ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಭಾರತಕ್ಕೆ ಸುಲಭ ಜಯ

Last Updated 7 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಪಳ್ಳೆಕೆಲೆ (ಎಎಫ್‌ಪಿ): ವಿರಾಟ್ ಕೊಹ್ಲಿ (68) ಅಬ್ಬರದ ಬ್ಯಾಟಿಂಗ್ ಜೊತೆಗೆ ಇರ್ಫಾನ್ ಪಠಾಣ್ (28ಕ್ಕೆ3) ಮತ್ತು ಅಶೋಕ್ ದಿಂಡಾ (19ಕ್ಕೆ4) ಅವರ ಸಮರ್ಥ ಬೌಲಿಂಗ್ ನೆರವಿನಿಂದ ಭಾರತ ತಂಡ ಇಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕೈಕ ಟಿ-20 ಕ್ರಿಕೆಟ್ ಪಂದ್ಯದಲ್ಲಿ 39 ರನ್‌ಗಳ ಗೆಲುವು ಸಾಧಿಸಿತು.

ಟಾಸ್ ಗೆದ್ದ ಲಂಕಾ ಫೀಲ್ಡಿಂಗ್ ಆರಿಸಿಕೊಂಡಿತು. ಸಿಕ್ಕ ಬ್ಯಾಟಿಂಗ್ ಅವಕಾಶವನ್ನು ಬಳಸಿಕೊಂಡ `ಮಹಿ~ ಪಡೆ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 155 ರನ್‌ಗಳ ಗುರಿಯನ್ನು ಲಂಕಾದ ಮುಂದಿಟ್ಟಿತು.

ಲಂಕಾ 18 ಓವರ್‌ಗಳಲ್ಲಿ 116 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು.
ಏಕದಿನ ಕ್ರಿಕೆಟ್ ಸರಣಿಯನ್ನು ಕೈ ವಶಮಾಡಿಕೊಂಡಿದ್ದ ಭಾರತ ಈಗ ಏಕೈಕ ಟಿ-20 ಪಂದ್ಯದಲ್ಲೂ ಗೆಲುವಿನ ನಗೆ ಬೀರಿತು.


ಸ್ಕೋರು ವಿವರ
ಭಾರತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 155
ಗೌತಮ್ ಗಂಭೀರ್ ಬಿ ಶಮಿಂದಾ ಎರಂಗಾ  06
ಅಜಿಂಕ್ಯ ರಹಾನೆ ಸಿ ಮತ್ತು ಬಿ ಜೀವನ್ ಮೆಂಡಿಸ್  21
ವಿರಾಟ್ ಕೊಹ್ಲಿ ಸಿ ಲಾಹಿರು ತಿರುಮನ್ನೆ ಬಿ ಶಮಿಂದಾ ಎರಂಗಾ  68
ಸುರೇಶ್ ರೈನಾ ಔಟಾಗದೆ  34
ಮಹೇಂದ್ರ ಸಿಂಗ್ ದೋನಿ ಔಟಾಗದೆ  16
ಇತರೆ: (ಲೆಗ್ ಬೈ-7, ವೈಡ್-3)  10
ವಿಕೆಟ್ ಪತನ: 1-7 (ಗಂಭೀರ್; 1.4), 2-81 (ರಹಾನೆ; 11.3), 3-129 (ಕೊಹ್ಲಿ; 16.3).
ಬೌಲಿಂಗ್: ಆ್ಯಂಜಲೊ ಮ್ಯಾಥ್ಯೂಸ್ 3-0-23-0, ಶಮಿಂದಾ ಎರಂಗಾ 4-0-30-2, ಲಸಿತ್ ಮಾಲಿಂಗ 4-0-31-0, ತಿಸ್ಸಾರ ಪೆರೇರಾ 4-0-34-0, ರಂಗನ್ ಹೆರಾತ್ 3-0-17-0, ಜೀವನ್ ಮೆಂಡಿಸ್ 2-0-13-1.

ಶ್ರೀಲಂಕಾ 18 ಓವರ್‌ಗಳಲ್ಲಿ 116
ಮಾಹೇಲ ಜಯವರ್ಧನೆ ಎಲ್‌ಬಿಡಬ್ಲ್ಯು ಬಿ ಇರ್ಫಾನ್ ಪಠಾಣ್  26
ತಿಲಕರತ್ನೆ ದಿಲ್ಯಾನ್ ಬಿ ಇರ್ಫಾನ್ ಪಠಾಣ್  00
ಉಪುಲ್ ತರಂಗ ಸಿ ಅಜಿಂಕ್ಯ ರಹಾನೆ ಬಿ ಇರ್ಫಾನ್ ಪಠಾಣ್  05
ಲಾಹಿರು ತಿರುಮನ್ನೆ ಬಿ ಆರ್. ಆಶ್ವಿನ್  20
ಆ್ಯಂಜಲೊ ಮ್ಯಾಥ್ಯೂಸ್ ಸಿ. ದೋನಿ ಬಿ ಅಶೋಕ್ ದಿಂಡಾ  31
ಜೀವನ್ ಮೆಂಡಿಸ್ ಸಿ ರಹಾನೆ ಬಿ ಉಮೇಶ್ ಯಾದವ್  11
ದಿನೇಶ್ ಚಂಡಿಮಾಲ ಸಿ ವಿರಾಟ್ ಕೊಹ್ಲಿ ಬಿ ಅಶೋಕ್ ದಿಂಡಾ  07
ತಿಸ್ಸಾರ ಪೆರೇರಾ ರನ್‌ಔಟ್ (ತಿವಾರಿ)  01
ಶಮಿಂದಾ ಎರಂಗಾ ಸಿ ಅಶ್ವಿನ್ ಬಿ ಅಶೋಕ್ ದಿಂಡಾ  06
ಲಸಿತ್ ಮಾಲಿಂಗ ಸಿ ದೋನಿ ಬಿ ಬಿ ದಿಂಡಾ  00
ರಂಗನ್ ಹೆರಾತ್  ಔಟಾಗದೆ  00
ಇತರೆ: (ಲೆಗ್ ಬೈ-2, ವೈಡ್ 7)  09
ವಿಕೆಟ್ ಪತನ: 1-7 (ದಿಲ್ಯಾನ್; 0.5), 2-14 (ತರಂಗ; 2.1), 3-35 (ಜಯವರ್ಧನೆ 4.2), 4-68 (ಲಾಹಿರು; 9.1), 5-96 (ಮ್ಯಾಥ್ಯೂಸ್; 12.6), 6-100 (ಮೆಂಡಿಸ್; 14.3), 7-102 (ಪೆರೇರಾ; 15.2), 8-116 (ಚಂಡಿಮಾಲ; 17.2), 9-116 (ಎರಂಗಾ; 17.4), 10-116 (ಮಾಲಿಂಗ; 17.6).
ಬೌಲಿಂಗ್: ಇರ್ಫಾನ್ ಪಠಾಣ್ 4-0-27-3, ಉಮೇಶ್ ಯಾದವ್ 3-0-24-1, ಅಶೋಕ್ ದಿಂಡಾ 3-1-19-4, ವಿರಾಟ್ ಕೊಹ್ಲಿ 3-0-13-0, ರೋಹಿತ್ ಶರ್ಮ 1-0-9-0, ಶಮಿಂದಾ ಎರಂಗಾ 4-0-22-1.

ಫಲಿತಾಂಶ: ಭಾರತಕ್ಕೆ 39 ರನ್‌ಗಳ ಜಯ.
ಪಂದ್ಯ ಶ್ರೇಷ್ಠ: ಇರ್ಫಾನ್ ಪಠಾಣ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT