ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಗೆಲುವಿನ ಹಾದಿಯಲ್ಲಿ ಭಾರತ ತಂಡ

Last Updated 6 ಜೂನ್ 2011, 19:30 IST
ಅಕ್ಷರ ಗಾತ್ರ

ಪೋರ್ಟ್ ಅಫ್ ಸ್ಪೇನ್, ಟ್ರಿನಿಡ್ಯಾಡ್: ಭಾರತದ ಬೌಲರ್‌ಗಳ ಆರಂಭದ ಅಬ್ಬರದಿಂದ ತಬ್ಬಿಬ್ಬಾಗಿದ್ದ ವೆಸ್ಟ್ ಇಂಡೀಸ್ ತಂಡದವರು ನಿಧಾನವಾಗಿ ಚೇತರಿಸಿಕೊಂಡು ಗೌರವಾರ್ಹ ಮೊತ್ತ ಗಳಿಸುವತ್ತ ದಾಪುಗಾಲಿಟ್ಟರು. ಈ ಮೊತ್ತವನ್ನು ಬೆನ್ನು ಹತ್ತಿರುವ ಭಾರತ ಗೆಲುವಿನ ಹಾದಿಯಲ್ಲಿ ಸಾಗಿದೆ.

ಕಷ್ಟವೆನಿಸುವ ಪರಿಸ್ಥಿತಿಯನ್ನು ಸುಧಾರಿಸಿಕೊಂಡ ವೆಸ್ಟ್ ಇಂಡೀಸ್ ಐದು ಏಕದಿನ ಪಂದ್ಯಗಳ ಮೊದಲ ಹಣಾಹಣಿಯಲ್ಲಿ ಸುಸ್ಥಿತಿಯತ್ತ ಸಾಗಿತು. ಕೆರಿಬಿಯನ್ ದೊರೆಗಳ ನಾಡಿನ ಕ್ರಿಕೆಟ್ ತಂಡವು 50  ಓವರುಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 214 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಭಾರತ ತಂಡ ಪತ್ರಿಕೆ ಮುದ್ರಣಕ್ಕೆ ಹೋಗುವ ಹೊತ್ತಿಗೆ 38 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 170 ರನ್ ಗಳಿಸಿ ಗೆಲುವಿನ ಹಾದಿಯಲ್ಲಿ ಹೆಜ್ಜೆ ಹಾಕಿದೆ.

ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ `ಟಾಸ್~ ಗೆದ್ದ ಆತಿಥೇಯ ತಂಡದ ನಾಯಕ ಡೆರನ್ ಸ್ಯಾಮಿ ಅವರು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಪ್ರವಾಸಿ ಪಡೆಯ ಬೌಲರ್‌ಗಳು ಶುರುವಿನಲ್ಲಿಯೇ ಮೊನಚು ತೋರಿದಾಗ ಸ್ಯಾಮಿ ನಿರ್ಣಯ ತಪ್ಪಾಯಿತೇ ಎನ್ನುವ ಅನುಮಾನ ಕಾಡಿತು.

ರನ್ ಮೊತ್ತ 28 ಆಗುವಷ್ಟರಲ್ಲಿ ಲೆಂಡ್ಲ್   ಸಿಮಾನ್ಸ್ ಹಾಗೂ ಡೆರನ್ ಬ್ರಾವೊ ವಿಕೆಟ್ ಒಪ್ಪಿಸಿದರು. ಪ್ರವೀಣ್ ಕುಮಾರ್ ಎಸೆತದಲ್ಲಿ ಸಿಮಾನ್ಸ್ ಬ್ಯಾಟ್‌ನಿಂದ ಸಿಡಿದ ಚೆಂಡನ್ನು ಹರಭಜನ್ ಸಿಂಗ್ ಹಿಡಿತಕ್ಕೆ ಪಡೆಯುವಲ್ಲಿ ತಪ್ಪು ಮಾಡಲಿಲ್ಲ. ಆಗ ಭಾರತದವರು ಸಂಭ್ರಮಿಸಿದರು. ನಂತರದ ಓವರ್‌ನಲ್ಲಿಯೇ ಬ್ರಾವೊಗೆ ಮುನಾಫ್ ಪಟೇಲ್ ಪೆವಿಲಿಯನ್ ದಾರಿ ತೋರಿಸಿದರು.

ಬೇಗ ಎರಡು ವಿಕೆಟ್ ಪತನವಾಗಿದ್ದು ಕೆರಿಬಿಯನ್ನರ ಮೇಲಿನ ಒತ್ತಡ ಹೆಚ್ಚಿಸಿತು. ಆದರೂ ಆತಿಥೇಯರು ಸಹನೆ ಕಳೆದುಕೊಳ್ಳಲಿಲ್ಲ. ಜೊತೆಯಾಟಗಳನ್ನು ಬೆಳೆಸುವ ಸಾಹಸಕ್ಕೆ ಮುಂದಾದರು. ಮೂರನೇ ಜೊತೆಯಾಟ ಬೆಳೆಯುವ ಲಕ್ಷಣ ಕಾಣಿಸಿದಾಗ ಒಂದು ತುದಿಯಿಂದ `ಭಜ್ಜಿ~ಗೆ ಬೌಲಿಂಗ್ ಮಾಡಲು ನಾಯಕ ಸುರೇಶ್ ರೈನಾ ಅವಕಾಶ ನೀಡಿದ್ದು ಕೂಡ ಪ್ರಯೋಜನಕಾರಿ ಬದಲಾವಣೆ ಎನಿಸಿತು. ಹರಭಜನ್ ಎದುರು ರಕ್ಷಣಾತ್ಮಕವಾಗಿ ಬ್ಯಾಟ್ ಹಿಡಿದು ನಿಲ್ಲಲು ಸಜ್ಜಾಗಿದ್ದ ಕಿರ್ಕ್ ಎಡ್ವರ್ಡ್ಸ್ (21; 45 ಎ., 1 ಬೌಂಡರಿ) ಆಘಾತಕ್ಕೊಳಗಾದರು. ಅವರ ಬ್ಯಾಟ್‌ಗೆ ತಾಗಿದ್ದ ಚೆಂಡು ವಿರಾಟ್ ಕೊಹ್ಲಿ ಕೈಯಲ್ಲಿ ಸುರಕ್ಷಿತ!

ಆಗ ವೆಸ್ಟ್ ಇಂಡೀಸ್ ಚಡಪಡಿಕೆ ಹೆಚ್ಚಿತು. ಆ ಹಂತದಲ್ಲಿ ಇನಿಂಗ್ಸ್‌ಗೆ ಆಸರೆಯಾಗಿದ್ದು ರಾಮನರೇಶ್ ಸರವಣ್ ಹಾಗೂ ಮರ್ಲಾನ್ ಸ್ಯಾಮ್ಯೂಯಲ್ಸ್. ನಾಲ್ಕನೇ ವಿಕೆಟ್ ಜೊತೆಯಾಟವನ್ನು ಬೆಳೆಸಿದ ಇವರಿಬ್ಬರೂ ತಮ್ಮ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು.

ಸ್ಕೋರು ವಿವರ
ವೆಸ್ಟ್ ಇಂಡೀಸ್: 50ಓವರುಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 214
ಲೆಂಡ್ಲ್ ಸಿಮಾನ್ಸ್ ಸಿ ಹರಭಜನ್ ಸಿಂಗ್ ಬಿ ಪ್ರವೀಣ್ ಕುಮಾರ್  06
ಕಿರ್ಕ್ ಎಡ್ವರ್ಡ್ಸ್ ಸಿ ವಿರಾಟ್ ಕೊಹ್ಲಿ ಬಿ ಹರಭಜನ್ ಸಿಂಗ್  21
ಡೆರನ್ ಬ್ರಾವೊ ಸಿ ರೋಹಿತ್ ಶರ್ಮ ಬಿ ಮುನಾಫ್ ಪಟೇಲ್  04
ರಾಮನರೇಶ್ ಸರವಣ್ ಸಿ ಪಾರ್ಥಿವ್ ಪಟೇಲ್ ಬಿ ಮುನಾಫ್ ಪಟೇಲ್  56
ಮರ್ಲಾನ್ ಸ್ಯಾಮ್ಯೂಯಲ್ಸ್ ಬಿ ಸುರೇಶ್ ರೈನಾ  55
ಡ್ವೇನ್ ಬ್ರಾವೊ ಸ್ಟಂಪ್ಡ್ ಪಾರ್ಥಿವ್ ಪಟೇಲ್ ಬಿ ಹರಭಜನ್ ಸಿಂಗ್  22
ಕಾರ್ಲಟನ್ ಬಗ್ ಎಲ್‌ಬಿಡಬ್ಲ್ಯು ಹರಭಜನ್ ಸಿಂಗ್  16
ಡೆರನ್ ಸ್ಯಾಮಿ ಎಲ್‌ಬಿಡಬ್ಲ್ಯು ಪ್ರವೀಣ್ ಕುಮಾರ್  04
ರವಿ ರಾಂಪಾಲ್ ಔಟಾಗದೇ  09
ದೇವೇಂದ್ರ ಬಿಶೂ ಎಲ್‌ಬಿಡಬ್ಲ್ಯು ಸುರೇಶ್ ರೈನಾ  00
ಅಂಥೋನಿ ಮಾರ್ಟಿನ್ ಔಟಾಗದೇ   02
ಇತರೆ: (ಲೆಗ್‌ಬೈ-5, ವೈಡ್-12, ನೋಬಾಲ್-2)  19
ವಿಕೆಟ್ ಪತನ: 1-23 (ಲೆಂಡ್ಲ್ ಸಿಮಾನ್ಸ್; 6.1), 2-28 (ಡೆರನ್ ಬ್ರಾವೊ; 7.5), 3-59 (ಕಿರ್ಕ್ ಎಡ್ವರ್ಡ್ಸ್; 18.2). 4-141 (ಸರವಣ್; 37.6), 5-177 (ಸ್ಯಾಮ್ಯೂಯಲ್ಸ್; 42.4), 6-191 (ಡ್ವೇನ್ ಬ್ರಾವೊ; 44.5), 7-198(ಬಗ್;46.6), 8-204 (ಸ್ಯಾಮಿ;47.5), 9-206(ಬಿಶೂ; 48.6).
ಬೌಲಿಂಗ್: ಪ್ರವೀಣ್ ಕುಮಾರ್ 10-1-37-2 (ವೈಡ್-3),  ಮುನಾಫ್ ಪಟೇಲ್ 9-0-47-2 (ವೈಡ್-2), ಅಮಿತ್ ಮಿಶ್ರಾ 10-1-38-0 (ನೋಬಾಲ್-1, ವೈಡ್-1), ಹರಭಜನ್ ಸಿಂಗ್ 10-032-3 (ವೈಡ್-1),  ಯೂಸುಫ್ ಪಠಾಣ್ 2-0-16-0 (ವೈಡ್-1), ಸುರೇಶ್ ರೈನಾ 6-0-23-2, ವಿರಾಟ್ ಕೊಹ್ಲಿ 3-1-16-0 (ನೋಬಾಲ್-1).
ವಿವರ ಅಪೂರ್ಣ.....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT