ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಬ್ಯಾಟ್‌ ರೂ. 4.5 ಲಕ್ಷಕ್ಕೆ ಹರಾಜು

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಆಸ್ಟ್ರೇಲಿಯಾದಲ್ಲಿ 1985 ರಲ್ಲಿ ನಡೆದ ವಿಶ್ವ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದ ಎಲ್ಲ ತಂಡಗಳ ಆಟಗಾರರ ಸಹಿಯ­ನ್ನೊಳಗೊಂಡ ಬ್ಯಾಟ್‌ ಹರಾಜಿನಲ್ಲಿ ರೂ. 4.5 ಲಕ್ಷಕ್ಕೆ ಮಾರಾಟವಾಗಿದೆ.

ಈ ಬ್ಯಾಟ್‌ ಮಾಜಿ ಸ್ಪಿನ್ನರ್‌ ಎರಪ್ಪಳ್ಳಿ ಪ್ರಸನ್ನ ಅವರ ಸಂಗ್ರಹದಲ್ಲಿತ್ತು. ಸೆ. 13 ರಂದು ನಡೆದ ಹರಾಜಿನಲ್ಲಿ ಈ ಬ್ಯಾಟ್‌ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆ ಎಂದು ಹರಾಜು ನಡೆಸಿದ ‘ಓಸಿಯಾನ್‌’ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

1932 ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರರ ಛಾಯಾಚಿತ್ರಕ್ಕೆ ರೂ. 1.08 ಲಕ್ಷ ಲಭಿಸಿದೆ. ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ಮೊದಲ ನಾಯಕ ಸಿ.ಕೆ. ನಾಯ್ಡು ಅವರ ಸಹಿಯನ್ನು ಈ ಛಾಯಾಚಿತ್ರ ಒಳಗೊಂಡಿದೆ.

400ನೇ ಟೆಸ್ಟ್‌ ವಿಕೆಟ್‌ ಪಡೆದ ಸಂದರ್ಭ ಹರಭಜನ್‌ ಸಿಂಗ್‌ ಧರಿಸಿದ್ದ ಜರ್ಸಿ ರೂ. 2.16 ಲಕ್ಷಕ್ಕೆ ಮಾರಾಟ­ವಾಗಿದೆ. ಜರ್ಸಿ ಹರಭಜನ್‌ ಅವರ ಸಹಿಯನ್ನೂ ಒಳಗೊಂಡಿದೆ.

ವಿವಿಎಸ್‌ ಲಕ್ಷ್ಮಣ್‌ ಸಹಿ ಹೊಂದಿ­ರುವ ಗ್ಲೋವ್‌ ರೂ. 1.80 ಲಕ್ಷಕ್ಕೆ ಮಾರಾ­ಟ­ವಾಯಿತು. ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ 103 ರನ್‌ ಗಳಿಸಿದ್ದ ವೇಳೆ ಅವರು ಈ ಗ್ಲೋವ್‌ ಧರಿಸಿದ್ದರು.

ಮಾಜಿ ಆಟಗಾರರಾದ  ಗಾಯಕ್ವಾಡ್‌, ದಿಲೀಪ್‌ ಸರ್ದೇಸಾಯಿ ಅವರ ಸಹಿ ಹೊಂದಿರುವ ಕೆಲವು ಪರಿಕರಗಳೂ ಮಾರಾಟವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT