ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಹಿರಿಯರಿಗೆ ವಿಶ್ರಾಂತಿ ಸಾಧ್ಯತೆ

Last Updated 24 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ವೆಸ್ಟ್‌ಇಂಡೀಸ್ ವಿರುದ್ಧ ನಡೆಯುವ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಭಾರತ ಕ್ರಿಕೆಟ್ ತಂಡದ ಆಯ್ಕೆ ಶುಕ್ರವಾರ ನಡೆಯಲಿದ್ದು, ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯ ಪ್ರವಾಸಕ್ಕೆ ಭಾರತ ತೆರಳಬೇಕಿರುವುದರಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ನಿರ್ಧರಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಆಯ್ಕೆದಾರರು ಈ ವಿಷಯದ ಕುರಿತು ನಾಯಕ ಮಹೇಂದ್ರ ಸಿಂಗ್ ದೋನಿ ಅವರ ಅಭಿಪ್ರಾಯ ಪಡೆಯಲಿದ್ದಾರೆ. ಒಂದು ವೇಳೆ ದೋನಿ ವಿಶ್ರಾಂತಿ ಪಡೆಯಲಿಚ್ಚಿಸಿದರೆ, ವೀರೇಂದ್ರ ಸೆಹ್ವಾಗ್ ಅಥವಾ ಗೌತಮ್ ಗಂಭೀರ್ ತಂಡವನ್ನು ಮುನ್ನಡೆಸಲಿದ್ದಾರೆ. ಪಾರ್ಥೀವ್ ಪಟೇಲ್ ವಿಕೆಟ್ ಕೀಪರ್‌ನ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಮೊದಲ ಎರಡು ಏಕದಿನ ಪಂದ್ಯಗಳು ಕಟಕ್ (ನ.29) ಮತ್ತು ವಿಶಾಖಪಟ್ಟಣದಲ್ಲಿ (ಡಿ.2) ನಡೆಯಲಿವೆ.
ಮುಂಬರುವ ಆಸ್ಟ್ರೇಲಿಯಾ ಪ್ರವಾಸ ಭಾರತ ತಂಡಕ್ಕೆ ಮಹತ್ವದ್ದಾಗಿದೆ. ಈ ಕಾರಣ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ತಂಡದ ಕೆಲವು ಆಟಗಾರರು ಬೇಗನೇ ಅಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ವಿಶ್ವಕಪ್ ಬಳಿಕ ಯಾವುದೇ ಏಕದಿನ ಪಂದ್ಯವನ್ನಾಡದ ಸಚಿನ್ ತೆಂಡೂಲ್ಕರ್ ವಿಂಡೀಸ್ ವಿರುದ್ಧ ಆಡುವರೇ ಎಂಬುದು ಖಚಿತವಾಗಿಲ್ಲ.

ಹಿರಿಯ ಆಟಗಾರರು ಹಿಂದೆ ಸರಿದರೆ ಯುವರಾಜ್ ಸಿಂಗ್, ಸುರೇಶ್ ರೈನಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ.

ಸ್ಕೋರ್ ವಿವರ

ವೆಸ್ಟ್ ಇಂಡೀಸ್: ಪ್ರಥಮ ಇನಿಂಗ್ಸ್ 184.1 ಓವರುಗಳಲ್ಲಿ 590
(ಬುಧವಾರದ ಆಟದಲ್ಲಿ: 181 ಓವರುಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 575)
ಫಿಡೆಲ್ ಎಡ್ವರ್ಡ್ಸ್ ಔಟಾಗದೆ  11
ದೇವೇಂದ್ರ ಬಿಶೂ ಬಿ ರವಿಚಂದ್ರನ್ ಅಶ್ವಿನ್  12
ಇತರೆ: (ಬೈ-8, ಲೆಗ್‌ಬೈ-16, ನೋಬಾಲ್-2)  26
ವಿಕೆಟ್ ಪತನ: 1-137 (ಆ್ಯಡ್ರಿನ್ ಭರತ್; 52.5), 2-150 (ಕ್ರೇಗ್ ಬ್ರಾಥ್‌ವೈಟ್; 58.6), 3-314 (ಕ್ರಿಕ್ ಎಡ್ವರ್ಡ್ಸ್; 103.5), 4-474 (ಕೀರನ್ ಪೊವೆಲ್; 150.1), 5-518 (ಡರೆನ್ ಬ್ರಾವೊ; 163.6), 6-524 (ಕಾರ್ಲ್‌ಟನ್ ಬಾ; 165.5), 7-540 (ಡರೆನ್ ಸಾಮಿ; 169.4), 8-563 (ರವಿ ರಾಂಪಾಲ್; 174.1), 9-566 (ಮರ್ಲಾನ್ ಸ್ಯಾಮುಯಲ್ಸ್; 176.6), 10-590 (ದೇವೇಂದ್ರ ಬಿಶೂ; 184.1).
ಬೌಲಿಂಗ್: ಇಶಾಂತ್ ಶರ್ಮ 32-9-84-1 (ನೋಬಾಲ್-1), ವರುಣ್ ಆ್ಯರನ್ 28-4-106-3, ಪ್ರಗ್ಯಾನ್ ಓಜಾ 48-10-126-1, ರವಿಚಂದ್ರನ್ ಅಶ್ವಿನ್ 52.1-6-156-5, ವೀರೇಂದ್ರ ಸೆಹ್ವಾಗ್ 16-1-61-0 (ನೋಬಾಲ್-1), ವಿರಾಟ್ ಕೊಹ್ಲಿ 2-0-9-0, ಸಚಿನ್ ತೆಂಡೂಲ್ಕರ್ 6-0-24-0
ಭಾರತ: ಮೊದಲ ಇನಿಂಗ್ಸ್ 80 ಓವರುಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 281
ಗೌತಮ್ ಗಂಭೀರ್ ಸಿ ಕಾರ್ಲ್‌ಟನ್ ಬಾ ಬಿ ರವಿ ರಾಂಪಾಲ್  55
ವೀರೇಂದ್ರ ಸೆಹ್ವಾಗ್ ಬಿ ಡರೆನ್ ಸಾಮಿ  37
ರಾಹುಲ್ ದ್ರಾವಿಡ್ ಬಿ ಮರ್ಲಾನ್ ಸ್ಯಾಮುಯಲ್ಸ್  82
ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್  67
ವಿ.ವಿ.ಎಸ್.ಲಕ್ಷ್ಮಣ್ ಬ್ಯಾಟಿಂಗ್  32
ಇತರೆ: (ಬೈ-1, ವೈಡ್-3, ನೋಬಾಲ್-4) 08
ವಿಕೆಟ್ ಪತನ: 1-67 (ವೀರೇಂದ್ರ ಸೆಹ್ವಾಗ್; 14.3), 2-138 (ಗೌತಮ್    ಗಂಭೀರ್; 33.6), 3-224 (ರಾಹುಲ್ ದ್ರಾವಿಡ್; 60.5).
ಬೌಲಿಂಗ್: ಫಿಡೆಲ್ ಎಡ್ವರ್ಡ್ಸ್ 15-0-70-0 (ನೋಬಾಲ್-4), ರವಿ ರಾಂಪಾಲ್ 12-1-42-1 (ವೈಡ್-1), ಡರೆನ್ ಸಾಮಿ 22-3-67-1 (ವೈಡ್-2), ಮರ್ಲಾನ್ ಸ್ಯಾಮುಯಲ್ಸ್ 11-0-48-1, ದೇವೇಂದ್ರ ಬಿಶೂ 20-4-53-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT