ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಆಸ್ಟ್ರೇಲಿಯಾದ ಸಾಧಾರಣ ಮೊತ್ತ

Last Updated 18 ಡಿಸೆಂಬರ್ 2010, 8:05 IST
ಅಕ್ಷರ ಗಾತ್ರ

ಪರ್ತ್ (ಎಎಫ್‌ಪಿ): ತಲಾ ಮೂರು ವಿಕೆಟ್ ಕೆಡವಿದ ಜೇಮ್ಸ್ ಆ್ಯಂಡರ್ಸನ್ ಮತ್ತು ಕ್ರಿಸ್ ಟ್ರೆಮ್ಲೆಟ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ ತಂಡದವರು ಇಲ್ಲಿ ಆರಂಭವಾದ ಇಂಗ್ಲೆಂಡ್ ವಿರುದ್ಧದ   ‘ಆಷ್ಯಸ್’ ಸರಣಿಯ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 268 ರನ್‌ಗಳ ಸಾಧಾರಣ ಮೊತ್ತಕ್ಕೆ ಕುಸಿದರು.

ಕಾಂಗರೂಗಳ ನಾಡಿನವರು ಮುಂದಿಟ್ಟ ಮೊದಲ ಇನಿಂಗ್ಸ್‌ನ ಸಾಧಾರಣ ಮೊತ್ತವನ್ನು ಚುಕ್ತಾ ಮಾಡಿ, ಬೇಗ ಇನಿಂಗ್ಸ್ ಮುನ್ನಡೆ ಪಡೆಯುವ ಉತ್ಸಾಹದಲ್ಲಿದೆ ಇಂಗ್ಲೆಂಡ್. ಗುರುವಾರ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ನವರು ತಮ್ಮ ಪ್ರಥಮ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆಯೇ 29 ರನ್ ಕಲೆಹಾಕಿದರು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 70.3 ಓವರುಗಳಲ್ಲಿ 268 (ಮೈಕ್ ಹಸ್ಸಿ 61, ಬ್ರಾಡ್ ಹಡ್ಡೀನ್ 53, ಮಿಷೆಲ್ ಜಾನ್ಸನ್ 62; ಜೇಮ್ಸ್ ಆ್ಯಂಡರ್ಸನ್ 61ಕ್ಕೆ3, ಕ್ರಿಸ್ ಟ್ರೆಮ್ಲೆಟ್ 63ಕ್ಕೆ3); ಇಂಗ್ಲೆಂಡ್: ಮೊದಲ ಇನಿಂಗ್ಸ್ 12 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 29 (ಆ್ಯಂಡ್ರ್ಯೂ ಸ್ಟ್ರಾಸ್ 12, ಆಲಿಸ್ಟರ್ ಕುಕ್ 12).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT