ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ದಾಖಲೆ ಬರೆದ ಗುಪ್ಟಿಲ್

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಸೌತ್ ಹ್ಯಾಂಪ್ಟನ್ (ಎಎಫ್‌ಪಿ): ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡೆತ್ತಿ ಹೋದ ಮಾರ್ಟಿನ್ ಗುಪ್ಟಿಲ್ (ಔಟಾಗದೆ 189, 155ಎಸೆತ, 19 ಬೌಂಡರಿ, 2 ಸಿಕ್ಸರ್) ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ನ್ಯೂಜಿಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಪರಿಣಾಮ ಇಲ್ಲಿ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಕಿವೀಸ್ ತಂಡ ಇಂಗ್ಲೆಂಡ್ ಗೆಲುವಿಗೆ ಸವಾಲಿಗೆ ಗುರಿ ನೀಡಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬ್ರೆಂಡನ್ ಮೆಕ್ಲಮ್ ನೇತೃತ್ವದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 359 ರನ್‌ಗಳನ್ನು ಕಲೆ ಹಾಕಿತು. ಇದಕ್ಕೆ ಕಾರಣವಾದ ಗುಪ್ಟಿಲ್ ಅಬ್ಬರದ ಆಟ ಹಲವು ದಾಖಲೆಗಳಿಗೂ ಕಾರಣವಾಯಿತು.

ಇದು ಇಂಗ್ಲೆಂಡ್ ಎದುರು ದಾಖಲಾದ ಒಟ್ಟು ಗರಿಷ್ಠ ಮೊತ್ತವಾಗಿದೆ. 2008ರಲ್ಲಿ ನೇಪಿಯರ್‌ನಲ್ಲಿ ನಡೆದ ಪಂದ್ಯದಲ್ಲಿ 340 ರನ್ ಗಳಿಸಿದ್ದು ಇದುವರೆಗಿನ ಒಟ್ಟು ಗರಿಷ್ಠ ಸ್ಕೋರು ಆಗಿತ್ತು. 2005ರಲ್ಲಿ ಬುಲವಾಯೊದಲ್ಲಿ ನಡೆದ ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಲೂವ್ ವಿನ್ಸೆಂಟ್ (172) ಕಿವೀಸ್ ಪರ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಗುಪ್ಟಿಲ್ ವೈಯಕ್ತಿಕ ಉತ್ತಮ ಮೊತ್ತವೂ ಇದಾಗಿದೆ. ಈ ಮೊದಲು 122 ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.

ಈ ಗುರಿಯನ್ನು ಬೆನ್ನು ಹತ್ತಿರುವ ಇಂಗ್ಲೆಂಡ್ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 41 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 38 ರನ್ ಗಳಿಸಿ ಸೋಲಿನ ಸುಳಿಗೆ ಸಿಲುಕಿದೆ.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 359. ( ಮಾರ್ಟಿನ್ ಗುಪ್ಟಿಲ್ ಔಟಾಗದೆ 189, ಕೇನ್ ವಿಲಿಮ್ಸನ್ 55, ರಾಸ್ ಟೇಲರ್ 60, ಬ್ರೆಂಡನ್ ಮೆಕ್ಲಮ್ ಔಟಾಗದೆ 40; ಜೇಮ್ಸ ಆ್ಯಂಡರ್ಸನ್ 65ಕ್ಕೆ2, ಗ್ರೇಮ್ ಸ್ವಾನ್ 61ಕ್ಕೆ1). ವಿವರ ಅಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT