ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಉತ್ತಮ ಮೊತ್ತದತ್ತ ಆಸೀಸ್

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಪಳ್ಳೆಕೆಲೆ, ಶ್ರೀಲಂಕಾ: ಶಾನ್ ಮಾರ್ಷ್ (ಬ್ಯಾಟಿಂಗ್ 87, 211ಎಸೆತ, 11ಬೌಂ) ಹಾಗೂ ಮೈಕ್ ಹಸ್ಸಿ (ಬ್ಯಾಟಿಂಗ್ 76, 152ಎಸೆತ, 8ಬೌಂ) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಪೇರಿಸುವತ್ತ ದಾಪುಗಾಲು ಇಟ್ಟಿದ್ದಾರೆ.

ಮೊದಲ ದಿನದಲ್ಲಿ ಆತಿಥೇಯ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಆಸೀಸ್ ಎರಡನೇ ದಿನವಾದ ಶುಕ್ರವಾರ ವೇಗವಾಗಿ ರನ್ ಗಳಿಸಲು ಯತ್ನಿಸಿತು. ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 91.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿ 90 ರನ್‌ಗಳ ಮುನ್ನಡೆ ಸಾಧಿಸಿದೆ. ತಂಡದ  ಮೊತ್ತ 100 ಆಗುವಷ್ಟರಲ್ಲಿ ಎರಡು ವಿಕೆಟ್ ಕಬಳಿಸಿದ ಲಂಕಾ ಆರಂಭಿಕ ಪ್ರಭುತ್ವ ಮೆರೆಯಿತು. ಆದರೆ ಮಾರ್ಷ್ ಹಾಗೂ ಹಸ್ಸಿ ಲಂಕಾ ಬೌಲರ್‌ಗಳನ್ನು ದಂಡಿಸಿದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ ಮೊದಲ ಇನಿಂಗ್ಸ್ 64.1 ಓವರ್‌ಗಳಲ್ಲಿ 174. ಆಸ್ಟ್ರೇಲಿಯಾ 91.3 ಓವರ್‌ಗಳಲ್ಲಿ 3 ವಿಕೆಟ್‌ಗೆ 264 (ಶೇನ್ ವ್ಯಾಟ್ಸನ್ 36, ಶಾನ್ ಮಾರ್ಷ್ ಬ್ಯಾಟಿಂಗ್ 87, ಮೈಕ್ ಹಸ್ಸಿ ಬ್ಯಾಟಿಂಗ್ 76; ಸುರಂಗ ಲಕ್ಮಲ್ 60ಕ್ಕೆ1, ಸೂರಜ್ ರಾಂದೇವ್ 49ಕ್ಕೆ1).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT