ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಕೌಶಲ್ಯಕ್ಕೆ ಕ್ಯಾಸ್ಟ್ರಾಲ್ ಕೇಂದ್ರ

Last Updated 16 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ನೀವು ಉದಯೋನ್ಮುಖ ಕ್ರಿಕೆಟ್ ಆಟಗಾರರಾಗಿರಬಹುದು. ಕ್ರಿಕೆಟನ್ನು ಅತಿಯಾಗಿ ಪ್ರೀತಿಸುವ ಅಭಿಮಾನಿಯೇ ಆಗಿರಬಹುದು. ಕ್ರಿಕೆಟ್‌ನ ಸೂಕ್ಷ್ಮ ಅಂಶಗಳನ್ನು ತಿಳಿಯುವ ಆಸೆ ನಿಮಗಿದ್ದರೆ ಅಂತಹ ಅವಕಾಶ ಈಗ ಲಭ್ಯ. ವಾಹನಗಳ ಆಯಿಲ್ ಕಂಪೆನಿ ಕ್ಯಾಸ್ಟ್ರಾಲ್ ಈಗ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕೌಶಲ್ಯ ಕೇಂದ್ರ ತೆರೆದಿದೆ.  ‘ಕ್ಯಾಸ್ಟ್ರಾಲ್’ ಈಗ ನಡೆಯುತ್ತಿರುವ ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಅಧಿಕೃತ ಪ್ರದರ್ಶನ ಪಾಲುದಾರನಾಗಿದೆ.

ಈ ಕ್ರಿಕೆಟ್ ಕೌಶಲ್ಯ ಕೇಂದ್ರದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್, ರನ್ನಿಂಗ್ ಇತ್ಯಾದಿ ಕ್ರಿಕೆಟ್ ಅಂಶಗಳನ್ನು ಆಧರಿಸಿದ ಆಟಗಳಿವೆ. ಈ ಆಟಗಳಲ್ಲಿ ಜಯಗಳಿಸಬೇಕಾದರೆ ಕ್ರಿಕೆಟ್ ತಂತ್ರಜ್ಞಾನದ ಅರಿವು ಮತ್ತು ಪ್ರದರ್ಶನ ಕೌಶಲ್ಯ ಎರಡೂ ಇರಬೇಕಾಗುತ್ತದೆ. ಪ್ರತಿ ಆಟದ ನಂತರ ಪ್ರದರ್ಶನ ಮಟ್ಟ ಅಳೆಯುವ ಅವಕಾಶವೂ ಇದೆ. ಅತ್ಯಾಧುನಿಕ ‘ಪಿಚ್ ವಿಷನ್’ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ. ಕ್ರಿಕೆಟ್ ಆಟದ ನೇರ ಪ್ರಸಾರದಲ್ಲಿ ಎಲ್‌ಬಿಡಬ್ಲು, ರನ್‌ಔಟ್‌ಗಳನ್ನು ತೋರಿಸುವುದು ಹೇಗೆ? 3ನೇ ಅಂಪೈರ್ ‘ಆಟಗಾರ ಔಟಾಗಿದ್ದಾನೆಯೇ, ಇಲ್ಲವೇ ಎಂಬುದನ್ನು ಹೇಗೆ ನಿರ್ಧರಿಸುತ್ತಾರೆ’ ಎಂಬುದನ್ನು ಇಲ್ಲಿ ಅರಿಯಬಹುದು.

ಈ ಕೇಂದ್ರವನ್ನು ಉದ್ಘಾಟಿಸಿದವರು ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್. ಇದು ತಂತ್ರಜ್ಞಾನ ಮತ್ತು ಪ್ರದರ್ಶನ ಕೌಶಲ್ಯದ ಸಂಗಮ. ಆಟಗಾರರು ಇಲ್ಲಿ ಪ್ರದರ್ಶಿಸಿರುವ ತಂತ್ರಜ್ಞಾನದ ನೆರವಿನಿಂದ ತಮ್ಮ ಕೌಶಲ್ಯ, ತಮ್ಮ ಸಾಧನೆ ಹೆಚ್ಚಿಸಿಕೊಳ್ಳಬಹುದು. ತಮ್ಮ ಬ್ಯಾಟಿಂಗ್ ಅಥವಾ ಬೌಲಿಂಗ್ ಶೈಲಿಯಲ್ಲಿರುವ ದೋಷ ಸರಿಪಡಿಸಿಕೊಳ್ಳಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT