ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಶ್ರೀಲಂಕಾ ತಂಡದ ಮರು ಹೋರಾಟ

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಪಳ್ಳೆಕೆಲೆ, ಶ್ರೀಲಂಕಾ (ಎಎಫ್‌ಪಿ):  ತರಂಗ ಪರಣವಿತನ (55, 143ಎಸೆತ, 6ಬೌಂ) ಹಾಗೂ ಕುಮಾರ ಸಂಗಕ್ಕಾರ (ಬ್ಯಾಟಿಂಗ್ 69, 158ಎಸೆತ, 8ಬೌಂ) ಅವರ ಅರ್ಧಶತಕದ ನೆರವಿನಿಂದ ಶ್ರೀಲಂಕಾ ತಂಡದವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಕ್ರಿಕೆಟ್ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಉತ್ತಮ ಮರು ಹೋರಾಟ ನಡೆಸಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 411 ರನ್ ಗಳಿಸಿದ ಆಸ್ಟ್ರೇಲಿಯಾ ಇನಿಂಗ್ಸ್ ಡಿಕ್ಲೇರ್ಡ್ ಮಾಡಿಕೊಂಡಿತು. ಈ ಮೂಲಕ 237 ರನ್‌ಗಳ ಮುನ್ನಡೆ ಸಾಧಿಸಿತ್ತು. ಮಳೆಯ ನಡುವೆಯೂ ಎರಡನೇ ಇನಿಂಗ್ಸ್ ಆರಂಭಿಸಿದ ಆತಿಥೇಯ ಲಂಕಾ ನಾಲ್ಕನೇ ದಿನವಾದ ಭಾನುವಾರದ ಅಂತ್ಯಕ್ಕೆ 79 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿದೆ. ಮಳೆ ಹಾಗೂ ಮಂದ ಬೆಳಕಿನ ಕಾರಣ ಇನ್ನೂ 11 ಓವರ್‌ಗಳು ಬಾಕಿ ಇರುವಾಗಲೇ ದಿನದಾಟಕ್ಕೆ ತೆರೆ ಬಿತ್ತು.

ಎರಡನೇ ಇನಿಂಗ್ಸ್‌ನಲ್ಲಿ ದಿಲ್ಯಾನ್ ಹಾಗೂ ಪರಣವಿತನ ಜೋಡಿ ಮೊದಲ ವಿಕೆಟ್‌ಗೆ 81 ರನ್ ಕಲೆ ಗಳಿಸಿ ಉತ್ತಮ ಬುನಾದಿ ಹಾಕಿತು.

ಈ ಇಬ್ಬರೂ ಆಟಗಾರರು ವೇಗವಾಗಿ ರನ್ ಕಲೆ ಹಾಕುವತ್ತ ಗಮನ ಹರಿಸಿದರು. 12.4 ಓವರ್‌ಗಳಲ್ಲಿ ಲಂಕಾ 50 ರನ್ ಗಳಿಸಿತ್ತು. ನಂತರ ನಿಧಾನವಾಗಿ ರನ್ ಪೇರಿಸಿತು. ತಂಡದ ಒಟ್ಟು ಮೊತ್ತ  100 ಆದಾಗ 34.5 ಓವರ್‌ಗಳಾಗಿದ್ದವು.

ಆತಿಥೇಯ ತಂಡ ಭೋಜನ ವಿರಾಮದ ವೇಳೆಗೆ 28 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿತ್ತು.

ಉತ್ತಮ ಆರಂಭ ನೀಡಿದ್ದ ದಿಲ್ಯಾನ್ ಅವರು ಹ್ಯಾರಿಸ್ ಎಸೆತದಲ್ಲಿ ಔಟ್ ಆದರು. ಇದಾದ 47 ರನ್‌ಗಳ ಅಂತರದಲ್ಲಿ ಪರಣವಿತನ ಸಹ ಹಸ್ಸಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಮೂರನೇ ವಿಕೆಟ್‌ಗೆ ಸಂಗಕ್ಕಾರ ಹಾಗೂ ಜಯವರ್ಧನೆ ಜೊತೆಯಾಟದಲ್ಲಿ 95 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಆಸೀಸ್‌ನ ಮೊದಲ ಇನಿಂಗ್ಸ್‌ನ ಗುರಿ ಮಟ್ಟಲು ಲಂಕಾ ಇನ್ನೂ 15 ರನ್ ಗಳಿಸಬೇಕಿದೆ.

ಈ ಮೊದಲು ಆಸೀಸ್ ತಂಡ ಶಾನ್ ಮಾರ್ಷ್ ಹಾಗೂ ಮೈಕ್ ಹಸ್ಸಿ ಅವರ ಶತಕದ ನೆರವಿನಿಂದ 400 ರನ್‌ಗಳ ಗಡಿ ದಾಟಿತ್ತು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ ಮೊದಲ ಇನಿಂಗ್ಸ್ 64.1 ಓವರ್‌ಗಳಲ್ಲಿ 174 ಮತ್ತು ಎರಡನೇ ಇನಿಂಗ್ಸ್ 79 ಓವರ್‌ಗಳಲ್ಲಿ 2 ವಿಕೆಟ್‌ಗೆ 223 (ತರಂಗ ಪರಣವಿತನ 55, ತಿಲಕರತ್ನೆ ದಿಲ್ಶಾನ್ 36, ಕುಮಾರ ಸಂಗಕ್ಕಾರ ಬ್ಯಾಟಿಂಗ್ 69, ಮಾಹೇಲ ಜಯವರ್ಧನೆ ಬ್ಯಾಟಿಂಗ್ 38; ರ‌್ಯಾನ್ ಹ್ಯಾರಿಸ್ 43ಕ್ಕೆ1, ಮೈಕ್ ಹಸ್ಸಿ 2ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT