ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಇನಿಂಗ್ಸ್ ಸೋಲಿನ ಭಯದಲ್ಲಿ ಭಾರತ

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ಪರ್ತ್: ಮತ್ತೆ ಇನಿಂಗ್ಸ್ ಸೋಲಿನ ಅಪಾಯದ ಕತ್ತಿ ಭಾರತದ ನೆತ್ತಿಯ ಮೇಲೆ ತೂಗಿದೆ. ಮುಖಭಂಗ ತಪ್ಪಿಸಿಕೊಳ್ಳಲು ಇನ್ನೂ 120 ರನ್ ಗಳಿಸಬೇಕು. ಅದೇ ಕಷ್ಟ!

ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ಗಟ್ಟಿಯಾಗಿ ನಿಂತಿದ್ದಾರೆ. 37 ರನ್‌ಗಳ ಐದನೇ ವಿಕೆಟ್ ಜೊತೆಯಾಟ ಕೂಡ ಆಡಿದ್ದಾರೆ. ಇವರಿಬ್ಬರೂ ಕ್ರೀಸ್‌ನಲ್ಲಿ ಇರುವಷ್ಟು ಹೊತ್ತು ಮಾತ್ರ ಧೈರ್ಯ. ಆನಂತರದ ಕಥೆಯೇನು? ಕಾಯ್ದು ನೋಡಬೇಕು. ತೃತೀಯ ಟೆಸ್ಟ್‌ನ ಮೂರನೇ ದಿನದಾಟದಲ್ಲಿ ಎಷ್ಟು ಸಮಯ ಆಸ್ಟ್ರೇಲಿಯಾದ ವೇಗಿಗಳನ್ನು ಸಹಿಸಿಕೊಳ್ಳುತ್ತಾರೆ ಎನ್ನುವುದೇ ಸೋಲಿನ ಅಂತರವನ್ನು ನಿರ್ಣಯಿಸಲಿದೆ.

ಆತಿಥೇಯರಂತೂ ಈಗಾಗಲೇ ಸರಣಿ ವಿಜಯೋತ್ಸವ ಆಚರಿಸಲು ಸಜ್ಜಾಗಿದ್ದಾರೆ. ಮತ್ತೆ ಬ್ಯಾಟಿಂಗ್ ಮಾಡುವಂಥ ಸ್ಥಿತಿ ಎದುರಾಗದಂತೆ ಬೌಲಿಂಗ್ ದಾಳಿ ನಡೆಸುವ ಶಕ್ತಿಯೂ ಕಾಂಗರೂಗಳ ನಾಡಿನ ಪಡೆಗಿದೆ.

ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪಡೆಗೆ ವಿದೇಶಿ ನೆಲದಲ್ಲಿ ಸತತ ಏಳನೇ ಟೆಸ್ಟ್ ಪರಾಭವವೂ ಖಚಿತ. ಆದರೆ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳುವ ಸಾಹಸ ಮಾಡಿದರೆ ಒಂದಿಷ್ಟು ಮಾನ ಉಳಿಯುತ್ತದೆ.

ಮೊದಲ ಇನಿಂಗ್ಸ್‌ನಲ್ಲಿ 161 ರನ್‌ಗೆ ಮುಗ್ಗರಿಸಿದ್ದ ಭಾರತವು ಎದುರಾಳಿಯನ್ನು ಬೇಗ ನಿಯಂತ್ರಿಸಲಂತೂ ಸಾಧ್ಯವಾಗಲಿಲ್ಲ. 4.83ರ ಸರಾಸರಿಯಲ್ಲಿ ರನ್‌ಗಳಿಸಿದ ಮೈಕಲ್ ಕ್ಲಾರ್ಕ್ ನೇತೃತ್ವದ ತಂಡವು 369 ರನ್‌ಗಳನ್ನು ಪೇರಿಸಿತು. ಪರಿಣಾಮ ಅದಕ್ಕೆ 208 ರನ್‌ಗಳ ಇನಿಂಗ್ಸ್ ಮುನ್ನಡೆ.

ಎಡ್ ಕೋವನ್ (74; 120 ಎಸೆತ, 10 ಬೌಂಡರಿ) ಹಾಗೂ ಡೇವಿಡ್ ವಾರ್ನರ್ (180; 159 ಎ., 20 ಬೌಂಡರಿ, 5 ಸಿಕ್ಸರ್) ನಡುವಣ ಮೊದಲ ವಿಕೆಟ್ ಜೊತೆಯಾಟ (214 ರನ್) ಮಾತ್ರ ಆಸ್ಟ್ರೇಲಿಯಾ ಇನಿಂಗ್ಸ್ ಹೂರಣ. ಆನಂತರ ಕ್ರೀಸ್‌ಗೆ ಬಂದವರು ಗಟ್ಟಿಯಾಗಿ ನಿಲ್ಲಲಿಲ್ಲ. ಉಮೇಶ್ ಯಾದವ್ (93ಕ್ಕೆ5) ವೇಗದ ದಾಳಿಯು ಆತಿಥೇಯರಿಗೆ ಸಹನೀಯ ಎನಿಸಲಿಲ್ಲ. ಆದರೂ ವೇಗವಾಗಿ ರನ್‌ಗಳಿಸಬೇಕು ಎನ್ನುವ ಆತುರವನ್ನು ಮಾತ್ರ ಆಸೀಸ್ ಬಳಗದವರು ಬಿಡಲಿಲ್ಲ.

ಯುವ ಬೌಲರ್ ಯಾದವ್ ಭಾರತಕ್ಕೆ ಪ್ರಯೋಜನಕಾರಿ ಎನಿಸಿದರು. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ತಂಡ ಅನುಭವಿಸಿದ ಕೊರತೆಯನ್ನು ತುಂಬುವುದಕ್ಕೆ ಈ ಬೌಲಿಂಗ್‌ದಿಂದ ಸಾಧ್ಯವಾಗಲಿಲ್ಲ. ಆದರೂ ಇನ್ನೂ ದೊಡ್ಡ ಮೊತ್ತದತ್ತ ಆಸ್ಟ್ರೇಲಿಯಾ ವೇಗವಾಗಿ ಮುನ್ನುಗ್ಗಲಿಲ್ಲ ಎನ್ನುವುದೇ ಸಮಾಧಾನ. ಮುಂಚೂಣಿಯ ವೇಗಿ ಜಹೀರ್ ಖಾನ್ ಕೂಡ ಎದುರಾಳಿಗಳು ಅಬ್ಬರಿಸದಂತೆ ತಡೆಯಲು ಬೆವರು ಸುರಿಸಿದರು. ಕ್ಲಾರ್ಕ್ ಹಾಗೂ ಬ್ರಾಡ್ ಹಡ್ಡಿನ್ ವಿಕೆಟ್ ಪಡೆದು ಸಂಕಷ್ಟದ ನಡುವೆಯೂ ಸಂತಸಕ್ಕೆ ಕಾರಣರಾದರು. ಎರಡನೇ ಟೆಸ್ಟ್‌ನಲ್ಲಿ ತ್ರಿಶತಕ ಗಳಿಸಿದ್ದ ಕ್ಲಾರ್ಕ್, ದೋನಿಗೆ ಕ್ಯಾಚಿತ್ತರು. ಖಾನ್ ಪಡೆದ ದೊಡ್ಡ ವಿಕೆಟ್ ಅದು.

ಟೆಸ್ಟ್‌ನ ಎರಡನೇ ದಿನವಾದ ಶನಿವಾರ ಎರಡನೇ ಇನಿಂಗ್ಸ್ ಕಾರ್ಯಾಚರಣೆ ಆರಂಭಿಸಿದ `ಮಹಿ~ ಬಳಗ ಮತ್ತೆ ಕುಸಿತದ ಹಾದಿ ಹಿಡಿಯಿತು. 32 ಓವರುಗಳಲ್ಲಿ 88 ರನ್ ಕಲೆಹಾಕುವಷ್ಟರಲ್ಲಿ ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ವಿಕೆಟ್ ಒಪ್ಪಿಸಿದರು. ಒತ್ತಡದ ನಡುವೆ ಕ್ರೀಸ್‌ನಲ್ಲಿ ಗಟ್ಟಿಯಾಗಲು ಯತ್ನಿಸಿದ್ದು ಇನ್ನೂ ಕ್ರೀಸ್‌ನಲ್ಲಿರುವ ದ್ರಾವಿಡ್ (32; 63 ಎ., 6 ಬೌಂಡರಿ) ಹಾಗೂ ಕೊಹ್ಲಿ (21; 39 ಎ., 3 ಬೌಂಡರಿ). ಈ ಜೊತೆಯಾಟವೇ ಈಗ ಇನಿಂಗ್ಸ್ ಸೋಲಿನ ಅಪಾಯ ತಪ್ಪಿಸುವ ಆಸರೆಯ ಕೊಂಡಿ!

ಸ್ಕೋರು ವಿವರ
ಭಾರತ: ಪ್ರಥಮ ಇನಿಂಗ್ಸ್ 60.2 ಓವರುಗಳಲ್ಲಿ 161
ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 76.2 ಓವರುಗಳಲ್ಲಿ 369

(ಶುಕ್ರವಾರದ ಆಟದಲ್ಲಿ: 23 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೆ 149)
ಎಡ್ ಕೋವನ್ ಬಿ ಉಮೇಶ್ ಯಾದವ್ 74
ಡೇವಿಡ್ ವಾರ್ನರ್ ಸಿ ಉಮೇಶ್ ಯಾದವ್ ಬಿ ಇಶಾಂತ್ 180
ಶಾನ್ ಮಾರ್ಷ್ ಸಿ ವಿ.ವಿ.ಎಸ್.ಲಕ್ಷ್ಮಣ್ ಬಿ ಉಮೇಶ್ ಯಾದವ್ 11
ರಿಕಿ ಪಾಂಟಿಂಗ್ ಬಿ ಉಮೇಶ್ ಯಾದವ್ 07
ಮೈಕಲ್ ಕ್ಲಾರ್ಕ್ ಸಿ ಮಹೇಂದ್ರ ಸಿಂಗ್ ದೋನಿ ಬಿ ಜಹೀರ್ 18
ಮೈಕಲ್ ಹಸ್ಸಿ ಸಿ ಸೆಹ್ವಾಗ್ ಬಿ ಆರ್. ವಿನಯ್ ಕುಮಾರ್ 14
ಬ್ರಾಡ್ ಹಡ್ಡಿನ್ ಸಿ ಮಹೇಂದ್ರ ಸಿಂಗ್ ದೋನಿ ಬಿ ಜಹೀರ್ ಖಾನ್ 00
ಪೀಟರ್ ಸಿಡ್ಲ್ ಬಿ ಉಮೇಶ್ ಯಾದವ್ 30
ರ‌್ಯಾನ್ ಹ್ಯಾರಿಸ್ ಸಿ ಗೌತಮ್ ಗಂಭೀರ್ ಬಿ ಉಮೇಶ್ ಯಾದವ್ 09
ಮಿಷೆಲ್ ಸ್ಟಾರ್ಕ್ ಔಟಾಗದೆ 15
ಬೆನ್ ಹಿಲ್ಫೆನ್ಹಾಸ್ ಸಿ ವಿರಾಟ್ ಕೊಹ್ಲಿ ಬಿ ವೀರೇಂದ್ರ ಸೆಹ್ವಾಗ್ 06
ವಿಕೆಟ್ ಪತನ: 1-214 (ಎಡ್ ಕೋವನ್; 38.5), 2-230 (ಶಾನ್ ಮಾರ್ಷ್; 42.6), 3-242 (ರಿಕಿ ಪಾಂಟಿಂಗ್; 44.5), 4-290 (ಡೇವಿಡ್ ವಾರ್ನರ್; 55.1), 5-301 (ಮೈಕಲ್ ಕ್ಲಾರ್ಕ್; 58.4), 6-303 (ಬ್ರಾಡ್ ಹಡ್ಡಿನ್; 60.1), 7-339 (ಮೈಕ್ ಹಸ್ಸಿ; 67.1), 8-343 (ಪೀಟರ್ ಸಿಡ್ಲ್; 68.2), 9-357 (ರ‌್ಯಾನ್ ಹ್ಯಾರಿಸ್; 73.2), 10-369 (ಬೆನ್ ಹಿಲ್ಫೆನ್ಹಾಸ್; 76.2).
ಇತರೆ: (ಲೆಗ್‌ಬೈ-3, ವೈಡ್-2) 05
ಬೌಲಿಂಗ್: ಜಹೀರ್ ಖಾನ್ 21-3-91-2 (ವೈಡ್-1), ಉಮೇಶ್ ಯಾದವ್ 17-2-93-5 (ವೈಡ್-1), ಆರ್.ವಿನಯ್ ಕುಮಾರ್ 13-0-73-1, ಇಶಾಂತ್ ಶರ್ಮ 18-0-89-1, ವೀರೇಂದ್ರ ಸೆಹ್ವಾಗ್ 7.2-0-20-1

ಭಾರತ: ಎರಡನೇ ಇನಿಂಗ್ಸ್ 32 ಓವರುಗಳಲ್ಲಿ
4 ವಿಕೆಟ್‌ಗಳ ನಷ್ಟಕ್ಕೆ 88

ಗೌತಮ್ ಗಂಭೀರ್ ಸಿ ಮೈಕಲ್ ಹಸ್ಸಿ ಬಿ ಮಿಷೆಲ್ ಸ್ಟಾರ್ಕ್ 14
ವೀರೇಂದ್ರ ಸೆಹ್ವಾಗ್ ಸಿ ಬ್ರಾಡ್ ಹಡ್ಡಿನ್ ಬಿ ಪೀಟರ್ ಸಿಡ್ಲ್ 10
ರಾಹುಲ್ ದ್ರಾವಿಡ್ ಬ್ಯಾಟಿಂಗ್ 32
ಸಚಿನ್ ತೆಂಡೂಲ್ಕರ್ ಎಲ್‌ಬಿಡಬ್ಲ್ಯು ಬಿ ಮಿಷೆಲ್ ಸ್ಟಾರ್ಕ್ 08
ವಿ.ವಿ.ಎಸ್.ಲಕ್ಷ್ಮಣ್ ಸಿ ಶಾನ್ ಮಾರ್ಷ್ ಬಿ ಬೆನ್ ಹಿಲ್ಫೆನ್ಹಾಸ್ 00
ವಿರಾಟ್ ಕೊಹ್ಲಿ ಬ್ಯಾಟಿಂಗ್ ಬ್ಯಾಟಿಂಗ್ 21
ಇತರೆ: (ಬೈ-1, ಲೆಗ್‌ಬೈ-1, ವೈಡ್-1) 03
ವಿಕೆಟ್ ಪತನ: 1-24 (ಗೌತಮ್ ಗಂಭೀರ್; 10.2), 2-25 (ವೀರೇಂದ್ರ ಸೆಹ್ವಾಗ್; 11.3), 3-42 (ಸಚಿನ್ ತೆಂಡೂಲ್ಕರ್; 16.1), 4-51 (ವಿ.ವಿ.ಎಸ್.ಲಕ್ಷ್ಮಣ್; 19.1).
ಬೌಲಿಂಗ್: ರ‌್ಯಾನ್ ಹ್ಯಾರಿಸ್ 8-1-23-0, ಬೆನ್ ಹಿಲ್ಫೆನ್ಹಾಸ್ 9-2-25-1, ಮಿಷೆಲ್ ಸ್ಟಾರ್ಕ್ 6-2-14-2, ಪೀಟರ್ ಸಿಡ್ಲ್ 7-2-21-1, ಮೈಕಲ್ ಹಸ್ಸಿ 2-0-3-0    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT