ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಆಸೀಸ್ ಆಟಗಾರರ ಆಗಮನ

Last Updated 8 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೆಲವು ಆಟಗಾರರು ಗುರುವಾರ ರಾತ್ರಿ ಇಲ್ಲಿಗೆ ಆಗಮಿಸಿದರು.

ಆಸೀಸ್ ತಂಡ ಇದೀಗ ತವರಿನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಆಡುತ್ತಿದೆ. ಆದ್ದರಿಂದ ಇತರ ಆಟಗಾರರು ವಿಂಡೀಸ್ ಎದುರಿನ ಸರಣಿ ಕೊನೆಗೊಂಡ ಬಳಿಕವಷ್ಟೇ ಭಾರತಕ್ಕೆ ಆಗಮಿಸಲಿದ್ದಾರೆ.

ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಚೆನ್ನೈನಲ್ಲಿ ಫೆಬ್ರುವರಿ 22 ರಿಂದ ಆರಂಭವಾಗಲಿದೆ. ಅದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡಲಿದೆ.

ಭಾರತ ವಿರುದ್ಧದ ಪಂದ್ಯಕ್ಕೆ ತಂಡ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದೆ ಎಂಬ ವಿಶ್ವಾಸದಲ್ಲಿರುವುದಾಗಿ ಆಸೀಸ್ ತಂಡದ ನಥಾನ್ ಲಿಯೊನ್ ಹೇಳಿದ್ದಾರೆ. `ಭಾರತದಲ್ಲಿ ಆಡುವುದು ಸವಾಲಿನ ಸಂಗತಿ. ಇಂಗ್ಲೆಂಡ್‌ನ ಸ್ಪಿನ್ನರ್‌ಗಳು ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಆದ್ದರಿಂದ ಈ ಬಾರಿ ಆಸೀಸ್ ಕೂಡಾ ಎರಡು ಸ್ಪಿನ್ನರ್‌ಗಳನ್ನು ಆಡಿಸಲಿದೆ ಎಂಬ ವಿಶ್ವಾಸ ನನ್ನದು' ಎಂದು ನುಡಿದರು.

17 ಸದಸ್ಯರ ಆಸ್ಟ್ರೇಲಿಯಾ ತಂಡದಲ್ಲಿ ನಾಲ್ಕು ಮಂದಿ ಸ್ಪಿನ್ನರ್‌ಗಳಿದ್ದಾರೆ. ಲಿಯೊನ್ ಅಲ್ಲದೆ, ಸ್ಟೀವ್ ಸ್ಮಿತ್, ಕ್ಸೇವಿಯರ್ ಡೊಹರ್ಟಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ತಂಡದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT