ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ವೆಸ್ಟ್ ಇಂಡೀಸ್‌ಗೆ ಮೊದಲ ಗೆಲುವಿನ ಸಂಭ್ರಮ

Last Updated 14 ಜೂನ್ 2011, 19:30 IST
ಅಕ್ಷರ ಗಾತ್ರ

ಆ್ಯಂಟಿಗ: : ಸರಣಿ ಸೋಲಿನ ನಿರಾಸೆಯಲ್ಲಿದ್ದ ಕೆರಿಬಿಯನ್ ತಂಡದ ಆಟಗಾರರು ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ ಸುರೇಶ್ ರೈನಾ ನೇತೃತ್ವದ `ಯುವ~ ಭಾರತ ತಂಡ ಸರಣಿಯನ್ನು `ಕ್ಲೀನ್ ಸ್ವೀಪ್~ ಮಾಡಬೇಕೆನ್ನುವ ಕನಸು ಭಗ್ನಗೊಂಡಿತು.

ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಭಾರತ ವಿರುದ್ಧದ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವಿಂಡೀಸ್ 103 ರನ್‌ಗಳ ಗೆಲುವು ಪಡೆಯಿತು. ಗೆಲುವಿನ ದಡ ಸೇರಲು 250 ರನ್ ಗಳಿಸಬೇಕಿದ್ದ ಭಾರತ ಅರ್ಧ ಹಾದಿಯಲ್ಲಿಯೇ ಮುಗ್ಗರಿಸಿತು. 39 ಓವರ್‌ಗಳಲ್ಲಿ 146 ರನ್ ಗಳಿಸುವಷ್ಟರಲ್ಲಿ ಭಾರತ ಎಲ್ಲಾ ವಿಕೆಟ್ ಕಳೆದುಕೊಂಡು ಈ ಸರಣಿಯಲ್ಲಿ ಮೊದಲ ಸೋಲು ಅನುಭವಿಸಿತು.

ಈ ಗೆಲುವಿನ ಕೀರ್ತಿ ಸಂಪೂರ್ಣವಾಗಿ ಸಲ್ಲಬೇಕಿದ್ದು ವಿಂಡೀಸ್ ಬೌಲರ್‌ಗಳಿಗೆ. ಕೆರಿಬಿಯನ್ನರ ವಿರುದ್ಧ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭದಲ್ಲಿಯೇ ಮುಗ್ಗರಿಸಿತು. ಐದನೇ ಓವರ್‌ನ ಕೊನೆಯ ಎಸೆತದಲ್ಲಿ ಮನೋಜ್ ತಿವಾರಿ ಸೆಮಿ ಎಸೆತದಲ್ಲಿ ಬಾಗ್‌ಗೆ ವಿಕೆಟ್ ಒಪ್ಪಿಸಿದರು.

ಮೊದಲ ಆಘಾತದಿಂದ ಭಾರತ ಹೊರ ಬರಲು ವಿಂಡೀಸ್ ಬೌಲರ್‌ಗಳು ಅವಕಾಶ ನೀಡಲಿಲ್ಲ. ಭಾರತದ ಬ್ಯಾಟಿಂಗ್ ಬಲಕ್ಕೆ ಪೆಟ್ಟು ನೀಡಿದ ಕೀರ್ತಿ ಅಂಥೋನಿ ಹಾಗೂ ಆ್ಯಂಡ್ರೆ ರಸೆಲ್ ಅವರಿಗೆ ಸಲ್ಲುತ್ತದೆ.

ಸ್ಕೋರು ವಿವರ
ವೆಸ್ಟ್ ಇಂಡೀಸ್ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 249
ಭಾರತ 39 ಓವರ್‌ಗಳಲ್ಲಿ 146
ಪಾರ್ಥಿವ್ ಪಟೇಲ್ ಸಿ ಮತ್ತು ಬಿ ಸೆಮಿ  26
ಮನೋಜ್ ತಿವಾರಿ ಸಿ ಬಾಗ್ ಬಿ ಸೆಮಿ  02
ವಿರಾಟ್ ಕೊಹ್ಲಿ ಸ್ಪಂಪ್ಟ್ ಬಾಗ್ ಬಿ ಮಾರ್ಟಿನ್  22
ಎಸ್. ಬದರೀನಾಥ್ ಸಿ ಬಾಗ್ ಬಿ ರುಸೆಲ್  12

ರೋಹಿತ್ ಶರ್ಮ ಸಿ ಬ್ರೆವೊ ಬಿ ಮಾರ್ಟಿನ್  39
ಸುರೇಶ್ ರೈನಾ ಸಿ ಪೊಲಾರ್ಡ್ ಬಿ ಮಾರ್ಟಿನ್  10
ಯೂಸುಫ್ ಪಠಾಣ್ ಸಿ ರೋಚ್ ಬಿ ಸಿಮಾನ್ಸ್  01
ಆರ್. ಅಶ್ವಿನ್ ಸಿ ಸ್ಯಾಮೂಯಲ್ಸ್ ಬಿ ರುಸೆಲ್  15
ಪ್ರವೀಣ್ ಕುಮಾರ್ ಸಿ ಸೆಮಿ ಬಿ ರುಸೆಲ್  06
ಅಮಿತ್ ಮಿಶ್ರಾ ಔಟಾಗದೇ  05

ಇಶಾಂತ್ ಶರ್ಮ ಸ್ಪಂಪ್ಡ್ ಬಾಗ್ ಬಿ ಮಾರ್ಟಿನ್  00

ಇತರೆ: (ಬೈ-4, ಲೆಗ್ ಬೈ-2, ವೈಡ್ 2) 08

ವಿಕೆಟ್ ಪತನ: 20-1 (ತಿವಾರಿ; 5.4), 2-41 (ಪಟೇಲ್; 9.2), 3-(ಬದರೀನಾಥ್; 16.3), 4-82 (ಕೊಹ್ಲಿ 20.6), 5-111 (ರೈನಾ; 26.6), 6-(ಪಠಾಣ್; 27.4), 7-134 (ರೋಹಿತ್ ಶರ್ಮ; 30.6), 8-138 (ಪ್ರವೀಣ್ ಕುಮಾರ್; 35.1), 9-145 (ಅಶ್ವಿನ್; 37.5), 10-146 (ಇಶಾಂತ್ ಶರ್ಮ;38.6).

ಬೌಲಿಂಗ್: ಕೆಮರ್ ರಾಚ್ 8-1-22-0, ಡೆರನ್ ಸೆಮಿ 9-0-43-2, ಆ್ಯಂಡ್ರೆ ರುಸೆಲ್ 7-0-16-3, ಕಿರನ್ ಪೊಲಾರ್ಡ್ 4-0-20-0, ಅಂಥೋನಿ ಮಾರ್ಟಿನ್ 10-0-36-4, ಲೆಂಡ್ಲ್ ಸಿಮಾನ್ಸ್ 1-0-3-0.

ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 103 ರನ್ ಗೆಲುವು

ಪಂದ್ಯ ಶ್ರೇಷ್ಠ: ಮಾರ್ಟಿನ್ ಅಂಥೋನಿ (ವೆಸ್ಟ್ ಇಂಡೀಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT