ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಕರ್ನಾಟಕ-ಒಡಿಶಾ ಪಂದ್ಯ ಡ್ರಾ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಎಲ್. ರಾಹುಲ್ (43) ನೆರವಿಗೆ ನಿಂತ ಕಾರಣ ಕರ್ನಾಟಕ ತಂಡ ಇಲ್ಲಿ ನಡೆದ ಸಿ.ಕೆ. ನಾಯ್ಡು ಟ್ರೋಫಿ  (22 ವರ್ಷ ವಯಸ್ಸಿನೊಳಗಿನವರ) ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಒಡಿಶಾ ಜೊತೆ ಡ್ರಾ ಸಾಧಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಾಲ್ಕು ದಿನಗಳ ಪಂದ್ಯದ ಕೊನೆಯ ದಿನವಾದ ಬುಧವಾರ ಗೆಲುವಿಗೆ 175 ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕ ಒಂದು ಹಂತದಲ್ಲಿ 28 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಆದರೆ ರಾಹುಲ್ ಮತ್ತು ಶಿಶಿರ್ (30) ಐದನೇ ವಿಕೆಟ್‌ಗೆ 58 ರನ್‌ಗಳ ಜೊತೆಯಾಟವಾಡಿ ಸೋಲಿನ ಅಪಾಯ ತಪ್ಪಿಸಿದರು.

ಇದಕ್ಕೂ ಮೊದಲು ಒಡಿಶಾ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ 171 ರನ್‌ಗಳಿಗೆ ನಿಯಂತ್ರಿಸಿದ ಕರ್ನಾಟಕ ಗೆಲುವಿನ ಕನಸು ಕಂಡಿತ್ತು. ಬ್ಯಾಟಿಂಗ್‌ನಲ್ಲಿ ವೈಫಲ್ಯ ಎದುರಾದ ಕಾರಣ ಗೆಲುವಿನ ಆಸೆ ಈಡೇರಲಿಲ್ಲ. 

ಸಂಕ್ಷಿಪ್ತ ಸ್ಕೋರ್: ಒಡಿಶಾ: ಮೊದಲ ಇನಿಂಗ್ಸ್ 331 ಮತ್ತು ಎರಡನೇ ಇನಿಂಗ್ಸ್ 59 ಓವರ್‌ಗಳಲ್ಲಿ 171 (ಅನುರಾಗ್ ಸಾರಂಗಿ 63, ಪರಪ್ಪ ಮರಾಡಿ 31ಕ್ಕೆ 3, ಪಿ. ಮಗಿಜೆಂದನ್ 46ಕ್ಕೆ 3). ಕರ್ನಾಟಕ: ಮೊದಲ ಇನಿಂಗ್ಸ್ 328 ಮತ್ತು ಎರಡನೇ ಇನಿಂಗ್ಸ್ 31 ಓವರ್‌ಗಳಲ್ಲಿ 7 ವಿಕೆಟ್‌ಗೆ 124 (ಕೆ.ಎಲ್. ರಾಹುಲ್ 43, ಶಿಶಿರ್ ಭಾವ್ನೆ 30, ಆನಂದ್ ಸಾಹೂ 42ಕ್ಕೆ 3). ಪಂದ್ಯ ಡ್ರಾ; ಪಾಯಿಂಟ್: ಒಡಿಶಾ-3, ಕರ್ನಾಟಕ-1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT