ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್; ರೇಡಿಯಂ ವಿಕಿರಣ ಸಹಕಾರಿ

Last Updated 12 ಸೆಪ್ಟೆಂಬರ್ 2011, 8:35 IST
ಅಕ್ಷರ ಗಾತ್ರ

ಬೀದರ್: ನೋಬೆಲ್ ಪ್ರಶಸ್ತಿ ಪುರಸ್ಕೃತೆ ಮೇಡಂ ಕ್ಯೂರಿ ಅವರು ಕಂಡು ಹಿಡಿದಿರುವ ರೇಡಿಯಂ ವಿಕಿರಣವು ಕ್ಯಾನ್ಸರ್ ರೋಗ ಚಿಕಿತ್ಸೆಗೆ ನಾಂದಿ ಆಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ಪ್ರಾಧ್ಯಾಪಕ ಪ್ರೊ. ಜೆ.ಎಸ್. ಬಿರಾದಾರ ತಿಳಿಸಿದರು.

ಅಂತರರಾಷ್ಟ್ರೀಯ ರಸಾಯನಶಾಸ್ತ್ರ ವರ್ಷಾಚರಣೆ ನಿಮಿತ್ತ ನಗರದ ಕರ್ನಾಟಕ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಹಾಗೂ ಪದವಿ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ನಿಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಂಶೋಧನಾ ಕ್ಷೇತ್ರದಲ್ಲಿ ಕ್ಯೂರಿ ಅವರ ಕೊಡೆಯು ಅಂತರರಾಷ್ಟ್ರೀಯ ರಸಾಯನಶಾಸ್ತ್ರ ವರ್ಷಾಚರಣೆಗೆ ಪ್ರರಣೆ ಆಗಿದೆ ಎಂದು ಹೇಳಿದರು.

ಮೆಡಂ ಕ್ಯೂರಿ 1911ರಲ್ಲಿ  ರೇಡಿಯಂ ಮತ್ತು ಪೊಲಿನಿಯಂ ಮೂಲ ಧಾತುಗಳನ್ನು ಕಂಡು ಹಿಡಿದಿದ್ದರು.
ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ಎರಡೂ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ ಅವರಾಗಿದ್ದಾರೆ ಎಂದು ಎಂದರು.

ರಸಾಯನಶಾಸ್ತ್ರ ವಿಜ್ಞಾನದ ಮೂಲ ವಿಷಯಗಳಲ್ಲಿ ಒಂದಾಗಿದೆ. ಔಷಧ, ಆರೋಗ್ಯ, ಇಂಧನ ಮತ್ತಿತರ ಕ್ಷೇತ್ರಗಳಲ್ಲಿ ರಸಾಯನಶಾಸ್ತ್ರ ಮಹತ್ವ ಪಡೆದಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ ಹೇಳಿದರು.

ಡಾ. ಬಿ.ಎಸ್. ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ವಿ. ಧನಪಾಲ್ ಸ್ವಾಗತಿಸಿದರು. ಪೂಜಾ ರಂಗಾ ನಿರೂಪಿಸಿದರು. ಮನಸಾ ಸಲಗಾರ ವಂದಿಸಿದರು.

ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾ ಪಾಂಡೆ ಪ್ರಥಮ, ಬಿವಿಬಿ ಕಾಲೇಜು ವಿದ್ಯಾರ್ಥಿನಿ ಪ್ರೀಯಾಂಕ ಉಪಕಾರೆ ದ್ವೀತಿಯ ಹಾಗೂ ಬಸವಕಲ್ಯಾಣದ ಎಸ್‌ಎಸ್‌ಕೆ ಕಾಲೇಜಿನ ನಿತೀನ್ ಎಸ್. ತೃತೀಯ ಸ್ಥಾನ ಪಡೆದರು. `ನಿತ್ಯ ಜೀವನದಲ್ಲಿ ರಸಾಯನಶಾಸ್ತ್ರ ಪ್ರಾಮುಖ್ಯತೆ~ ಕುರಿತು ನಿಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT