗಿತ್ತು. ಪ್ರಾಜೆಕ್ಟರ್ ಮೂಲಕ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದ್ದರೂ ಅದು ಸರಿಯಾಗಿ ಕಾಣಿಸುತ್ತಿರಲಿಲ್ಲ.  -ಸನತ್, ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT