ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ವಿಂಡೀಸ್‌ಗೆ ಸರಣಿ ಜಯ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಢಾಕಾ (ಎಎಫ್‌ಪಿ): ಲೆಂಡ್ಲ್  ಸಿಮಾನ್ಸ್ (80; 125 ಎಸೆತ, 3ಬೌಂ, 3ಸಿಕ್ಸರ್) ಹಾಗೂ ಮಾರ್ಲೊನ್ ಸ್ಯಾಮುಯೆಲ್ಸ್  (88; 74ಎಸೆತ, 12ಬೌಂ, 1ಸಿಕ್ಸರ್) ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡದವರು ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಜಯ ಪಡೆದರು.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಪ್ರವಾಸಿ ಬಿಗುವಿನ ಬೌಲಿಂಗ್ ಮಾಡಿದ್ದು ಕೂಡ ವಿಂಡೀಸ್ ಗೆಲುವಿಗೆ ನೆರವಾಯಿತು. ಈ ಗೆಲುವಿನ ಮೂಲಕ ವಿಂಡೀಸ್ ಮೂರು ಪಂದ್ಯಗಳ ಸರಣಿಯಲ್ಲಿ 2-0ರಲ್ಲಿ ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿತು.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ 48.5 ಓವರ್‌ಗಳಲ್ಲಿ 220. (ಮುಶ್ಪೀಕರ್ ರಹೀಮ್ 69, ಅಲೋಕ್ ಕಪಾಲಿ 20, ನಯೀಮ್ ಇಸ್ಲಾಂ, 30, ನಾಸೀರ್ ಹುಸೇನ್ 50, ಅಬ್ದುಲ್ ರಜಾಕ್ 25; ರವಿ ರಾಂಪಾಲ್ 27ಕ್ಕೆ2, ಕೆಮರ್ ರೋಚ್ 49ಕ್ಕೆ3, ಡರೆನ್ ಸಮಿ 42ಕ್ಕೆ2).  ವೆಸ್ಟ್ ಇಂಡೀಸ್ 42.4 ಓವರ್‌ಗಳಲ್ಲಿ 2 ವಿಕೆಟ್‌ಗೆ 221. (ಲೆಂಡ್ಲ್   ಸಿಮಾನ್ಸ್ 80, ಡಾಂಜಾ ಹ್ಯಾಟಿ 39, ಸ್ಯಾಮುಯೆಲ್ಸ್ ಔಟಾಗದೆ 88; ಶಕೀಬ್ ಅಲ್ ಹಸನ್ 30ಕ್ಕೆ2). ಫಲಿತಾಂಶ:  ವೆಸ್ಟ್ ಇಂಡೀಸ್‌ಗೆ 8 ವಿಕೆಟ್. ಪಂದ್ಯ ಶ್ರೇಷ್ಠ: ಮಾರ್ಲೊನ್ ಸ್ಯಾಮುಯೆಲ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT