ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಸರಣಿ; ಭಾರತ ಜೂನಿಯರ್ ತಂಡ ಚಾಂಪಿಯನ್

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಿಶಾಖ ಪಟ್ಟಣ (ಪಿಟಿಐ): ಶಿಸ್ತಿನ ದಾಳಿ ನಡೆಸಿದ ಭಾರತ ಕ್ರಿಕೆಟ್ ತಂಡದವರು (19 ವರ್ಷದೊಳಗಿನವರು) ಇಲ್ಲಿ ನಡೆದ ಚತುಷ್ಕೋನ ಏಕದಿನ ಕ್ರಿಕೆಟ್ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಚಾಂಪಿಯನ್ ಆದರು. 

 ಇಲ್ಲಿನ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಭಾರತ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆತಿಥೇಯ ತಂಡ 50 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು. ಇದಕ್ಕುತ್ತರವಾಗಿ ಶ್ರೀಲಂಕಾ 46.5 ಓವರ್‌ಗಳಲ್ಲಿ 163 ರನ್ ಗಳಿಸಿ ಆಲ್‌ಔಟ್ ಆಯಿತು. ಇದಕ್ಕೆ ಭಾರತದ ಸಂದೀಪ್ ಶರ್ಮ (23ಕ್ಕೆ4) ಹಾಗೂ ರಷ್ ಕಲೇರಿಯಾ (34ಕ್ಕೆ3) ಅವರ ಚುರುಕಿನ ಬೌಲಿಂಗ್ ಕಾರಣ.

ಸಂಕ್ಷಿಪ್ತ ಸ್ಕೋರು: ಭಾರತ 50 ಓವರ್‌ಗಳಲ್ಲಿ 168. (ಹನುಮಾನ್ ವಿಹಾರಿ 15, ಅಕ್ಷದೀಪ್ ನಾಥ್ 55, ಸಿಮಿತ್ ಪಟೇಲ್ 31, ಹರ್ಮಿತ್ ಸಿಂಗ್ 23; ಲಹಿರು ಮಧುಶಂಖ 17ಕ್ಕೆ4, ಅಮಿಲಾ ಅಪನ್ಸೊ 40ಕ್ಕೆ2), ಶ್ರೀಲಂಕಾ 46.5 ಓವರ್‌ಗಳಲ್ಲಿ 163 (ಟಿ. ದುಲೇಕಾ 29, ಲಹಿರು ಮಧುಶಂಖ 63, ಅಮಿಲಾ ಅಪನ್ಸೊ 21; ಸಂದೀಪ್ ಶರ್ಮ 23ಕ್ಕೆ4, ರಷ್ ಕಲೇರಿಯಾ 34ಕ್ಕೆ3). ಫಲಿತಾಂಶ: ಭಾರತಕ್ಕೆ ಐದು ರನ್ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT