ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಇಂಗ್ಲೆಂಡ್ ತಂಡಕ್ಕೆ ಮುನ್ನಡೆ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಬೌಲರ್‌ಗಳು ಮೇಲುಗೈ ಪಡೆದ ಮೊದಲ ದಿನದಾಟದ ಕೊನೆಯಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಐದು ರನ್‌ಗಳ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಕೇವಲ 99 ರನ್‌ಗಳಿಗೆ ಆಲೌಟಾಯಿತು. ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಆರು ವಿಕೆಟ್‌ಗೆ 104 ರನ್ ಗಳಿಸಿತ್ತು.

ಆ್ಯಂಡ್ರ್ಯೂ ಸ್ಟ್ರಾಸ್ (ಅಜೇಯ 41) ಮತ್ತು ಕೆವಿನ್ ಪೀಟರ್‌ಸನ್ (32) ಅವರ ತಾಳ್ಮೆಯ ಆಟದ ನೆರವಿನಿಂದಾಗಿ ಇಂಗ್ಲೆಂಡ್ ಮೇಲುಗೈ ಪಡೆಯಿತು. ಅಬ್ದುರ್ ರಹಮಾನ್ (23ಕ್ಕೆ 3) ಪಾಕ್ ಪರ ಯಶಸ್ವಿ ಬೌಲರ್ ಎನಿಸಿದರು.
ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಬ್ಯಾಟಿಂಗ್ ಮಾಡಲು ತೀರ್ಮಾನಿಸಿದರು. ಆದರೆ ಸ್ಟುವರ್ಟ್ ಬ್ರಾಡ್ (36ಕ್ಕೆ 4) ಮತ್ತು ಜೇಮ್ಸ ಆ್ಯಂಡರ್‌ಸನ್ (35ಕ್ಕೆ 3) ಅವರ ಮಾರಕ ದಾಳಿಗೆ ತಂಡ ಕುಸಿತ ಕಂಡಿತು.

ಅಸದ್ ಶಫೀಕ್ (45) ಅವರನ್ನು ಬಿಟ್ಟರೆ ಉಳಿದ ಎಲ್ಲ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪೆರೇಡ್ ನಡೆಸಿದರು. ಪಾಕ್ ತಂಡ ಒಂದು ಹಂತದಲ್ಲಿ 44 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡಿತ್ತು. ಶಫೀಕ್ ಮತ್ತು ಸಯೀದ್ ಅಜ್ಮಲ್ (12) ಎಂಟನೇ ವಿಕೆಟ್‌ಗೆ 34 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: ಮೊದಲ ಇನಿಂಗ್ಸ್ 44.1 ಓವರ್‌ಗಳಲ್ಲಿ 99 (ಮೊಹಮ್ಮದ್ ಹಫೀಜ್ 13, ಅಸದ್ ಶಫೀಕ್ 45, ಉಮರ್ ಗುಲ್ 13, ಸ್ಟುವರ್ಟ್ ಬ್ರಾಡ್ 36ಕ್ಕೆ 4, ಜೇಮ್ಸ ಆ್ಯಂಡರ್‌ಸನ್ 35ಕ್ಕೆ 3, ಮಾಂಟಿ ಪನೇಸರ್ 25ಕ್ಕೆ 2). ಇಂಗ್ಲೆಂಡ್: ಮೊದಲ ಇನಿಂಗ್ಸ್ 43 ಓವರ್‌ಗಳಲ್ಲಿ 6 ವಿಕೆಟ್‌ಗೆ 104 (ಆ್ಯಂಡ್ರ್ಯೂ ಸ್ಟ್ರಾಸ್ ಬ್ಯಾಟಿಂಗ್ 41, ಕೆವಿನ್ ಪೀಟರ್‌ಸನ್ 32, ಅಬ್ದುರ್ ರಹಮಾನ್ 23ಕ್ಕೆ 3, ಉಮರ್ ಗುಲ್ 28ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT