ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ ಫಿನ್ ಹೋಮ್ಸ ನೂತನ ಶಾಖೆ ಆರಂಭ

Last Updated 4 ಅಕ್ಟೋಬರ್ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಉತ್ತರಹಳ್ಳಿಯಲ್ಲಿ ಕ್ಯಾನ್ ಫಿನ್ ಹೋಮ್ಸ ಲಿಮಿಟೆಡ್‌ನ ನೂತನ ಶಾಖೆಯನ್ನು ಕೆನರಾ ಬ್ಯಾಂಕ್ ಕಾರ್ಯಕಾರಿ ನಿರ್ದೇಶಕರಾದ ಅರ್ಚನಾ ಎಸ್. ಭಾರ್ಗವ ಅವರು ಸೋಮವಾರ ಉದ್ಘಾಟಿಸಿದರು.

ಕೆನರಾ ಬ್ಯಾಂಕ್ ಆಶ್ರಯದಲ್ಲಿ 1987ರಲ್ಲಿ ಸ್ಥಾಪನೆಯಾದ ಕ್ಯಾನ್ ಫಿನ್ ಹೋಮ್ಸ ಲಿಮಿಟೆಡ್ (ಸಿಎಫ್‌ಎಚ್‌ಎಲ್) ಇಂದು ದೇಶದಾದ್ಯಂತ 41 ಶಾಖೆಗಳನ್ನು ಹೊಂದಿದೆ. ಸಂಸ್ಥೆಯ ರಜತ ಮಹೋತ್ಸವದ ಸಂದರ್ಭದಲ್ಲಿ ಅಂದರೆ 2012ರ ಮಾರ್ಚ್ ಹೊತ್ತಿಗೆ ಶಾಖೆಗಳ ಸಂಖ್ಯೆಯನ್ನು 50ಕ್ಕೆ ಏರಿಕೆ ಮಾಡುವ ಗುರಿ ಇದೆ ಎಂದು ಪ್ರಕಟಣೆ ತಿಳಿಸಿದೆ.

ಆ ಹಿನ್ನೆಲೆಯಲ್ಲಿ ಸೋಮವಾರ ಉತ್ತರಹಳ್ಳಿಯಲ್ಲಿ ನೂತನ ಶಾಖೆ ಆರಂಭಿಸಲಾಗಿದೆ. ಅದೇ ದಿನ ಹೊಸೂರಿನಲ್ಲೂ ನೂತನ ಶಾಖೆ ಕಾರ್ಯಾರಂಭ ಮಾಡಿದೆ. ಇದೇ 7ರಂದು ತುಮಕೂರು, 10ರಂದು ಚೆನ್ನೈನ ಅಂಬತ್ತೂರ್ ಹಾಗೂ ನವೆಂಬರ್ 3ರಂದು ಗುಂಟೂರಿನಲ್ಲಿ ನೂತನ ಶಾಖೆಗಳು ಆರಂಭವಾಗಲಿವೆ. ಬರುವ ಜನವರಿ ವೇಳೆಗೆ ಇನ್ನೂ ನಾಲ್ಕು ಹೊಸ ಶಾಖೆಗಳನ್ನು ಆರಂಭಿಸಲಾಗುವುದು ಎಂದು ಸಂಸ್ಥೆ ಪ್ರಕಟಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT