ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ವೆಟೋರಿ ಶತಕ

Last Updated 16 ಜನವರಿ 2011, 17:25 IST
ಅಕ್ಷರ ಗಾತ್ರ

ವೆಲಿಂಗ್ಟನ್ (ಎಪಿ): ನಾಯಕ ಡೇನಿಯಲ್ ವೆಟೋರಿ (110) ಅವರ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ತನ್ನ ಮೊದಲ ಇನಿಂಗ್ಸ್‌ನಲ್ಲಿ 356 ರನ್ ಕಲೆಹಾಕಿದೆ.

ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇದಕ್ಕೆ ಉತ್ತರ ನೀಡಿರುವ ಪಾಕಿಸ್ತಾನ ಎರಡನೇ ದಿನದಾಟದ ಅಂತ್ಯಕ್ಕೆ 49.5 ಓವರ್‌ಗಳಲ್ಲಿ 2 ವಿಕೆಟ್‌ಗೆ 134 ರನ್ ಗಳಿಸಿದೆ. ಮೊಹಮ್ಮದ್ ಹಫೀಜ್ (1) ಅವರನ್ನು ಪಾಕ್ ಬೇಗನೆ ಕಳೆದುಕೊಂಡಿತು.

ಆದರೆ ಅಜರ್ ಅಲಿ (ಬ್ಯಾಟಿಂಗ್ 62) ಮತ್ತು ತೌಫೀಕ್ ಉಮರ್ (70) ಎರಡನೇ ವಿಕೆಟ್‌ಗೆ 132 ರನ್ ಸೇರಿಸಿದರು. ತೌಫೀಕ್ ದಿನದ ಕೊನೆಯ ಓವರ್‌ನಲ್ಲಿ ಔಟಾದರು.
ಇದಕ್ಕೂ ಮೊದಲು 6 ವಿಕೆಟ್‌ಗೆ 246 ರನ್‌ಗಳಿಂದ ಭಾನುವಾರ ಆಟ ಆರಂಭಿಸಿದ ಕಿವೀಸ್‌ಗೆ ವೆಟೋರಿ ಆಸರೆಯಾದರು. ಅವರು ರೀಸ್ ಯಂಗ್ (57) ಜೊತೆ ಏಳನೇ ವಿಕೆಟ್‌ಗೆ 138 ರನ್‌ಗಳ ಜೊತೆಯಾಟ ನೀಡಿದರು.  

166 ಎಸೆತಗಳನ್ನು ಎದುರಿಸಿದ ವೆಟೋರಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಪಾಕ್ ಪರ ಉಮರ್ ಗುಲ್ (87ಕ್ಕೆ 4) ಮತ್ತು ತನ್ವೀರ್ ಅಹ್ಮದ್ (93ಕ್ಕೆ 3) ಅವರು ಪ್ರಭಾವಿ ಎನಿಸಿದರು.

ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: ಮೊದಲ ಇನಿಂಗ್ಸ್ 127.1 ಓವರ್‌ಗಳಲ್ಲಿ 356 (ರೀಸ್ ಯಂಗ್ 57, ಡೇನಿಯಲ್ ವೆಟೋರಿ 110, ಉಮರ್ ಗುಲ್ 87ಕ್ಕೆ 4, ತನ್ವೀರ್ ಅಹ್ಮದ್ 93ಕ್ಕೆ 3) ಪಾಕಿಸ್ತಾನ: ಮೊದಲ ಇನಿಂಗ್ಸ್: 49.5 ಓವರ್‌ಗಳಲ್ಲಿ 2 ವಿಕೆಟ್‌ಗೆ 134 (ಅಜರ್ ಅಲಿ ಬ್ಯಾಟಿಂಗ್ 62, ತೌಫೀಕ್ ಉಮರ್ 70)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT