ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ನಿಕೋಲ್ ಭರ್ಜರಿ ಶತಕ ಕಿವೀಸ್‌ಗೆ ಗೆಲುವು

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾಂಗಾರಿ, ನ್ಯೂಜಿಲೆಂಡ್ (ಎಎಫ್‌ಪಿ): ಆರಂಭಿಕ ಬ್ಯಾಟ್ಸ್‌ಮನ್ ರಾಬ್ ನಿಕೋಲ್ ಸಿಡಿಸಿದ ಭರ್ಜರಿ ಶತಕದ (146) ನೆರವಿನಿಂದ ನ್ಯೂಜಿಲೆಂಡ್ ತಂಡ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 141 ರನ್‌ಗಳ ಜಯ ಪಡೆಯಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ರಲ್ಲಿ ಗೆಲುವಿನ ಮುನ್ನಡೆ ತನ್ನದಾಗಿಸಿದೆ.

ಕೋಬಮ್ ಓವಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 372 ರನ್ ಪೇರಿಸಿತು. ಜಿಂಬಾಬ್ವೆ ನಿಗದಿತ ಓವರ್‌ಗಳು ಕೊನೆಗೊಂಡಾಗ 8 ವಿಕೆಟ್‌ಗೆ 231 ರನ್ ಗಳಿಸಲಷ್ಟೇ ಶಕ್ತವಾಯಿತು.

ರಾಬ್ ನಿಕೋಲ್ ಆಕರ್ಷಕ ಆಟ ಕಿವೀಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣ. 134 ಎಸೆತಗಳನ್ನು ಎದುರಿಸಿದ ಅವರ ಇನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು ಆರು ಸಿಕ್ಸರ್‌ಗಳಿದ್ದವು. ನಿಕೋಲ್ ಮತ್ತು ಮಾರ್ಟಿನ್ ಗುಪ್ಟಿಲ್ (77) ಮೊದಲ ವಿಕೆಟ್‌ಗೆ 131 ರನ್ ಸೇರಿಸಿದರು. ಜೇಕಬ್ ಓರಾಮ್ (59, 28 ಎಸೆತ, 5 ಬೌಂ, 4 ಸಿಕ್ಸರ್) ಹಾಗೂ ಟಾಮ್ ನಥಾಮ್ (48, 28 ಎಸೆತ, 5 ಬೌಂ, 2 ಸಿಕ್ಸರ್)  ಕೊನೆಯಲ್ಲಿ ಬಿರುಸಿನ ಆಟವಾಡಿದರು.

ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 372 (ರಾಬ್ ನಿಕೋಲ್ 146, ಮಾರ್ಟಿನ್ ಗುಪ್ಟಿಲ್ 77, ಜೇಕಬ್ ಓರಾಮ್ 59, ಟಾಮ್ ನಥಾಮ್ 48, ಪ್ರಾಸ್ಪರ್ ಉತ್ಸೇಯ 71ಕ್ಕೆ 3). ಜಿಂಬಾಬ್ವೆ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 231 (ತಟೆಂಡ ತೈಬು 50, ಎಲ್ಟಾನ್ ಚಿಗುಂಬುರ 63, ಶಿಂಗಿ ಮಸಕಜ 38, ಜೇಕಬ್ ಓರಾಮ್ 29ಕ್ಕೆ 3). ಫಲಿತಾಂಶ: ನ್ಯೂಜಿಲೆಂಡ್‌ಗೆ 141 ರನ್ ಗೆಲುವು ಹಾಗೂ ಸರಣಿಯಲ್ಲಿ 2-0 ಮುನ್ನಡೆ, ಪಂದ್ಯಶ್ರೇಷ್ಠ: ರಾಬ್ ನಿಕೋಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT