ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಫೈನಲ್‌ಗೆ ರೇವಾ ಐಟಿಎಂ, ಆರ್‌ವಿಸಿಇ

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರೇವಾ ಐಟಿಎಂ ಮತ್ತು ಆರ್‌ವಿಸಿಇ ತಂಡಗಳು ಇಲ್ಲಿ ನಡೆಯುತ್ತಿರುವ ಎಂಎಸ್‌ಆರ್‌ಐಟಿ ಆಶ್ರಯದ 14ನೇ ಎಂ.ಎಸ್. ರಾಮಯ್ಯ ಸ್ಮಾರಕ ಅಂತರ ಎಂಜಿನಿಯರಿಂಗ್ ಕಾಲೇಜು ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಇಂದು  ಪೈಪೋಟಿ ನಡೆಸಲಿವೆ.

ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಈ ತಂಡಗಳು ಫೈನಲ್‌ಗೆ ಅರ್ಹತೆ ಪಡೆದವು. ಫೈನಲ್ ಪಂದ್ಯ ಐಐಎಸ್‌ಸಿ ಜಿಮ್ಖಾನಾ ಮೈದಾನದಲ್ಲಿ ನಡೆಯಲಿದೆ. ಗುರುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಎಂಎಸ್‌ಆರ್‌ಐಟಿ 41 ರನ್‌ಗಳಿಂದ ಎಸ್‌ಬಿಎಂಜೆಸಿಇ ವಿರುದ್ಧ ಜಯ ಪಡೆಯಿತು. ಆದರೂ ಆತಿಥೇಯ ತಂಡ ಫೈನಲ್ ಪ್ರವೇಶಿಲು ವಿಫಲವಾಯಿತು.

ಸಂಕ್ಷಿಪ್ತ ಸ್ಕೋರ್: ಎಂಎಸ್‌ಆರ್‌ಐಟಿ: 25 ಓವರ್‌ಗಳಲ್ಲಿ 4 ವಿಕೆಟ್‌ಗೆ 134 (ಪ್ರತೀಕ್ಷ್ 34, ಅಂಕಿತ್ ವೋರಾ 27, ಆಶ್ರಿತ್ 17ಕ್ಕೆ 2, ಪಾರ್ಥ 25ಕ್ಕೆ 2). ಎಸ್‌ಬಿಎಂಜೆಸಿಇ: 24 ಓವರ್‌ಗಳಲ್ಲಿ 98 (ಪ್ರಶಾಂತ್ 22, ರೋಹಿತ್ 18, ಅಂಕಿತ್ ವೋರಾ 18ಕ್ಕೆ 3, ಎಸ್. ಸಂದೇಶ್ 3ಕ್ಕೆ 2). ಫಲಿತಾಂಶ: ಎಂಎಸ್‌ಆರ್‌ಐಟಿಗೆ 41 ರನ್ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT