ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಭಾರತಕ್ಕೆ ಸೋಲು

Last Updated 24 ಜುಲೈ 2012, 19:30 IST
ಅಕ್ಷರ ಗಾತ್ರ

ಹಂಬಂಟೋಟಾ (ಪಿಟಿಐ/ಐಎಎನ್‌ಎಸ್): ಭಾರತದ ಬ್ಯಾಟ್ಸ್‌ಮನ್‌ಗಳ ವೈಫಲ್ಯ. ಆತಿಥೇಯ ಬೌಲರ್‌ಗಳ ಆರ್ಭಟ. ಈ ಎರಡು ಅಂಶಗಳು ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ಗೆಲುವಿಗೆ ಪ್ರಮುಖ ಕಾರಣಗಳಾದವು.

ಮಹಿಂದಾ ರಾಜಪಕ್ಸೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದೋನಿ ಪಡೆ ನಿರೀಕ್ಷೆಯಂತೆ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ (65, 96ಎಸೆತ, 4ಬೌಂಡರಿ) ಏಕಾಂಗಿ ಹೋರಾಟ ನಡೆಸಿದರು. ಈ ಪರಿಣಾಮ ಭಾರತ 33.3 ಓವರ್‌ಗಳಲ್ಲಿ 138 ರನ್ ಗಳಿಸಿತ್ತು. ಈ ಮೊತ್ತ ಆತಿಥೇಯರಿಗೆ ಸವಾಲು ಎನಿಸಲಿಲ್ಲ. 19.5 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಉಪುಲ್ ತರಂಗ (ಔಟಾಗದೆ 59, 60 ಎಸೆತ, 8ಬೌಂಡರಿ) ಮತ್ತು ತಿಲಕರತ್ನೆ ದಿಲ್ಯಾನ್ (50, 49ಎಸೆತ, 5ಬೌಂಡರಿ) ಆರಂಭದಿಂದಲೇ ವೇಗವಾಗಿ ರನ್ ಕಲೆ ಹಾಕಿ ಲಂಕಾದ ಗೆಲುವನ್ನು ಸುಲಭಗೊಳಿಸಿದರು. ಮೊದಲ ಒಂಬತ್ತು ಓವರ್‌ಗಳಲ್ಲಿ 64 ರನ್ ಕಲೆ ಹಾಕಿ ಗೆಲುವನ್ನು ಸುಲಭ ಮಾಡಿಕೊಂಡಿತು.

ಇದೇ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಲಂಕಾ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ್ದ ಕೊಹ್ಲಿ (1) ಹಾಗೂ ವೀರೇಂದ್ರ ಸೆಹ್ವಾಗ್ (15) ಅವರ `ಆಟ~ ಈ ಪಂದ್ಯದಲ್ಲಿ ನಡೆಯಲಿಲ್ಲ. ರೋಹಿತ್ ಶರ್ಮ, ಸುರೇಶ್ ರೈನಾ, ಇರ್ಫಾನ್ ಪಠಾಣ್, ಜಹೀರ್ ಖಾನ್, ಪ್ರಗ್ಯಾನ್ ಓಜಾ ಮತ್ತು ಉಮೇಶ್ ಯಾದವ್ ಅವರು ಎರಡಂಕಿಯ ಮೊತ್ತ ಮುಟ್ಟಲು ಲಂಕಾ ಬೌಲರ್‌ಗಳು ಅವಕಾಶ ನೀಡಲಿಲ್ಲ.
 
ತಂಡದ ಒಟ್ಟು ಮೊತ್ತ 100ರ ಗಡಿ ದಾಟುವ ವೇಳೆಗಾಗಲೇ ಭಾರತ ಆರು ವಿಕೆಟ್ ಕಳೆದುಕೊಂಡಿತ್ತು. ಎಡಗೈ ಬ್ಯಾಟ್ಸ್‌ಮನ್ ಗಂಭೀರ್ ಅವಕಾಶ ಸಿಕ್ಕಾಗಲೆಲ್ಲ ಸರಾಗವಾಗಿ ದಂಡಿಸುತ್ತಿದ್ದರೆ, ಇನ್ನೊಂದೆಡೆಯಿದ್ದ ಬ್ಯಾಟ್ಸ್‌ಮನ್‌ಗಳು `ಪೆವಿಲಿಯನ್ ಪರೇಡ್~ ನಡೆಸುತ್ತಿದ್ದರು.

ಭಾರತ ಐಸಿಸಿ ಏಕದಿನ ರ‌್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಬೇಕಿದ್ದರೆ, 5-0ರಲ್ಲಿ ಸರಣಿ ಗೆಲ್ಲುವುದು ಅಗತ್ಯವಿತ್ತು. ಆದರೆ, ಈ ಅವಕಾಶ ಈಗ ತಪ್ಪಿ ಹೋಯಿತು.

ಸ್ಕೋರ್ ವಿವರ:
ಭಾರತ 33.3 ಓವರ್‌ಗಳಲ್ಲಿ 138
ಗೌತಮ್ ಗಂಭೀರ್ ಸಿ ಕುಮಾರ ಸಂಗಕ್ಕಾರ ಬಿ ಲಸಿತ್ ಮಾಲಿಂಗ  65
ವೀರೇಂದ್ರ ಸೆಹ್ವಾಗ್ ಸಿ ಮತ್ತು ಬಿ ತಿಸ್ಸಾರ ಪೆರೆರಾ  15
ವಿರಾಟ್ ಕೊಹ್ಲಿ ಸಿ ಕುಮಾರ ಸಂಗಕ್ಕಾರ ಬಿ ತಿಸ್ಸಾರ ಪೆರೆರಾ  01
ರೋಹಿತ್ ಶರ್ಮ ಬಿ  ಆ್ಯಂಜಲೊ ಮ್ಯಾಥ್ಯೂಸ್  00
ಸುರೇಶ್ ರೈನಾ ಬಿ ತಿಸ್ಸಾರ ಪೆರೆರಾ  01
ಮಹೇಂದ್ರ ಸಿಂಗ್ ದೋನಿ ಸಿ ಕುಮಾರ ಸಂಗಕ್ಕಾರ ಬಿ ಆ್ಯಂಜಲೊ ಮ್ಯಾಥ್ಯೂಸ್  11
ಇರ್ಫಾನ್ ಪಠಾಣ್ ಸಿ ತಿಸ್ಸಾರ ಪೆರೆರಾ ಬಿ ಲಸಿತ್ ಮಾಲಿಂಗ  06
ಆರ್. ಅಶ್ವಿನ್ ರನ್ ಔಟ್ (ಐಸುರು ಉದಾನ/ಸಂಗಕ್ಕಾರ)  21
ಜಹೀರ್ ಖಾನ್ ಎಲ್‌ಬಿಡಬ್ಲ್ಯು ಬಿ ರಂಗನ್ ಹೆರಾತ್  02
ಪ್ರಗ್ಯಾಜ್ ಓಜಾ ಸಿ ಕುಮಾರ ಸಂಗಕ್ಕಾಗಿ ಬಿ ಆ್ಯಂಜಲೊ ಮ್ಯಾಥ್ಯೂಸ್  05
ಉಮೇಶ್ ಯಾದವ್ ಔಟಾಗದೆ  00
ಇತರೆ: (ಬೈ-2, ಲೆಗ್ ಬೈ-4, ವೈಡ್-5)  11
ವಿಕೆಟ್ ಪತನ: 1-31 (ಸೆಹ್ವಾಗ್; 3.6), 2-33 (ಕೊಹ್ಲಿ; 5.3), 3-38 (ಶರ್ಮ; 6.4), 4-41 (ರೈನಾ; 7.4), 5-60 (ದೋನಿ; 14.1), 6-79 (ಪಠಾಣ್; 19.5), 7-107 (ಅಶ್ವಿನ್; 23.6), 8-113 (ಜಹೀರ್; 25.4), 9-132 (ಓಜಾ; 32.3), 10-138 (ಗಂಭೀರ್; 33.3).
ಬೌಲಿಂಗ್: ಲಸಿತ್ ಮಾಲಿಂಗ 7.3-0-36-2, ಐಸುರು ಉದಾನ 6-0-42-0, ತಿಸ್ಸಾರ ಪೆರೆರಾ 8-3-19-3, ಆ್ಯಂಜಲೊ ಮ್ಯಾಥ್ಯೂಸ್ 7-2-14-3, ರಂಗನ್ ಹೆರಾತ್ 5-0-21-1.
ಶ್ರೀಲಂಕಾ 19.5 ಓವರ್‌ಗಳಲ್ಲಿ  1 ವಿಕೆಟ್‌ಗೆ 139
ಉಪುಲ್ ತರಂಗ ಔಟಾಗದೆ  59
ತಿಲಕರತ್ನೆ ದಿಲ್ಯಾನ್ ಸಿ ದೋನಿ ಬಿ ಅಶ್ವಿನ್  50
ದಿನೇಶ್ ಚಂಡಿಮಾಲ್ ಔಟಾಗದೆ  06
ಇತರೆ: (ಲೆಗ್ ಬೈ-10, ವೈಡ್-14)  24
ವಿಕೆಟ್ ಪತನ: 1-119 (ದಿಲ್ಯಾನ್; 16.4).
ಬೌಲಿಂಗ್: ಜಹೀರ್ ಖಾನ್ 6-0-39-0, ಇರ್ಫಾನ್ ಪಠಾಣ್ 4-0-27-0, ಉಮೇಶ್ ಯಾದವ್ 4-0-38-0, ಆರ್. ಅಶ್ವಿನ್ 5-1-18-1, ಪ್ರಗ್ಯಾನ್ ಓಜಾ 0.5-0-7-0.
ಫಲಿತಾಂಶ: ಶ್ರೀಲಂಕಾಕ್ಕೆ 9 ವಿಕೆಟ್‌ಗಳ ಜಯ.  ಪಂದ್ಯ ಶ್ರೇಷ್ಠ: ತಿಸ್ಸಾರ ಪೆರೆರಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT